ನಗರದ ನಯನ ಸಭಾಂಗಣದಲ್ಲಿ ಭಾನುವಾರ ಸಂಜೆ ಹಸಿರುಭೂಮಿ ಸಾಂಸ್ಕೃತಿಕ ಟ್ರಸ್ಟ್ ನಿಂದ ನಡೆದ ಸಮಾರಂಭದಲ್ಲಿ “ಹಸಿರು ಸಿರಿ ಪ್ರಶಸ್ತಿ” ಯನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಿ ಗೌರವಿಸಲಾಯಿತು.
ಪ್ರಸಿದ್ಧ ಸಾಹಿತಿ ಹಾಗೂ ಅಂಕಣಕಾರಾದ ಎಸ್. ದಿವಾಕರ್ , ಸಂಘಟಕ ಹಾಗೂ ಪತ್ರಕರ್ತರಾದ ಜೀವನ್ಮುಖಿ ಸುರೇಶ್, ಚಲನಚಿತ್ರ ಹಾಸ್ಯ ನಟರಾದ ಶಿವರಾಜ್ ಕೆ.ಆರ್. ಪೇಟೆ ರವರು ೨೦೨೬ರ “ಹಸಿರು ಸಿರಿ ಪ್ರಶಸ್ತಿ” ಗೆ ಭಾಜನರಾಗಿದ್ದು, ಈ ಸಮಾರಂಭದಲ್ಲಿ ಅವರುಗಳಿಗೆ ಪ್ರಶಸ್ತಿ ಗೌರವ ನೀಡಿ ಸನ್ಮಾನಿಸಲಾಯಿತು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು. ಪ್ರಸಿದ್ಧ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ರವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಕೃತಿ ಚಿಂತಕರು ಹಾಗೂ ಪೊಲೀಸ್ ಉಪ ಮಹಾನಿರೀಕ್ಷಕರಾದ ಡಾ. ಎ.ಎನ್. ಪ್ರಕಾಶ್ ಗೌಡ ಐಪಿಎಸ್ ರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಳವಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ಕೆ. ಅನ್ನದಾನಿ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ರಘುನಂದನ ಉಪಸ್ಥಿತರಿದ್ದರು.


