ಸಂಗೀತ ವೇದಿಕೆಯ ಮೇಲೆ ತಬಲಾದ ಮೃದುವಾದ ನಾದ ಮೊಳಗಿದಾಗ, ನಾವು ಸಾಮಾನ್ಯವಾಗಿ ಕಲಾವಿದನ ಕೈಚಳಕವನ್ನು ಮೆಚ್ಚುತ್ತೇವೆ . ಆದರೆ ಆ ನಾದಕ್ಕೆ ಜೀವ ತುಂಬಿದ ಮೌನ ಶಿಲ್ಪಿಯನ್ನು ನಾವು ಎಷ್ಟು ಬಾರಿ ನೆನಪಿಸುತ್ತೇವೆ? ನಮ್ಮ ನಡುವೆಯೇ ಇದ್ದು, ನಾದವನ್ನು ರೂಪಿಸುವ ಸಾಧಕರಲ್ಲಿ ಒಬ್ಬರು
ಕರ್ನಾಟಕದ ಸಾಂಪ್ರದಾಯಿಕ ಸಂಗೀತ ಲೋಕದಲ್ಲಿ ತಬಲೆಯ ನಾದವು ಒಂದು ಜೀವಂತ ಶಕ್ತಿಯಂತೆ ಕೇಳಿಸುತ್ತದೆ. ಆ ನಾದದ ಹಿಂದೆ ಕಾಣದ ಕೈಗಳ ಶ್ರಮ, ಕೌಶಲ್ಯ ಮತ್ತು ಧ್ಯಾನ ಇರುತ್ತದೆ. ಅಂತಹ ಮೌನ ಶಿಲ್ಪಿಗಳಲ್ಲಿ ಒಬ್ಬರು ತಬಲಾ ತಯಾರಕ.
ನಾನು ನನ್ನಣ್ಣ ದಿವಾಕರ್ (ಅವರೂ ತಬಲಾ ಕಲಾವಿದರು) ಅವರ ಜೊತೆ ತಬಲಾ ರಿಪೇರಿಗೆಂದು ಆಗಾಗ ಇವರ ಅಂಗಡಿಗೆ ಭೇಟಿ ನೀಡುತ್ತಿದ್ದೆ, ಮಾತನಾಡುತ್ತಿದ್ದೆ. ಅವರ ಕಸುಬಿನ ಬಗ್ಗೆ. ಕೇಳಿ ತಿಳಿದಾಗ ನಿಜಕ್ಕೂ ಸಂತಸವಾಯಿತು. ಹಾಗಾಗಿ ಎಲೆಮರೆಕಾಯಿಯಂತೆ ತಮ್ಮ ಕಾಯಕದಲ್ಲಿ ಯಶಸ್ಸು ಸಾಧಿಸಿರುವ ಬಸವರಾಜು ಅವರ ಬಗ್ಗೆ ಈ ಕಿರು ಬರಹ ಬರೆಯುತ್ತಿದ್ದೇನೆ.
ಬಸವರಾಜು ಅವರ ಜೀವನವೇ ತಬಲಾದ ಸುತ್ತ ಹೆಣೆದ ಕಥೆ, ಬಾಲ್ಯದಲ್ಲೇ ತಂದೆಯವರಿಂದ ಕಲಿತ ಈ ವೃತ್ತಿ ಅವರಿಗೆ ಕೇವಲ ಉದ್ಯೋಗವಲ್ಲ, ಒಂದು ಆಧ್ಯಾತ್ಮಿಕ ಸಾಧನೆ. ಮರದ ತುಂಡು, ಚರ್ಮದ ತುತ್ತು, ಕಪ್ಪು ಶಾಯಿಯ ಮಿಶ್ರಣ-ಇವುಗಳೆಲ್ಲ ಅವರ ಕೈಯಲ್ಲಿ ನಾದಮಯವಾಗುತ್ತವೆ.
ಮೂಲತಃ ವಿಜಯಪುರ ತಾಲ್ಲೂಕಿನ ಕಲ್ಲೂರಿನಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಬಸವರಾಜು ಅವರು ನಗರದ ಬಸವೇಶ್ವರನಗರದ ಸಮೀಪದ ಶಿವನಹಳ್ಳಿಯಲ್ಲಿ ಪುಟ್ಟ ಅಂಗಡಿಯನ್ನು ಇಟ್ಟುಕೊಂಡು ಚರ್ಮ ವಾದ್ಯಗಳಿಗೆ ಜೀವ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಅವರ ಅಕ್ಷರ ಮ್ಯೂಸಿಕ್ ಅಂಗಡಿಗೆ ಭೇಟಿ ನೀಡಿದರೆ ನಿಜಕ್ಕೂ ಸಂತಸವಾಗುತ್ತದೆ. ಏಕೆಂದರೆ ಅದು ಚರ್ಮ ವಾದ್ಯಗಳು
ತಯಾರಾಗುವ ಸ್ಥಳವಾಗಿದೆ. ಅಂಗಡಿ ತುಂಬೆಲ್ಲಾ ತಬಲಾ, ಮೃದಂಗ, ವೀಣೆ, ಮುಂತಾದ ವಾದ್ಯಗಳ ಸಂಗ್ರಹವೇ ಆಗಿದೆ. ಜೋತೆಗೆ ಅಲ್ಲಿ ಗಾನಯೋಗಿ ಪಂಚಾಕ್ಷರಿ ಗವಾಯಿಯವರ ಭಾವಚಿತ್ರವನ್ನೂ ಬಸವರಾಜು ಇಟ್ಟು ಪೂಜಿಸುತ್ತಿದ್ದಾರೆ.
ಇವರು ಕೇವಲ ತಬಲಾ ತಯಾರಕರು ಅಲ್ಲ: ಪರಂಪರೆಯ ನಾದವನ್ನು ಹೊತ್ತೊಯ್ಯುವ ಸಂಸ್ಕೃತಿ ಸಂರಕ್ಷಕರು. ಮರದ ತುಂಡನ್ನು ನಾದಮಯವಾದ ವಾದ್ಯವಾಗಿ ರೂಪಿಸುವುದು ಕೇವಲ ಯಾಂತ್ರಿಕ ಕೌಶಲ್ಯವಲ್ಲ, ಅದು ಶ್ರದ್ದೆ. ಸಹನೆ ಮತ್ತು ಆಧ್ಯಾತ್ಮಿಕ ಮನೋಭಾವದ ಸಂಯೋಜನೆ.
ಅಲೆಮಾರಿ ಕುಟುಂಬದಿಂದ ಬಂದಿರುವ ಇವರಿಗೆ ತಮ್ಮ ವಂಶಪಾರಂಪರ್ಯವಾಗಿ ಈ ಕಲೆ ಕರಗತವಾಗಿ ಬಂದಿದೆ. ಬಸವರಾಜು ಅವರ ಉಳಿದ ಆರು ಜನ ಸಹೋದರರೂ ಸಹ ಇದೇ ವೃತ್ತಿಯನ್ನು ಮುಂದುರೆಸಿಕೊಂಡು ಬರುತ್ತಿದ್ದಾರೆ. ಇವರ ಅಣ್ಣ ಮಂಜುನಾಥ್ ಪ್ರಸಿದ್ದ ತಬಲಾ ವಾದಕ ಜಾಕೀರ್ ಹುಸೇನ್ ಅವರಿಗೆ ತಬಲಾ ತಯಾರು ಮ ಮಾಡಿಕೊಡುತ್ತಿದ್ದದ್ದು ವಿಶೇಷ ಸಂಗತಿ.
ಇನ್ನು ಬಸವರಾಜು ಸಹ ಈ ಕೆಲಸದಲ್ಲಿ ಬಹಳ ನಿಪುಣತೆ ಹೊಂದಿದ್ದು, ಹಲವಾರು ಪ್ರಸಿದ್ಧ ತಬಲಾವಾದಕರಿಗೆ ತಬಲಾ ತಯಾರು ಮಾಡಿಕೊಟ್ಟಿದ್ದಾರೆ. ಖ್ಯಾತ ತಬಲಾವಾದಕರಾದ ಅನಿಂದ ಚಟರ್ಜಿ, ಡಿ.ಚಂದ್ರಜಿತ್ ಮುಂತಾದರಿಗೆ ಇವರೇ ತಬಲಾ ತಯಾರು ಮಾಡಿಕೊಡೋದು.
ಮತ್ತೊಂದು ಕೂತೂಹಲ ಸಂಗತಿಯೆಂದರೆ ಬಸವರಾಜು ಅವರಿಗೆ ಒಂದು ಕಣ್ಣು ಕಾಣುವುದಿಲ್ಲ. ಅದು ಚಿಕ್ಕ ವಯಸ್ಸಿನಲ್ಲಿಯೇ ಹೋಗಿದೆಯಂತೆ. ಒಂದು ಕಣ್ಣಿಲ್ಲದಿದ್ದರೇನು ? ಅವರಿಗೆ ವಾದ್ಯಗಳ ಬಗ್ಗೆ ಇರುವ ಒಳಗಣ್ಣು ನಿಜಕ್ಕೂ ಆದ್ಭುತವೇ ಸರಿ.
ವಿಕಲಚೇತನತೆಯನ್ನು ಮೆಟ್ಟಿ ನಿಂತು, ಸರ್ಕಾರದ ಪಿಂಚಣಿಯನ್ನು ಕಾಯದೇ, ತನ್ನ ಕಾಯಕದಲ್ಲಿ ಗಟ್ಟಿಯಾಗಿ ತೊಡಗಿರುವ ಇವರ ಕಾಯಕ್ಷಮತೆಗೆ ಒಂದು ಸಲಾಮ್ ಹೇಳಲೇಬೇಕು. ಬಸವರಾಜು ಅವರಿಗೆ ಈ ಕೆಲಸದಲ್ಲಿ ಇವರ ಪತ್ನಿಯೂ ಸಹ ಸಾಥ್ ನೀಡುತ್ತಾ ಬಂದಿದ್ದಾರೆ.
ಚರ್ಮ ವಾದ್ಯಗಳ ತಯಾರಿಕೆ ಎಂದರೆ ಪ್ರಕೃತಿಯೊಂದಿಗೆ ಸಂವಾದ, ಗಟ್ಟಿಯಾದ ಮರದ ಆಯ್ಕೆ, ಸರಿಯಾದ ಚರ್ಮದ ಸಿದ್ಧತೆ. ಮಧ್ಯಭಾಗದ ಕಪ್ಪು ಕಾಯಿಯ ನಿಖರ ಮಿಶ್ರಣ-ಇವೆಲ್ಲವೂ ನಾದದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಒಂದು ಸಣ್ಣ ತಪ್ಪು ಕೂಡ ಸ್ವರದ ಸೌಂದರ್ಯವನ್ನು ಹಾಳು ಮಾಡಬಹುದು. ಆದ್ದರಿಂದ ಪ್ರತಿಯೊಂದು ಹಂತವೂ
ಧ್ಯಾನದಂತೆ ನಡೆಸಬೇಕಾಗುತ್ತದೆ. ತಬಲೆಯ ಮರದ ಬೊಕ್ಕಸವನ್ನು ತಿಂಗಳುಗಳ ಕಾಲ ಒಣಗಿಸಿ, ಒಳಹೊತ್ತನ್ನು ಸಮತಟ್ಟಾಗಿ ತೆಗೆಯುವುದು-ಇದು ಸಹನೆಯ ಪರೀಕ್ಷೆ, ಚರ್ಮವನ್ನು ನಿಖರವಾಗಿ ಕಟ್ಟಿ, ಸ್ವರಕ್ಕೆ ಹೊಂದಿಸುವ ಪ್ರಕ್ರಿಯೆ-ಇದು ಕಲೆ ಮತ್ತು ವಿಜ್ಞಾನದ ಸಂಗಮ. ತಯಾರಕನ ಕಿವಿ ಸೂಕ್ತವಾಗಿರಬೇಕು: ನಾದದ ಏರುಪೇರುಗಳನ್ನು
ಇಂದಿನ ಯುಗದಲ್ಲಿ ಕಾರ್ಖಾನೆ ಉತ್ಪನ್ನಗಳ ವೇಗ ಹೆಚ್ಚಾಗಿದೆ. ಆದರೆ ಕೈಕಲೆಯ ಸ್ಪರ್ಶದಿಂದ ಮೂಡುವ ನಾದಕ್ಕೆ ಪರ್ಯಾಯವೇ ಇಲ್ಲ. ಕಡಿಮೆ ಬೆಲೆಯ ಯಂತ್ರ ನಿರ್ಮಿತ ವಾದ್ಯಗಳು ಮಾರುಕಟ್ಟೆಯನ್ನು ಅವರಿಸುತ್ತಿರುವಾಗ, ಬಸವರಾಜು ಅವರಂತಹ ಶಿಲ್ಪಿಗಳು ತಮ್ಮ ನಿಷ್ಠೆಯನ್ನು ಕಾಪಾಡಿಕೊಂಡಿದ್ದಾರೆ. ಆದಾಯ ಕಡಿಮೆ ಇದ್ದರೂ, ಗುಣಮಟ್ಟದ ಮೇಲೆ ತಗ್ಗುವ ಪ್ರಶ್ನೆಯೇ ಇಲ್ಲವೆಂದು ಅವರು ದೃಢವಾಗಿ ಹೇಳುತ್ತಾರೆ. ಸಂಗೀತವನ್ನು ಮೆಚ್ಚುವ ಸಮಾಜವಾಗಿ, ನಾವು ವಾದಕರನ್ನು ಮಾತ್ರವಲ್ಲ, ವಾದ್ಯಗಳನ್ನು ರೂಪಿಸುವ ಕೈಗಳನ್ನೂ ಗೌರವಿಸಬೇಕು. ಚರ್ಮ ವಾದ್ಯಗಳ ತಯಾರಿಕೆ ಕೇವಲ ವೃತ್ತಿಯಲ್ಲ; ಅದು ಪರಂಪರೆಯ ರಕ್ಷಣೆ. ಈ ಕಲೆ ಉಳಿಯಬೇಕಾದರೆ, ಶಿಲ್ಪಿಗಳಿಗೆ ಪ್ರೋತ್ಸಾಹ, ತರಬೇತಿ ಕೇಂದ್ರಗಳು ಮತ್ತು ಸಮರ್ಪಕ ಮಾರುಕಟ್ಟೆ ಸೌಲಭ್ಯಗಳು ಆಗತ್ಯವಾಗಿವೆ. ಅಲ್ಲವೇ?
ತಬಲಾ ನಾದ ಕೇಳಿದಾಗ, ಆ ಧ್ವನಿಯ ಹಿಂದೆ ಇರುವ ಮೌನ ಸಾಧಕನನ್ನು ನೆನಪಿಸಿಕೊಳ್ಳುವ ಸಂಸ್ಕೃತಿ ನಮ್ಮದಾಗಲಿ, ನಾದವನ್ನು ರೂಪಿಸುವ ಕೈಗಳನ್ನು ಗೌರವಿಸುವುದು. ನಮ್ಮ ಸಂಗೀತ ಪರಂಪರೆಯನ್ನು ಗೌರವಿಸುವುದೇ ಆಗುತ್ತದೆ. ಬಸವರಾಜು ಹೇಳುವಂತೆ, ಈ ವೃತ್ತಿ ಶ್ರಮಪೂರ್ಣ, ದಿನವಿಡೀ ಚರ್ಮದ ಕೆಲಸ, ಮರದ ಧೂಳು, ನಾದದ ಸರಿಹೊಂದಿಸುವಿಕೆ-ಇವುಗಳೆಲ್ಲ ದೇಹವನ್ನು ಸುಸ್ತು ಮಾಡುತ್ತವೆ. ಆದರೆ ಒಂದು ಕಲಾವಿದ ತಬಲವನ್ನು ತಟ್ಟಿದಾಗ ಮೂಡುವ ಮಧುರನಾದವೇ ಅವರಿಗೆ ಬಹುಮಾನವಿದ್ದಂತೆ. ಅಲ್ಲವೇ? ಎನ್ನುತ್ತಾರೆ.
ಇಂದಿನ ಯಾಂತ್ರಿಕ ಯುಗದಲ್ಲಿ ಕೈಕಲೆ ಹಿಂಜರಿಯುತ್ತಿರುವ ಸಂದರ್ಭದಲ್ಲಿ, ಬಸವರಾಜು ಅವರಂತಹ ಶಿಲ್ಪಿಗಳು ನಮ್ಮ ಪರಂಪರೆಯ ಜೀವನಾಡಿ. ಅವರ ಕೈಗಳಲ್ಲಿ ತಬಲೆಯ ನಾದ ಮಾತ್ರವಲ್ಲ, ಸಂಸ್ಕೃತಿಯ ಧ್ವನಿಯೂ ಜೀವಂತವಾಗಿರುತ್ತದೆ. ಈ ನುಡಿಚಿತ್ರ ಕೇವಲ ಒಬ್ಬ ತಯಾರಕನ ಕಥೆಯಲ್ಲ; ಅದು ನಾದವನ್ನು ರೂಪಿಸುವ ಮೌನ ಸಾಧಕರಿಗೆ ಸಲ್ಲುವ ಗೌರವ. ಅವರ ಸಂಪರ್ಕದ ಮೊಬೈಲ್ ನಂ. 9980110514
ಚರ್ಮ ವಾದ್ಯಗಳ ತಯಾರಿಕೆ ಹೇಗೆ?
ಚರ್ಮ ವಾದ್ಯಗಳು ತಬಲಾ, ಮೃದಂಗ, ಡೊಳ್ಳು ಮುಂತಾದವು ಕೆಲವು ವಸ್ತುಗಳಿಂದ ನಿರ್ಮಾಣವಾಗುತ್ತವೆ. ಅವುಗಳ ತಯಾರಿಕೆಯಲ್ಲಿ ಹಲವಾರು ಹಂತಗಳಿವೆ:
1. ಸಾಮಾನ್ಯವಾಗಿ ಜಾಕ್ ಫ್ರಟ್ ಅಥವಾ ಶೀಷಮ್ ಮರ ಬಳಸಲಾಗುತ್ತದೆ. ಮರ ಗಟ್ಟಿಯಾಗಿರಬೇಕು. ಇಲ್ಲದಿರಬೇಕು. ಮರವನ್ನು ಒಣಗಿಸಿ ನಂತರವೇ ಕೊಡಲಾಗುತ್ತದೆ.
2.ಮೇಕೆ ಅಥವಾ ಹಸುವಿನ ಚರ್ಮವನ್ನು ಆಯ್ದು, ಅದನ್ನು ಚೆನ್ನಾಗಿ ಶುದ್ಧಗೊಳಿಸಿ, ಸೂರ್ಯನ ಬೆಳಕಿನಲ್ಲಿ ಒಣಗಿಸಲಾಗುತ್ತದೆ. ಸರಿಯಾದ ದಪ್ಪ, ಲವಚಿಕತೆ-ಇವು ನಾದದ ಗುಣಮಟ್ಟವನ್ನು ನಿರ್ಧರಿಸುತ್ತವೆ.
3. ತಬಲಾದ ಮಧ್ಯದಲ್ಲಿರುವ ಕಪ್ಪು ವೃತ್ತವೇ ಅದರ ಆತ್ಮ. ಅಕ್ಕಿ ಹಿಟ್ಟು, ಲೋಹದ ಪುಡಿ ಮತ್ತು ಕೆಲವು ಗುಪ್ತ ಮಿಶ್ರಣಗಳಿಂದ ತಯಾರಾಗುವ ಈ ಭಾಗವು ನಾದದ ಸ್ಪಷ್ಟತೆ ಮತ್ತು ಗಂಭೀರತೆಯನ್ನು ನೀಡುತ್ತದೆ.
4. ಚರ್ಮವನ್ನು ಮರದ ಭಾಗಕ್ಕೆ ನಿಖರವಾಗಿ ಕಟಿ, ಹಗ್ಗಗಳ ಮೂಲಕ ಬಿಗಿಗೊಳಿಸಲಾಗುತ್ತದೆ..
– ಮಂಜುನಾಥ್ ದಂಡಿನಶಿವರ

