ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ದಾರಿಬುತ್ತಿ ಬಳಗದ ಮಕ್ಕಳಿಂದ ‘ಹೂಮಿಂಚು’ ಕೃತಿ ಲೋಕಾರ್ಪಣೆ

Posted on June 14, 2026June 14, 2026 by suddisangathi

ಕ್ರೌರ್ಯ ಮತ್ತು ದೌರ್ಜನ್ಯವನ್ನು ಪ್ರೀತಿ ಹಂಚುವ ಮೂಲಕ ಶಮನ ಮಾಡಬೇಕು: ಬಾ.ಹ.ರಮಾಕುಮಾರಿ

 

ವರದಿ: ಹಡವನಹಳ್ಳಿ ವೀರಣ್ಣಗೌಡ

ತುಮಕೂರು:  ಕವಿ ರಂಗಮ್ಮ ಹೊದೇಕಲ್  ಅವರ “ಹೂಮಿಂಚು” ಕೃತಿ  ನಗರದ  ವಿಶ್ವ ವಿದ್ಯಾನಿಲಯದ ಆವರಣದಲ್ಲಿರುವ ರಮಣ ಮಹರ್ಷಿ ಉದ್ಯಾನ ವನದಲ್ಲಿ  ಇಂದು ಲೋಕಾರ್ಪಣೆಗೊಂಡಿತು. ದಾರಿಬುತ್ತಿ ಬಳಗದ ಮಕ್ಕಳಿಂದ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು  ವಿಶೇಷವಾಗಿತ್ತು. ಪ್ರತಿ ಕಾರ್ಯಕ್ರಮದಲ್ಲೂ ಒಂದೊಂದು ವಿನೂತನ ಸನ್ನಿವೇಶಗಳನ್ನು ಕಟ್ಟಿಕೊಡುವಲ್ಲಿ ದಾರಿಬುತ್ತಿಯ ಒಡನಾಡಿಗಳ ಕ್ರಿಯಾಶೀಲತೆಗೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೇಖಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಬಾ.ಹ.ರಮಾಕುಮಾರಿ,  ಹೂವು ಅರಳುವಾಗ ಅದಕ್ಕಾಗುವ ಸಂಕಟಗಳ ಬಗ್ಗೆ ನಾವ್ಯಾರೂ ಯೋಚಿಸುವುದಿಲ್ಲ. ಹೂವನ್ನು ತುಳಿಯುವುದು ಹೆಣ್ಣನ್ನು ತುಳಿಯುವುದಕ್ಕೆ ಸಮ. ಹೂವಿನ ಬಗ್ಗೆ ಯಾರೂ ಕ್ರೌರ್ಯವನ್ನು ತೋರುವುದಿಲ್ಲ ಹಾಗೆಯೆ ನಾವು ಕೂಡ ಎಲ್ಲರೊಂದಿಗೂ ಹೂವಾಗಬೇಕು. ನಾವು ಪ್ರೀತಿಯನ್ನು ಹಂಚುತ್ತೇವೆ ಎನ್ನುತ್ತಿದ್ದೇವೆ ಆದರೂ ಜಗತ್ತು ಪ್ರೀತಿಯ ಕೊರತೆಯಲ್ಲಿಯೆ ಸೊರಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹೂಮನಸ್ಸಿನ ಕವಿ ರಂಗಮ್ಮ ಹೊದೇಕಲ್ ಅವರ ಹೂಮಿಂಚಿನಂತಹ ಕೃತಿಗಳು ಈ ಅಂತರವನ್ನು ತಗ್ಗಿಸಲಿ. ಪ್ರೀತಿಯನ್ನು ಹಂಬಲಿಸುವವರಿಗೆ ಪ್ರೀತಿಯನ್ನು ಕೊಡುವ ಕೆಲಸವನ್ನು ದಾರಿಬುತ್ತಿ ಬಳಗ ಮಾಡಲಿ. ಜೊತೆಗೆ ಸಮಾಜ ಮತ್ತು ಕುಟುಂಬದೊಳಗಿನ ದೌರ್ಜನ್ಯವನ್ನು ಪ್ರೀತಿ ಹಂಚುವ ಮೂಲಕ ಶಮನ ಮಾಡಬೇಕು ಎಂದ ಅವರು,   ಈ ದಿನಗಳಲ್ಲಿ ಪುಸ್ತಗಳು ಬಿಡುಗಡೆಯಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕೆ ತಕ್ಕಂತೆ ಓದುಗರು ಹೆಚ್ಚಾಗಬೇಕು. ಸಾಹಿತ್ಯ ಓದು ಪ್ರೀತಿ,ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಇಂತಹ ಪ್ರೀತಿ ಹಂಚುವ ಕಾರ್ಯಕ್ರಮಗಳು  ಸಮಾಜದಲ್ಲಿ  ಹೆಚ್ಚುಹೆಚ್ಚು ನೆಡೆಯಲಿ ಎಂದು ತಿಳಿಸಿದರು.

ಸಾಹಿತಿ ಧನಪಾಲ್ ನಾಗರಾಜಪ್ಪ ಹೂಮಿಂಚು ಕೃತಿಯನ್ನು  ಲೋಕಾರ್ಪಣೆ ಮಾಡಿ, ಕೃತಿಯನ್ನು ಪರಿಚಯಿಸುತ್ತಾ,   ಮನಸ್ಸುಗಳನ್ನು ಬೆಸೆಯುವ ಪುಸ್ತಕದ ಸಾಲುಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ. ಹೂವುಗಳು ಎಲ್ಲಾ ಸಂದರ್ಭಗಳಲ್ಲು ತಮ್ಮ ಸೌಂದರ್ಯವನ್ನು ಬೀರುತ್ತವೆಯೊ ಹಾಗೆ ಈ ಪುಸ್ತಕವಿದೆ. ನಾವೀಗ ಪ್ರಶ್ನಿಸುವದೇ  ಅಪರಾಧವೇನೊ?  ಎನ್ನುವ ಭಯ ನಮ್ಮನ್ನು ಕಾಡುತ್ತಿದೆ. ಪ್ರಶ್ನೆಗಳಿದ್ದಾಗಲಿ ನಾವು ಜೀವಂತವಾಗಿದ್ದೇವೆ ಎನ್ನುವುದು ಸಾಭೀತಾಗುತ್ತದೆ ಹಾಗಾಗಿ ನಮ್ಮಲ್ಲಿ ಪ್ರಶ್ನಿಸುವ ಮನಸ್ಥಿತಿ ಗಟ್ಟಿಯಾಗಬೇಕು ಎಂದ ಅವರು, .ರಂಗಮ್ಮನವರ ಹೂಮಿಂಚು ಅಂತಹ ಆತ್ಮಸ್ಥೈರ್ಯ ನೀಡುತ್ತದೆ ಎಂದು ಹೇಳಿದರು.

ಸಭೆಯಲ್ಲಿ  ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಆಶಾರಾಣಿ ಬಗ್ಗನಡು ಅವರು ಮಾತನಾಡುತ್ತಾ,  ರಂಗಮ್ಮ ಹೊದೇಕಲ್ ಒಬ್ಬ ವಿಶಿಷ್ಟ ಕವಿ. ಇವರು ಕಾಡುವ ಕವಿತೆಗಳನ್ನು ಕಟ್ಟುವಲ್ಲಿ ನಿಷ್ಣಾತರು. ಅವರ ಕವಿತೆಗಳನ್ನು ಓದಿದಂತೆ ಇವು ನಮ್ಮವೆ ಎನಿಸುವಷ್ಟು ಆಪ್ತವಾಗಿವೆ. ಈ ಹೂಮಿಂಚು ಕೃತಿಯ ವಿಚಾರಗಳು ಕೂಡ ನಮ್ಮನ್ನು ಆಪ್ತವಾಗುತ್ತವೆ ಎಂಬ ಆಶಯವನ್ನು ಹಂಚಿಕೊಂಡರು.

ಕೃತಿಯ ಕರ್ತೃ ರಂಗಮ್ಮ ಹೊದೇಕಲ್ ಅವರು ಹೂವುಗಳನ್ನು ಪೋಣಿಸಿ ಹೂಮಿಂಚನ್ನು ಕಟ್ಟಿದ ದಾರಿಯನ್ನು ವಿವರಿಸಿದರು. ಇದರ ಹಿಂದಿನ ಸಹಾಯದ ಕೈಗಳನ್ನು ನೆನಸುತ್ತ ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ದಾರಿಬುತ್ತಿ ಬಳಗದ ದರ್ಶನ್ ಹಾದಿಗುಂಟ ಹೂವ ಚಲ್ಲಿ ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಮಾದ್ಯಮದಲ್ಲಿ ಪ್ರಸಾರವಾದದು ಹಾಗೂ ಅದು ಹೂಮಿಂಚು ಪುಸ್ತಕವಾಗಿ ರೂಪಗೊಂಡ ಬಗ್ಗೆ ತಿಳಿಸಿದರು.

ಕೆ.ವಿ.ವಿವೇಕ ನಿರೂಪಣೆ ಮಾಡಿದರು. ದಾದಪೀರ್ ಸ್ವಾಗತಿಸಿದರೆ, ದರ್ಶನ್ ಕವಿತೆಯನ್ನು ಹಾಡಿದರು ಹಾಗೂ ನವೀನ್ ವಂದಿಸಿದರು. ಲೇಖಕಿಯರಾದ ಇಂದ್ರಮ್ಮ, ಡಾ.ಹೆಚ್.ಸಿ.ಭವ್ಯ, ಶಾರದಾಂಬ ಟ್ರಸ್ಟ್ ನ ಯಶೋದ, ಅಂಗಳ ಕಮ್ಯುನಿಟಿ ಟ್ರಸ್ಟ್ ನ ವರುಣ್ ಉಪಸ್ಥಿದ್ದರು. ಹಾಗೂ ಹಲವು ಮಂದಿ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb