ಬೆಂಗಳೂರು: ಸ್ನೇಹವೆಂಬುದು ಕೇವಲ ಜೊತೆಯಾಗಿ ನಿಲ್ಲುವುದಲ್ಲ; ಸಂದರ್ಭ ಕಳೆದರೂ ಆತ್ಮೀಯತೆಯನ್ನು ಮರೆಯದೆ, ಪ್ರೀತಿಯಿಂದ ನೆನಪಿಸಿಕೊಳ್ಳುವುದೇ ನಿಜವಾದ ಸ್ನೇಹ ಎಂಬುದಕ್ಕೆ ಇತ್ತೀಚೆಗೆ ನಡೆದ ಆತ್ಮೀಯ ಕಾರ್ಯಕ್ರಮವೊಂದು ಸಾಕ್ಷಿಯಾಯಿತು.
ಹಿರಿಯ ಸಂಘಟಕರಾದ ಜೀವನ್ಮುಖಿ ಸುರೇಶ್ ಅವರು ತಮ್ಮ ಮನೆಗೆ ಆತ್ಮೀಯ ಗೆಳೆಯರನ್ನು ಆಹ್ವಾನಿಸಿದ್ದ ಸಂದರ್ಭದಲ್ಲಿ, ಪತ್ರಕರ್ತ ಮಂಜುನಾಥ್ ದಂಡಿನಶಿವರ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ಈ ಹಿಂದೆ ನಡೆದ ಅವರ 50ನೇ ಹುಟ್ಟುಹಬ್ಬಕ್ಕೆ ಕಾರ್ಯನಿಮಿತ್ಯ ಸುರೇಶ್ ಅವರು ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ, ಆ ಕೊರತೆಯನ್ನು ನಿನ್ನೆ ಅತ್ಯಂತ ಆತ್ಮೀಯವಾಗಿ ತುಂಬಿಕೊಟ್ಟರು.
ಮಂಜುನಾಥ್ ಅವರ 50ನೇ ಹುಟ್ಟುಹಬ್ಬದ ನೆನಪಿಗಾಗಿ ವಿಶೇಷವಾಗಿ ಸುಂದರವಾದ ಫಲಕವೊಂದನ್ನು ರೂಪಿಸಿ, ಅದನ್ನು ಪ್ರೀತಿಯಿಂದ ನೀಡಿ ಗೌರವಿಸಿದ ಸುರೇಶ್ ಅವರ ನಡೆಗೆ ಮಂಜುನಾಥ್ ಅವರು ಸಂತಸ ವ್ಯಕ್ತಪಡಿಸಿದರು. ಇನ್ನೊಂದು ವಿಶೇಷವೆಂದರೆ, ಈ ಆತ್ಮೀಯ ಕ್ಷಣ ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ದಿನದಂದು ನಡೆಯಿತು. ಹೊರಗೆ ತುಂತುರು ಮಳೆಯೊಂದಿಗೆ ತಂಪಾದ ವಾತಾವರಣವೂ ಇದ್ದು, ಸ್ನೇಹಿತರ ಆತ್ಮೀಯ ಭೇಟಿ ಹಾಗೂ ಗೌರವದ ಕ್ಷಣಕ್ಕೆ ಮತ್ತಷ್ಟು ಮೆರುಗು ನೀಡಿತು
.ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್, “ಹುಟ್ಟುಹಬ್ಬದ ಸಂದರ್ಭದಲ್ಲಿ ದೊರೆಯುವ ಉಡುಗೊರೆಗಳಿಗಿಂತ, ನಮ್ಮನ್ನು ಪ್ರೀತಿಯಿಂದ ನೆನಪಿಸಿಕೊಂಡು ನೀಡುವ ಗೌರವವೇ ಹೆಚ್ಚು ಅಮೂಲ್ಯ. ತಡವಾದರೂ ನನ್ನ 50ನೇ ಹುಟ್ಟುಹಬ್ಬವನ್ನು ನೆನಪಿಸಿಕೊಂಡು ಇಷ್ಟು ಸುಂದರವಾದ ಫಲಕವನ್ನು ನೀಡಿ ಗೌರವಿಸಿರುವ ಜೀವನ್ಮುಖಿ ಸುರೇಶ್ ಅವರ ಪ್ರೀತಿಗೆ ನಾನು ಹೃದಯಪೂರ್ವಕವಾಗಿ ಅಭಾರಿಯಾಗಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗೋಪಿಕಾ ಪ್ರಕಾಶನದ ಸಿದ್ದೇಶ್, ಜನಮನ ಸೇವಾ ಟ್ರಸ್ಟ್ನ ಡಿ.ಟಿ.ಗೋವಿಂದರಾಜು ಮುಂತಾದವರು ಹಾಜರಿದ್ದರು.
