ಸಂಡೂರು ತಾಲೂಕಿನ ಯಶವಂತನಗರ-ಸೋಮಲಾಪುರ ಗ್ರಾಮದಲ್ಲಿ ಸ್ಥಾಪನೆಯಾಗುತ್ತಿರುವ ಪೆಲೆಟ್ ಉದ್ದಿಮೆಗೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಜನಸಂಗ್ರಾಮ ಪರಿಷತ್ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಯಶವಂತನಗರ ದಿಂದ ಸಂಡೂರು ತಹಶೀಲ್ದಾರರ ಕಚೇರಿಗೆ ಎತ್ತುಬಂಡಿ-ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಇಂದು 16.6.2026 ಪಟ್ಟಣದ APMC ಯಿಂದ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಹೋರಾಟದಲ್ಲಿ ಹಲವು ಗ್ರಾಮಗಳ ರೈತ ಮಹಿಳೆಯರು,ರೈತರು ಭಾಗವಹಿಸಿದ್ದರು.
ಈಗಾಗಲೆ ಪೆಲೆಟ್ ಉದ್ದಿಮೆಗಳು ಕಾರ್ಯಾಚರಣೆ ಹಂತದಲ್ಲಿದ್ದರೂ ಅನಗತ್ಯವಾಗಿ KIADB ಮೂಲಕ ರೈತರ ಒಪ್ಪಿಗೆ ಇಲ್ಲದೇ ಇದ್ದರೂ ಭೂಸ್ವಾಧೀನ ಪ್ರಕ್ರಿಯೆ ಕೈಗೆತ್ತಿಕೊಂಡಿರುವ ಸರ್ಕಾರದ ನೀತಿ ವಿರುದ್ದ ರೈತರು ಸಂಘಟಿತ ಹೋರಾಟವನ್ನು ಸಂಕಲ್ವದಿಂದ ಮಾಡಿದರೆ ಮಾತ್ರ ರೈತರ ಭೂಮಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ರೈತ ಸಂಘಟನೆಯ ರಾಜ್ಯಾಧ್ಯಕ್ಷರಾದ ಕರೂರು ಮಾಧವರೆಡ್ಡಿ ಇವರುಅಭಿಪ್ರಾಯಪಟ್ಟರು.
KIADB ಭೂಸ್ವಾಧೀನ ನೋಟಿಫಿಕೇಷನ್ ಪ್ರಶ್ನಿಸಿ ರೈತರು ಹೈಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದು ನ್ಯಾಯಾಲಯವು ರೈತರ ಪರವಾಗಿ ಆದೇಶ ನೀಡುವುದರ ಜೊತೆಗೆ ಪಹಣಿಗಳಲ್ಲಿ ರೈತರ ಹೆಸರನ್ನು ಸೇರ್ಪಡೆ ಮಾಡಲು ಆದೇಶಿಸಿದ್ದು ಕೂಡಲೆ ರೈತರ ಹೆಸರನ್ನು ಸೇರಿಸುವಂತೆ ಕಂದಾಯ ಅಧಿಕಾರಿಗಳಿಗೆ ಒತ್ತಾಯಿಸಿದರು ವಕೀಲರೂ ಜನಸಂಗ್ರಾಮ ಪರಿಷತ್ ನ ರಾಜ್ಯಾಧ್ಯಕ್ಷರಾದ ಟಿ.ಎಂ.ಶಿವಕುಮಾರ್ ಆಗ್ರಹಿಸಿದರು.
ಉದ್ದಿಮೆದಾರರು ರೈತರಲ್ಲಿ ಒಡಕು ಮೂಡಿಸಿ ಹೆಚ್ಚಿನ ಹಣದ ಅಮೀಷವನ್ನೊಡ್ಡಿ ಜಮೀನುಗಳನ್ನು ಖರೀದಿಸುವ ತಂತ್ರಗಳಿಂದ ಎಚ್ಚರಿಕೆಯಿಂದ ಇರಬೇಕು ಉದ್ದಿಮೆದಾರರು ತಮ್ಮ ಪರವಾಗಿ ಹೋರಾಟ ಮಾಡಲು ಕೆಲವು ಸಂಘ ಸಂಸ್ಥೆಗಳನ್ನು ಏಜೆಂಟರಂತೆ ಬಳಕೆ ಮಾಡಿಕೊಂಡಿರುವ ಕರಾಳ ಇತಿಹಾಸ ಸಂಡೂರಿಗೆ ಇರುವುದರಿಂದ ಸಾಕಷ್ಟು ಜಾಗೃತಿಯಿಂದಿರಲು ಜಸಂಪ ಸಂಘಟನೆಯ ಶ್ರೀಶೈಲ ಆಲದಳ್ಳಿ ತಿಳಿಸಿದರು.
ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಉದ್ದಿಮೆಗಳಿಗೆ ನೀಡದಂತೆ ಹಾಗು ಹಾಲಿ ರೈತರು ರಸಗೊಬ್ಬರ, ವಿದ್ಯುತ್ ಅಭಾವ ವಿದ್ಯುತ್ ಕ್ಷೇತ್ರ ಖಾಸಗೀಕರಣದಿಂದ ಅನುಭವಿಸಹುದಾದ ಸಂಕಷ್ಟ ಪಟ್ಟ ಹೊಂದಿರುವ ರೈತರ ಜಮೀನುಗಳನ್ನು “ಬ”ಖರಾಬು ಎಂದು ನಮೂದಿಸಿರುವುದನ್ನು ರೈತ ಸಂಘದ ಎಂ.ಎಲ್ ಕೆ ನಾಯ್ಡು ಖಂಡಿಸಿದರು.
KIADB ಯು ಉದ್ದಿಮೆದಾರರ ಏಜೆಂಟರಂತೆ ವರ್ತನೆ ಮಾಡಿ ರೈತರ ಒಪ್ಪಿಗೆ ಇಲ್ಲದಿದ್ದರೂ ಬಲವಂತವಾಗಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಮಾಡುತ್ತಿರುವುದು ರೈತರ ಆತ್ಮಸಾಕ್ಷಿ ವಿರುದ್ದವಾಗಿದೆಯೆಂದು KRS ಪಕ್ಷದ ತಾಲೂಕು ಅಧ್ಯಕ್ಷ ಖಾದರ್ ಭಾಷ ಅನ್ಯಾಯದ ಭೂಸ್ವಾಧೀನ ವಿರುದ್ದದ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದರು
ರೈತರ ಹಕ್ಕೊತ್ತಾಯುದ ಅಂಶಗಳ ಜೊತೆಗೆ ಪಹಣಿ ಇರುವ ರೈತರಿಗೆ ಮಾತ್ರ FID ಮೂಲಕ ಯೂರಿಯ ಸೇರಿದಂತೆ ಉಳಿದ ರಸಾಯನಿಕ ಗೊಬ್ಬರವನ್ನು ನೀಡುತ್ತಿದ್ದು ಹಾಲಿ 8000 ಎಕರೆಯಲ್ಲಿ ಅರಣ್ಯ,ಬ ಖರಾಬು ಜಮೀನುಗಳಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿರುವ FID ಇಲ್ಲದಂತಹ ರೈತರಿಗೂ ರಸಗೊಬ್ಬರ ನೀಡಲು ಕ್ರಮ ಜರುಗಿಸುವಂತೆ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಮೇಟಿ ಇವರು ಆಗ್ರಹಿಸಿದರು, ರೈತ ಮಹಿಳಾ ಹೋರಾಟಗಾರರು ತಹಶೀಲ್ದಾರರಿಗೆ ಹಕ್ಕೊತ್ತಾಯದ ಪತ್ರವನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಜಸಂಪದ ಈರಣ್ಣ ಮೂಲೀಮನಿ,ನಾಗರಾಜ್ ಎನ್.ನಿಂಗರಾಜ್, KRS ನ ಮಂಜುನಾಥ ಗೌಳಿ, ಮಹೇಶ, ಶಿವಕುಮಾರ, ಮೌನೇಶ, ಕಾಡಪ್ಪ, ಪರಮೇಶಿ, ಮಂಜುನಾಥ, ವಿರುಪಾಕ್ಷಿ, ಷಣ್ಮುಖಪ್ಪ, ಮೆಹಬೂಬ್ಬಾಷ ಸೇರಿಂದತೆ ಗಣಿಭಾಧಿತ ಗ್ರಾಮಗಳ ರೈತರು ಕಾರ್ಮಿಕರು ಇದ್ದರು.

