
ವರದಿ: ಕೆಆರ್ಎಸ್ ಶ್ರೀನಿವಾಸ್ ರೆಡ್ಡಿ ಬಳ್ಳಾರಿ
ಬೆಂಗಳೂರು : ರಸಗೊಬ್ಬರ ಅಕ್ರಮ ಮತ್ತು ಮೋಸದ ವಿರುದ್ಧ ಹೋರಾಟದ ಭಾಗವಾಗಿ ಕೆಆರ್ಎಸ್ ಪಕ್ಷ ಹಾಗೂ ಕರ್ಣಾಟ ರೈತ ಸಹಾಯ ಎಫ್ಪಿಓ ಜಂಟಿಯಾಗಿ ಇವತ್ತು ಕೃಷಿ ಕಮಿಷನರ್ ಕಚೇರಿಯಲ್ಲಿ ಲೈವ್ ಅಭಿಯಾನ ನಡೆಸಿ ರೈತರಿಗೆ ಆಗುತ್ತಿರುವ ರಸಗೊಬ್ಬರ ಅಕ್ರಮ ನಿಲ್ಲಿಸುವಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಹೊಸದಾಗಿ ವರ್ಗಾವಣೆ ಆಗಿ ಬಂದಿರುವ ಕೃಷಿ ಆಯುಕ್ತರಾದ ಡಾ. ಸತೀಶ್ ಬಿ ಸಿ. ಯವರು ಎಂಆರ್ಪಿ ಮೇಲೆ ಮಾರಾಟ ಮಾಡುವ ರಸಗೊಬ್ಬರ ಡೀಲರ್ ಗಳು ಹಾಗೂ ಕಂಪನಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.
ಕರ್ಣಾಟ ರೈತ ಸಹಾಯ ಎಫ್ಪಿಓ ರವರು ಇವತ್ತು ಮಾರಾಟ ಮಹಾಮಂಡಳಿ ಯಿಂದ ಯೂರಿಯಾ ರಸಗೊಬ್ಬರವನ್ನು ತಮ್ಮ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ತಮ್ಮ ಮಳಿಗೆಗೆ ತರಿಸಿದ್ದಾಗ ವಿಧಿಸಿದ್ದ ದರ ಹಾಗೂ ಟ್ರಾನ್ಸ್ಪೋರ್ಟ್ ವೆಚ್ಚ ಸೇರಿಸಿದಾಗ ಅದು ಸುಮಾರು 282 ರೂ ಪ್ರತಿ ಚೀಲ ಆಗುತ್ತಿದ್ದು, ಆದರೆ ಎಂಆರ್ಪಿ ದರ 266.5 ಇರುವುದರಿಂದ ಎಂಆರ್ಪಿ ಬೆಲೆಗಿಂತ ಹೆಚ್ಚಿಗೆ ಮಾರುವ ಪರಿಸ್ಥಿತಿ ಉಂಟಾಗಿರುವುದನ್ನು ಫೇಸ್ಬುಕ್ ಲೈವ್ ಮೂಲಕ ಶಿಗಾವಿಯಿಂದ ಕೃಷಿ ಆಯುಕ್ತರ ಕಚೇರಿಗೆ ಸಂಪರ್ಕ ಸಾಧಿಸಿ ಅದನ್ನು ಯೂರಿಯಾ ದರವನ್ನು ಸರ್ಕಾರಿ ಆದೇಶದ ಪ್ರಕಾರ ರೀಟೇಲರ್ ಮಾರ್ಜಿನ್ ಸಿಗುವ ಹಾಗೆ ಸರ್ಕಾರಿ ಎಂಆರ್ಪಿ ದರಕ್ಕಿಂತ ಕಡಿಮೆ ದರಕ್ಕೆ ಮಾಡಿಕೊಡಲು ನಿರ್ದೇಶನ ನೀಡಿರುತ್ತಾರೆ. ಇದರಿಂದ ಮಾರ್ಕೆಟ್ ಫೆಡರೇಶನ್ ರವರು ತಮ್ಮಲ್ಲಿರುವ ರಸಗೊಬ್ಬರ ದಾಸ್ತಾನಿನಿಂದ ರಸಗೊಬ್ಬರ ಸಾಗಿಸುವಾಗ ಎಲ್ಲ ವೆಚ್ಚಗಳನ್ನು ತಾವೇ ಭರಿಸುವಂತೆ ಆಗಿರುತ್ತದೆ. ಇದರಂತೆ ಎಲ್ಲಾ ರೀಟೇಲರ್ ಗಳು ರಸಗೊಬ್ಬರವನ್ನುಎಂಆರ್ಪಿ ದರಕ್ಕೆ ಮಾರಾಟ ಮಾಡಿದರೂ ಅವರಿಗೆ ಕನಿಷ್ಠ 5% ವರೆಗೆ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಚಿಲ್ಲರೆ ಮಾರಾಟಗಾರರು ಎಂಆರ್ಪಿ ದರಕ್ಕಿಂತ ಮೇಲೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದ್ದು ಅದನ್ನು ಅವರೂ ಕೂಡಾ ಪ್ರಶ್ನೆ ಮಾಡಿ ತಮ್ಮ ಹಕ್ಕನ್ನು ಪಡೆಯಬೇಕು. ಅದಕ್ಕಾಗಿ ಕೆಆರ್ಎಸ್ ಪಕ್ಷ ಎಲ್ಲ ಮಾರಾಟಗಾರ ಜೊತೆ ನಿಂತು ಅವರಿಗೆ ಬೆಂಬಲ ಸೂಚಿಸುತ್ತದೆ. ರಾಜ್ಯದ ರೈತರಿಗೆ ಮತ್ತು ರಸಗೊಬ್ಬರ ಮಾರಾಟಗಾರಿಗೆ ಆಗುತ್ತಿರುವ ಈ ಮೋಸವನ್ನು ತಡೆಯಲು ಎಲ್ಲರೂ ಕೈಜೋಡಿಸಬೇಕೆಂದು ಈ ಮೂಲಕ ಕೆಆರ್ಎಸ್ ಪಕ್ಷ ಆಗ್ರಹಿಸುತ್ತದೆ.
ರೈತರು ತಮಗೆ ಮೋಸ ಆಗುವುದನ್ನು ದೂರು ನೀಡಲು ಕೆಆರ್ಎಸ್ ಪಕ್ಷದ ಸಹಾಯವಾಣಿ 7349577130 ಗೆ ಕರೆ ಮಾಡಿ ತಿಳಿಸಿದಲ್ಲಿ ಅವರಿಗೆ ಸಹಾಯ ಮಾಡಲಾಗುವುದು.

