
ಸುದ್ದಿಸಂಗಾತಿ ನ್ಯೂಸ್
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಆವರಣದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಕಮಿಟಿಯ ರಾಜ್ಯ ಅಧ್ಯಕ್ಷರಾದಂತಹ ಬಿಕೆ ಹರಿಪ್ರಸಾದ್ ರವರನ್ನು ಭೇಟಿ ಮಾಡಿ ಸಂವಿಧಾನ ಸಾರ್ಥಕತೆ ಮತ್ತು ಪ್ರಜಾಸತಾತ್ಮಕ ಆಶಯಗಳನ್ನು ಒಳಗೊಂಡ, ಸಂವಿಧಾನದ ಬದ್ಧತೆ ಸಾರುವ ಸಂವಿಧಾನದ ಪೀಠಿಕೆಯನ್ನು ಕೊಡುಗೆಯಾಗಿ ನೀಡುವುದರ ಮುಖಾಂತರ ಬೆಂಗಳೂರು ವಿಶ್ವವಿದ್ಯಾಲಯದ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯದ ಆವರಣಕ್ಕೆ ಆಗಮಿಸುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಇಂದಿನ ಯುವಕರ ಮುಂದಿನ ಭವಿಷ್ಯ ಹಾಗೂ ಯುವಕರ ನಿರುದ್ಯೋಗ ಸಮಸ್ಯೆ ಕಾಡುತ್ತಿರುವುರ ಜೊತೆಗೆ ಅಭದ್ರತೆಯಲ್ಲಿ ನರಳುತ್ತಿರುವ ವಿದ್ಯಾವಂತರು ಮುಂದಿನ ದಿನಗಳು ಬಹಳ ಕಷ್ಟದಿಂದ ಕೂಡಿದ್ದು ಈ ಎಲ್ಲಾ ವಿಷಯಗಳನ್ನು ಕುರಿತು ಚರ್ಚಿಸಿ ಅವರೊಡನೆ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಯಿತು
ರವಿಕಾಂತ್ ಗೌರವ ಸಲಹೆಗಾರರು, ಪ್ರಶಾಂತ್ M T ಅಧ್ಯಕ್ಷರು, ಶೇಷಾದ್ರಿ G C ಗೌರವ ಅಧ್ಯಕ್ಷರು, ಉಪಾಧ್ಯಕ್ಷ ಅನಿಲ್ ಕುಮಾರ್,ಪ್ರಧಾನ ಕಾರ್ಯದರ್ಶಿ ಬಸವರಾಜು , ಸದಸ್ಯರಾದ ಸುನಿಲ್, ಪ್ರಜ್ವಲ್ ಮತ್ತು ಮಣಿಕಂಠ ಭಾಗವಹಿಸಿದ್ದರು.

