ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

‘ಪವರ್’ಕ್ಷೇತ್ರ ನೊಣವಿನಕೆರೆ ಅಜ್ಜಯ್ಯನ ಮಠ…! ಮುಖ್ಯಮಂತ್ರಿ ಡಿಕೆಶಿ ನಂಬುವ ಆರಾಧ್ಯದೈವ…!

Posted on June 7, 2026June 7, 2026 by suddisangathi
  • ಮಂಜುನಾಥ್‌ ದಂಡಿನಶಿವರ

 

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಬಹುಮತ ಗಳಿಸಿದ ತಕ್ಷಣವೇ ಎಲ್ಲರ ಗಮನ ಸೆಳೆದಿದ್ದು ಈ ಮಠ. ಅದರ ಮಠಾಧ್ಯಕ್ಷರಾದ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಅವರು ಈಗ ಹೆಚ್ಚು ಜನಪ್ರಿಯಗೊಂಡಿದ್ದಾರೆ.
ಇದೂವರೆವಿಗೂ ತರೆಮರೆಯಲ್ಲಿ ನಿರಂತರವಾಗಿ ಆಧ್ಯಾತ್ಮಿಕ ಸೇವೆಯಲ್ಲಿ ತೊಡಗಿದ್ದ ಈ ಮಠ, ಇತ್ತೀಚೆಗೆ ರಾಜಕೀಯ ಮುಖಂಡರ ಭೇಟಿಯಿಂದಾಗಿ ಹೆಚ್ಚು ಬೆಳಕಿಗೆ ಬಂದಿತೆಂದು ಹೇಳಬಹುದು.
ಇದೀಗ ಮುಖ್ಯಮಂತ್ರಿ ಸ್ಥಾನ ಪಡೆದಿರುವ ಡಿ.ಕೆ.ಶಿವಕುಮಾರ್ ತಮ್ಮ ಪ್ರತಿಯೊಂದು ಬೇಡಿಕೆಗಳ ಈಡೇರಿಕೆಗಾಗಿ ಬಹಳ ನಂಬಿಕೆಯಿAದ ಈ ಮಠಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಹಾಗೆಯೇ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಭರ್ಜರಿ ಜಯ ಗಳಿಸಿದ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಇಲ್ಲಿಗೆ ಭೇಟಿ ನೀಡಿ, ಅಜ್ಜಯ್ಯನ ದರ್ಶನ ಮಾಡಿದ್ದು ಭಾರಿ ಸುದ್ದಿಯಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿರುವ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠ ಬಹಳ ಶಕ್ತಿಯುತ ಆಧ್ಯಾತ್ಮಿಕ ಕೇಂದ್ರವಾಗಿದೆ. ಇದು ತುರುವೇಕೆರೆಗೂ ಹತ್ತಿರದಲ್ಲಿದೆ. ಇಲ್ಲಿನ ಅಜ್ಜಯ್ಯನ ಗದ್ದುಗೆಯು ಬಹಳ ಮಹತ್ವ ಹೊಂದಿದೆ ಎಂದು ಆಸ್ತಿಕರು ನಂಬಿದ್ದಾರೆ.
ನೊಣವಿನಕೆರೆಯ ಸೋಮೆಕಟ್ಟೆಯಲ್ಲಿರುವ ಕಾಡಸಿದ್ದೇಶ್ವರ ಮಠಕ್ಕೆ ಸುಮಾರು ಐನೂರು ವರ್ಷಗಳ ಇತಿಹಾಸವಿದೆಯಂತೆ. ಕಾಡಿನಂತಹ ಪ್ರದೇಶದಲ್ಲಿ ಈ ಮಠ ಇರುವುದರಿಂದ ಇದನ್ನು ‘ಕಾಡಸಿದ್ದೇಶ್ವರ ಮಠ’ ಎಂದು ಕರೆಯಲಾಗುತ್ತದೆ ಎಂಬ ಪ್ರತೀತಿ ಇದೆ.
ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಈ ಮಠದ ಇಂದಿನ ಪೀಠಾಧ್ಯಕ್ಷರಾಗಿದ್ದು, ಅಪಾರ ಜ್ಙಾನ ಸಂಪಾದಿಸಿದ್ದಾರೆ. ಬಂದ ಭಕ್ತರಿಗೆ ಪರಿಹಾರ ಸೂಚಿಸಿ, ಆಶೀರ್ವದಿಸುತ್ತಾರೆ. ಶ್ರೀಗಳು ಜೋತಿಷ್ಯಶಾಸ್ತçದ ಬಗ್ಗೆ ಆಧ್ಯಯನ ಮಾಡಿದ್ದಾರೆ. ಹಾಗಾಗಿ ಇಲ್ಲಿಗೆ ಬಂದವರಿಗೆ ಉತ್ತಮವಾದ ಮಾರ್ಗದರ್ಶನ ನೀಡುತ್ತಾರೆ.
ಈ ಮಠಕ್ಕೆ ಡಿ.ಕೆ. ಶಿವಕುಮಾರ್ ಮಾತ್ರವಲ್ಲದೇ, ಯಡಿಯೂರಪ್ಪ, ವಿ.ಸೋಮಣ್ಣ, ಎಚ್.ವಿಶ್ವನಾಥ್ ಮುಂತಾದ ರಾಜಕೀಯ ನಾಯಕರು ಸಹ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಇವರಲ್ಲಿ ಡಿ.ಕೆ.ಶಿವಕುಮಾರ್ ಹೆಚ್ಚಾಗಿ ಅಜ್ಜಯ್ಯರನ್ನು ನಂಬಿ ಆರಾಧಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಪ್ರತಿಯೊಂದು ಮುಖ್ಯವಾದ ಕೆಲಸ ಮಾಡುವಾಗಲೂ ಸಹ ಅಜ್ಜಯ್ಯನ ಅನುಮತಿ ಪಡೆದೇ ಮುಂದೆ ಹೆಜ್ಜೆ ಇಡುತ್ತಾರೆಂದು ಹೇಳಲಾಗುತ್ತದೆ. ಹಾಗಾಗಿ ಅವರು ಉಪಮುಖ್ಯ ಮಂತ್ರಿಯಾಗಿ ಗಂಗಾಧರ ಅಜ್ಜಯ್ಯರ ಮೇಲೆ ಪ್ರಮಾಣ ಮಾಡಿಯೇ ಅಧಿಕಾರ ವಹಿಸಿಕೊಂಡಿದ್ದನ್ನು ನಾವು ಕಾಣಬಹುದು.
ಸ್ಥಳ ಮಹಿಮೆ
ಐನೂರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಮಠದ ಸ್ಥಾಪನೆಯಾಗಲು ಇಲ್ಲಿ ನಡೆದ ಒಂದು ಘಟನೆ ಕಾರಣವಾಗಿದೆಯಂತೆ. ಹಿಂದಿನ ಕಾಲದಲ್ಲಿ ಮಹಾ ತಪಸ್ವಿಯಾದ ಕಾಡಸಿದ್ದೇಶ್ವರರು ನಂದಿಯ ಮೇಲೆ ಸಂಚಾರ ಮಾಡುತ್ತಾ, ಲಕ್ಷೆö್ಮÃಶ್ವರದ ಸೋಮೇಶ್ವರನಿಗೆ ವರವನ್ನು ನೀಡಿ ನೊಣವಿನಕೆರೆಯ ದಕ್ಷಿಣ ಭಾಗದಲ್ಲಿ ಬಂದು ನೆಲೆಸಿದರಂತೆ.
ಕಾಡಿನಿಂದ ಕೂಡಿದ್ದ ಈ ಪ್ರದೇಶದಲ್ಲಿ ಒಂದು ದಿನ ಕಾಡಸಿದ್ದೇಶ್ವರರು ತಪಸ್ಸಿನಲ್ಲಿ ನಿರತರಾಗಿದ್ದಾಗ ಹಾಗಲವಾಡಿಯ ರಾಜನಾಗಿದ್ದ ಮುದಿಯಪ್ಪನಾಯಕನು ಶ್ರೀಗಳನ್ನು ಯಾವುದೋ ಪ್ರಾಣಿ ಇರಬಹುದು ಎಂದು ಬಾಣ ಬಿಡುತ್ತಾನೆ. ಆ ಬಾಣವು ಸ್ವಾಮಿಜೀಗಳ ದೇಹವನ್ನು ಭೇದಿಸಿಕೊಂಡು ಹೋಗುತ್ತದೆ. ಆಗ ತಕ್ಷಣ ಶ್ರೀಗಳ ಬಳಿ ಬಂದ ರಾಜ ಅವರ ಪಾದಕ್ಕೆ ಬಿದ್ದು ಗೋಳಾಡುತ್ತಾ ಕ್ಷಮೆ ಕೇಳುತ್ತಾನೆ.
ಆಗ ರಾಜನು ಇಪ್ಪತ್ತು ಅಂಕಣದ ಮಠ ಮತ್ತು ಮುಂಭಾಗದಲ್ಲಿ ಶ್ರೀಗಳಿಗೆ ಗದ್ದುಗೆ ಕಟ್ಟಿಸುವ ಹರಕೆ ಮಾಡಿಕೊಂಡು ನಿರ್ಮಿಸುತ್ತಾನೆ. ಅನಂತರ ಕಾಡುಸಿದ್ದೇಶ್ವರರ ಅಪ್ಪಣೆ ಮೇರೆಗೆ ಅವರು ನಿಗಧಿ ಪಡಿಸಿದ ದಿನ ಅನೇಕ ಸಾಧುಗಳು ಅವರನ್ನು ಸುವರ್ಣ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಗದ್ದುಗೆ ಇರುವ ಜಾಗಕ್ಕೆ ಬರುತ್ತಾರಂತೆ. ಆಗ ಅಲ್ಲಿ ಕರ್ಪೂರ ದಗ್ಗನೆ ಹತ್ತಿಕೊಂಡು, ಪಲ್ಲಕ್ಕಿಯಲ್ಲಿದ್ದ ಶ್ರೀಗಳು ಅದೃಶ್ಯರಾಗುವ ಆಶ್ಚರ್ಯಕರ ಘಟನೆ ನಡೆಯುತ್ತದಂತೆ. ಇದೇ ಈ ಮಠದ ಮೂಲ ಗದ್ದುಗೆಯ ವಿಶೇಷ ಪವಾಡವೆಂದು ಭಕ್ತರು ಅಭಿಪ್ರಾಯಪಡುತ್ತಾರೆ.
ಇಂದಿನ ಈ ಮಠಕ್ಕೆ ೧೯೮೫ರಿಂದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ವಿಜಯಪುರ ಜಿಲ್ಲೆ ಇಂಡಿ ತಾಲೂಕು ಸಾಲೋಟಗಿ ಗ್ರಾಮದವರು. ವಾಕ್ಸಿದ್ಧಿ ಪಡೆದಿರುವ ಇವರು ಅನುಷ್ಠಾನ ಪುರುಷರೆಂದೇ ಖ್ಯಾತರಾಗಿದ್ದಾರೆ. ಇಷ್ಟೇ ಅಲ್ಲದೇ. ಜ್ಯೊತಿಷ್ಯದಲ್ಲೂ ಅಪಾರ ಪರಿಣತಿ ಹೊಂದಿದ್ದಾರೆ.
ಶ್ರೀಗಳು ತಿಳಿಸಿದಂತೆ ಪಾಲನೆ ಮಾಡಿದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂಬ ನಂಬಿಕೆ ಇರುವುದರಿಂದ ರಾಜ್ಯ ಮತ್ತು ಹೊರ ರಾಜ್ಯಗಳ ಎಲ್ಲಾ ಭಾಗಗಳಿಂದ ಜನ ಸಾಮಾನ್ಯರು, ರಾಜಕಾರಣಿಗಳು, ವ್ಯಾಪಾರಸ್ಥರು, ಉದ್ಯಮಿಗಳು ಇವರನ್ನು ಭೇಟಿ ಮಾಡಿ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಾರೆ. ಪ್ರತಿದಿನ ಜನ ಸಾಮಾನ್ಯರೂ ಮಠಕ್ಕೆ ಭೇಟಿ ನೀಡಿ ತಮ್ಮ ತೊಂದರೆ ತಾಪತ್ರಯಗಳನ್ನು ನಿವೇದಿಸಿಕೊಂಡು ಕಷ್ಟ-ಕಾರ್ಪಣ್ಯಗಳಿಗೆ ಪರಿಹಾರ ಪಡೆದು ಹೋಗುವುದನ್ನು ಕಾಣಬಹುದು.

 

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb