ಸುದ್ದಿಸಂಗಾತಿ ಧ್ವನಿ ನ್ಯೂಸ್
ಬೆಂಗಳೂರು: ನಗರದ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಫ್ಟಿಕ್ ಕ್ರಾಫ್ಟ್ ಸಹಯೋಗದಲ್ಲಿ ಇಂದು ಪತ್ರಕರ್ತರಿಗೆ ಉಚಿತ ಕಣ್ಣು ತಪಾಸಣೆ ಮಾಡಲಾಯಿತು. ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಬಿ. ವಿ ಮಲ್ಲಿಕಾರ್ಜುನಯ್ಯರವರು ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಲ್ಲಿಕಾರ್ಜುನಯ್ಯ ಪತ್ರಕರ್ತರಿಗೆ ಕಣ್ಣಿನ ಅರೋಗ್ಯ ಬಹಳ ಮುಖ್ಯ. ತಮ್ಮ ಬಿಡುವಿಲ್ಲದ ಕೆಲಸದ ನಡುವೆ ಪತ್ರಕರ್ತರು ಅರೋಗ್ಯ ತಪಾಸಣೆ ಮಾಡಿಸುವುದಿಲ್ಲ. ಪತ್ರಕರ್ತರು ಅರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಆಗಾಗ ತಮ್ಮ ಅರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಣ್ಣು ತಪಾಸಣೆ ಸೇರಿದಂತೆ ದೇಹದ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.ಆಫ್ಟಿಕ್ ಕ್ರಾಫ್ಟ್ ಹಾಗೂ ಬೆಂಗಳೂರು ಪತ್ರಕರ್ತರ ಸಂಘ ಪತ್ರಕರ್ತರಿಗಾಗಿ ಉಚಿತ ಕಣ್ಣು ತಪಾಸಣೆ ನಡೆಸುವುದರ ಮೂಲಕ ಉತ್ತಮ ಸೇವೆ ಮಾಡುಡುತ್ತಿದೆ ಅದರಲ್ಲೂ ಹಲವು ವರ್ಷಗಳಿಂದ ಆಫ್ಟಿಕಲ್ ಕ್ರಾಪ್ಟ್ ಇವತ್ತು ಉಚಿತ ಕಣ್ಣು ತಪಾಸಣೆ ಹಾಗೂ ಉಚಿತ ಕಣ್ಣು ಚಿಕಿತ್ಸೆ, ಉಚಿತ ಕನ್ನಡಕ ವಿತರಣೆ ಮಾಡಿಕೊಂಡು ಬಂದಿರೋದು ನಿಜಕ್ಕೂ ಶ್ಲಾಘನೀಯ ಎಂದರು.
ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ ಸ್ವಾಗತಿಸಿದರು. ನಗರ ಘಟಕ ಅಧ್ಯಕ್ಷರಾದ ಸೋಮಶೇಖರ್ ಗಾಂಧಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್. ಆರ್. ರವೀಶ್ ಡಾ. ಅಫ್ಟಿಕ್ ಕ್ರಾಫ್ಟ್ ನ ಮುಖ್ಯಸ್ಥರಾದ ಪ್ರಿಯೇಶ್ ಕುಮಾರ್ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಸಿ ಲೋಕೇಶ್, ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಉಪಾಧ್ಯಕ್ಷರಾದ ಪರಿಮಳ ಹೆಚ್. ಎಸ್. ಕಾರ್ಯದರ್ಶಿಗಳಾದ ಕೆ. ಎಲ್. ಲೋಕೇಶ್, ಸದಸ್ಯರಾದ ರಾಜಗಿರಿ ಪ್ರದೀಪ್.ಆರ್, ಬಿ. ಕೆ. ಸುಂದರೇಶ್,ರವಿಕಾಂತ್ ಕುಂದಾಪುರ, ಬಿ. ಕೆ. ಸುಂದರೇಶ್, ರಾಮಾಕಾಂತ್ ಗುಗ್ರಿ, ಎನ್.ಶಿವಾನಂದ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.

