ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

 ಧಾರ್ಮಿಕ ವಿಧಿ ವಿಧಾನಗಳಿಂದ ನಮ್ಮಲ್ಲಿ ಜ್ಞಾನ ಮತ್ತು ಶಿಸ್ತು ವೃದ್ಧಿಯಾಗುತ್ತದೆ: ಸಂಸದ ಯದುವೀರ್ ಒಡೆಯರ್ ಅಭಿಮತ

Posted on July 13, 2026 by suddisangathi

ಬೆಂಗಳೂರು: ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದಿಂದ ಸಾಮೂಹಿಕ ಬ್ರಹ್ಮೋಪದೇಶ (ಉಪನಯನ) ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಬೆಂಗಳೂರು ಅರಮನೆ ಆವರಣದ ಪ್ರಿನ್ಸೆಸ್ ಗ್ರೀನ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಐವತ್ತಕ್ಕೂ ಹೆಚ್ಚು ಯುವಕರು ಪೋಷಕರೋಂದಿಗೆ ಪಾಲ್ಗೊಂಡು ಶ್ರದ್ಧಾ ಭಕ್ತಿಗಳಿಂದ ಬ್ರಹ್ಮೋಪದೇಶ ಉಪನಯನದ ದೀಕ್ಷೆ ಪಡೆದದ್ದು ವಿಶೇಷವಾಗಿತ್ತು.

ಬ್ರಹ್ಮೋಪದೇಶ ಸಮಾರಂಭದಲ್ಲಿ ಭಾಗಿಯಾಗಿ ಮಾತಾನಾಡಿದ ಮೈಸೂರು, ಕೊಡಗು ಲೋಕಸಭಾ ಸದಸ್ಯರು ಹಾಗೂ ರಾಜ ವಂಶಸ್ಥರಾದ ಯದವೀರ್ ಒಡೆಯರ್ ಉಪನಯನವು ಹಿಂದೂ ಧಾರ್ಮಿಕ ಪದ್ದತಿಯಲ್ಲಿ ಮಹತ್ವವುಳ್ಳ ಸಂಸ್ಕಾರವಾಗಿದೆ. “ಉಪ” ಎಂದರೆ “ಹತ್ತಿರ” ಮತ್ತು “ನಯನ” ಎಂದರೆ “ಕರೆತರು” ಉಪನಯನ ಎಂದರೆ ಗುರುವಿನ ಹತ್ತಿರ ಕರೆತರು ಎಂದರ್ಥ. ಉಪನಯನವನ್ನು ಯಜ್ಞೋಪವೀತದ ಆಚರಣೆ ಎಂತಲೂ ಕರೆಯುತ್ತಾರೆ. ಇದನ್ನ ಆಚರಿಸುವ ಉದ್ದೇಶ, ಮಕ್ಕಳು ಜ್ಞಾನ ಮತ್ತು ಶಿಸ್ತು, ಸಂಸ್ಕಾರವನ್ನು ಅಳವಡಿಸಿಕೊಂಡು ಉತ್ತಮ ಸುಸಂಸ್ಕೃತರಾಗಬೇಕು ಎಂಬುದಾಗಿದೆ ಎಂದು ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರು ಹೇಳಿದರು.

ಸಮಾರಂಭವನ್ನು ಉದ್ದೇಶಿಸಿ ನಂತರ ಮಾತನಾಡಿದ ಕಪ್ಪಡಿ, ಮಳವಳ್ಳಿ ಮಂಟೇಸ್ವಾಮಿ ಮಠದ ಮಠಾಧಿಪತಿಗಳು ಹಾಗೂ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಮೊಮ್ಮಕ್ಕಳು ಆದ ಎಂ.ಎಲ್. ವರ್ಚಸ್ವಿನ್ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ಅವರು ಮಾತಾನಾಡಿ ಸನ್ಮಾರ್ಗದ ಬದುಕಿಗೆ ದಾರ್ಮಿಕ ಅಂತಶ್ರದ್ದೆ ಅವಶ್ಯಕ, ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನನಗೆ ಬ್ರಹ್ಮೋಪದೇಶ ಮತ್ತು ನೀಲಗಾರಿಕೆ ಉಪದೇಶ ನೀಡಲಾಯಿತು. ಇದರ ಪ್ರಭಾವದಿಂದಾಗಿ ಧಾರ್ಮಿಕ ಮತ್ತು ಸಾಮಾಜಿಕ ಮಾರ್ಗದಲ್ಲಿ ಹೆಚ್ಚು ತೊಡಗಿಕೊಳ್ಳಲು ದಾರಿಯಾಯಿತು. ಸಮಾರಂಭವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನ (ರಿ) ಅಧ್ಯಕ್ಷರಾದ ದಿನೇಶ್ ಅರಸ್ ಮತ್ತು ಪದಾಧಿಕಾರಿಗಳನ್ನು ಶ್ಲಾಘಿಸಿದರು.

ಮೈಲಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಗುರು ವೆಂಕಪ್ಪಯ್ಯ ಒಡೆಯರ್ ಸಭೆಯನುದ್ದೇಶಿಸಿ ಮಾತಾನಾಡುತ್ತಾ “ಅರಸು” ಸಮುದಾಯ ಎಂದರೆ ಎಲ್ಲರಿಗೂ ಪ್ರೀತಿ ಪಾತ್ರರಾದವರು, ಕ್ಷತ್ರಿಯರು ಅಂದರೆ ಧೈರ್ಯ, ಸಾಹಸ, ಶೌರ್ಯಕ್ಕೆ ಹೆಸರಾದವರು. ಅರಸು, ರಾಜು ಕ್ಷತ್ರಿಯರು ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವವರು. ಸಣ್ಣ ಗ್ರಾಮಗಳಲ್ಲಿ ಒಂದೆರಡು ಮನೆಗಳಿದ್ದರು ಸಹ ಆ ಮನೆಗಳು ಊರಿನ ಹಿತಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಮಾಜಿ ಮುಖ್ಯ ಮಂತ್ರಿಗಳಾದ ದೇವರಾಜ ಅರಸು ಅವರು ಮೈಲಾರ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. “ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ” ಎಂಬ ಗಾದೆಯಂತೆ ಹಿಂದಿನ ಕಾಲದಲ್ಲಿ ದಕ್ಷಿಣ ಕರ್ನಾಟಕದ ಕಡೆಯಿಂದ ಉತ್ತರ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿರುವ ಮೈಲಾರಕ್ಕೆ ಪ್ರಯಾಣಿಸಲು ನೇರ ದಾರಿಯಿಲ್ಲದೆ, ದೂರದ ಕೊಂಕಣ ಪ್ರದೇಶದ ಮೂಲಕ ಸುತ್ತಿಬಳಸಿ ಬರಬೇಕಿತ್ತು. ಆದರೆ ದೇವರಾಜ ಅರಸು ಅವರು ನಿರ್ಮಿಸಿದ ಸೇತುವೆಯಿಂದ ಇಂದು ಮೈಲಾರಕ್ಕೆ ಬರುವ ಭಕ್ತರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ನಿವೃತ್ತ, ಪ್ರಾಧ್ಯಾಪಕರು ಹಾಗೂ ಮಾಜಿ ಕುಲಸಚಿವರು ಆದ ಡಾ.ಸುಂದರ ರಾಜೇ ಅರಸ್ ರವರು ಮಾತಾನಾಡುತ್ತಾ ಕ್ಷತ್ರಿಯ ಸಮುದಾಯದ ಗುರುಪೀಠಗಳು ಸದೃಢವಾಗಬೇಕು ಎಂದರು. ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಗುರುಪೀಠಗಳ ಪಾತ್ರ ಬಹು ಮುಖ್ಯವಾಗಿದ್ದು ದಕ್ಷಿಣ ಭಾಗದಲ್ಲಿ ಪರಂಜ್ಯೋತಿ ಮಂಟೇಸ್ವಾಮಿ ಮಠದಂತೆ ಉತ್ತರದಲ್ಲಿರುವ ಮೈಲಾರಕ್ಕೂ ಸಹ ಕ್ಷತ್ರಿಯರು ಧಾರ್ಮಿಕ ಶ್ರಾದ್ಧ ಕೇಂದ್ರವಾಗಿ ನಡೆದುಕೊಳ್ಳಬೇಕು ಎಂದರು. ಮೈಲಾರ ಕ್ಷೇತ್ರದ “ಕಾರ್ಣಿಕ” ಪ್ರಸಿದ್ಧಿ ಹೊಂದಿದ್ದು ಅದರ ಪರಂಪರೆಯನ್ನು ಮುನ್ನಡೆಸುತ್ತಿರುವ ಗುರು ವೆಂಕಪ್ಪಯ್ಯ ಒಡೆಯರ್ ಅವರು ಕ್ಷಾತ್ರ ಸಮಾಜಕ್ಕೆ ಸನ್ಮಾರ್ಗ ತೋರುವಂತೆ ಕೋರಿದರು.

ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮೈಸೂರು ಅರಸರ ಪ್ರತಿಮೆಗಳು ವಿರಳವಾಗಿದ್ದು ಇಂದಿಗೂ ನೂರಾರು ಕೋಟಿ ಆದಾಯ ಗಳಿಸಿ ಸಾವಿರಾರು ಜನರಿಗೆ ನೌಕರರು ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ವೃತ್ತದಲ್ಲಿ “ನಾಲ್ವಡಿ” ಪ್ರತಿಮೆ ಇಲ್ಲದಿರುವುದು ದುರಂತವೇ ಸರಿ ಎಂದರು. ಅದೇ ರೀತಿ ಯಶವಂತ ಪುರ ಮತ್ತು ಸದಾಶಿವ ನಗರ ಮಾರ್ಗದ ಸರ್ಕಲ್ ಮಾರಮ್ಮನ ದೇವಸ್ಥಾನ ವೃತ್ತದ ಟಾಟಾ ಇನ್ಸ್ಟಿಟ್ಯೂಟ್ ಬಳಿ ಈಗಾಗಲೇ “ನಾಲ್ವಡಿ” ಪ್ರತಿಮೆ ನಿರ್ಮಿಸಲು ಬಿ.ಬಿ.ಎಂ.ಪಿ ಅನುಮೋದನೆ ನೀಡಿದ್ದರು ಸಹ ನೂತನ ಜಿ.ಬಿ.ಎ ಅಧಿಕಾರಿಗಳು ನಿರ್ಲಕ್ಷ್ಯ ಹೊಂದಿದ್ದು ಈ ಬಗ್ಗೆ ಜನಾಂದೋಲನ ನಡೆಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಮಾತಾನಾಡಿದ ಸಂಸ್ಕೃತಿ ಚಿಂತಕ ಫಣಿಂದ್ರ ಅವರು ಮಾತನಾಡುತ್ತಾ ವಯಕ್ತಿಕ ಚಾರಿತ್ರ್ಯಿ ಎಂಬುದು ಬಹಳ ಮುಖ್ಯವಾದ್ದು ಧಾರ್ಮಿಕ ಭಕ್ತಿ ಸನ್ಮಾರ್ಗದಿಂದ ಇದನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದ ಅವರು, ರಾವಣನಲ್ಲಿಲ್ಲದ ಅದ್ಯಾವ ಗುಣ ರಾಮ ನಲ್ಲಿದೆ ಎಂದು ಕುತೂಹಲ ಭರಿತಳಾದ ರಾವಣನ ಹೆಂಡತಿ ಮಂಡೋದರಿ ಸತ್ಯ ನಿಷ್ಟನಾದ ರಾಮನನ್ನು ನೋಡಲು ಕಾಡಿಗೆ ಬಂದಾಗ ಮಂಡೋದರಿಯ ನೆರಳು ಬಿದ್ದಾಗ ಹಿಂದೆ ಸರಿದು ನಿಂತ ರಾಮನನ್ನು ನೋಡಿ ವಯಕ್ತಿಕ “ಚಾರಿತ್ರ್ಯಿ” ಎಂಬುದು ಎಷ್ಟು ಮುಖ್ಯ ಎಂದು ತಿಳಿದಳು ಎಂದರು.

ಇದೇ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನವನ್ನು ಹಮ್ಮಿಕೊಂಡಿದ್ದು ಈ ಪ್ರಶಸ್ತಿಯನ್ನು ಧಮೇಂದ್ರ ಕುಮಾರ್ ಅರೇನಹಳ್ಳಿ ಮೈಸೂರು ಕಥೆಗಳು ಪ್ರಖ್ಯಾತರು ಮತ್ತು ಇತಿಹಾಸ ಸಂಶೋಧಕರು. ಹಾಗೂ ಶ್ರೀ ಟಿ.ಎಸ್. ಸುಬ್ರಮಣ್ಯ, ಉಪ ನಿರ್ದೇಶಕರು, ಮೈಸೂರು ಅರಮನೆ ಅಡಳಿತ ಮಂಡಳಿ. ಮತ್ತು  ಜಿ. ಮಂಜುನಾಥ್ ರಾಜು ಬಿ.ಬಿ.ಎಂ.ಪಿ. ಮಾಜಿ ಚೇರ್ಮನ್, ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಇವರುಗಳಿಗೆ ಪ್ರದಾನ ಮಾಡಲಾಯಿತು. ನಂತರ   ಸುರೇಶ್ ಅರಸ್ ಅವರು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಿನಿಮಾ ಸಂಕಲನಕಾರರು, ಇವರ ಅನುಪಸ್ಥಿತಿಯ ಇವರ ಶ್ರೀಮತಿಯವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಆಯೋಜಕರಾದ ಎಚ್, ಎನ್, ದಿನೇಶ್ ಅರಸ್ ಅವರು ಮಾತನಾಡುತ್ತಾ ,ವಿವಾಹದ ಸಂದರ್ಭದಲ್ಲಿ ಬ್ರಹ್ಮೋಪದೇಶ ನೀಡಲಾಗುತ್ತದೆ. ಆದರೆ, ಅದು ಸರಿಯಾ ಕ್ರಮ ಅಲ್ಲ ಎಂದರು. ಧಾರ್ಮಿಕ ಪೂಜಾ ವಿಧಾನಗಳನ್ನು ಪಾಲಿಸುವುದರಲ್ಲಿ ಸಮುದಾಯದ ಜನಗಳು ಹಿಂದುಳಿದಿರುವುದಾಗಿ ತಿಳಿಸಿದರು. ಬ್ರಹ್ಮೋಪದೇಶದ (ಉಪನಯನದ) ಸಂಧರ್ಭದಲ್ಲಿ ಪೂಜಾ ವಿಧಾನವನ್ನು ಅರಿಯದ ಪೋಷಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಪೂಜಾ ವಿಧಾನಗಳನ್ನು ಕಲಿತು ಸರಿಯಾದ ಮಾರ್ಗದಲ್ಲಿ ಧಾರ್ಮಿಕ ಉಪಾಸನೆ ನಡೆಸುವಂತೆ ಸಲಹೆ ನೀಡಿದರು.

ಪ್ರಶಸ್ತಿ ಪ್ರದಾನದ ನಂತರದ ಸಮಾರಂಭದಲ್ಲಿ ನೃತ್ಯ ಗುರು ಶ್ರೀಮತಿ ರಕ್ಷಿತಾ ಚರಣ್ ರಾಜು ಮತ್ತು ಸಮುದಾಯದ ಪ್ರತಿಭಾನ್ವಿತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿಲಾಗಿತ್ತು. ಕೂಚಿಪುಡಿ, ಭರತನಾಟ್ಯ, ಡ್ರಮ್ಸ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ಕಲಾವಿದರಿಗೆ ಕಾಂಗ್ರೆಸ್ ಮುಖಂಡರಾದ. ಶ್ರೀಮತಿ ವಿಜಯಲಕ್ಷ್ಮಿ ಅರಸ್ ಮತ್ತು ಕಲಾವಿದರಾದ ವಿಕ್ರಂ ಸೂರಿ ನಮೀತಾ ದಂಪತಿಗಳು ಸನ್ಮಾನಿಸಿದರು. ಗಣೇಶ ಟೆಂಟ್ ಹೌಸ್ ಮಾಲೀಕರಾದ ಶ್ರೀ ಕೇಶವರಾಜು ಅವರು ಸಿದ್ದಪಡಿಸಿದ್ದ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಅರಸು ಮತ್ತು ರಾಜು ಕ್ಷತ್ರಿಯ ಸಮುದಾಯದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಬೆಳಗಿನ ಪೂಜಾ ವಿಧಾನದಿಂದ ಆರಂಭವಾದ ಕಾರ್ಯಕ್ರಮ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯವಾಯಿತು. ಅತಿಥಿ ಗಣ್ಯರಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪಾಲ್ಗೊಂಡ ಪ್ರತಿಭಾನ್ವಿತರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು. ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷರಾದ ಯಲ್ಲರಾಜು, ಕೆಂಪರಾಜೇ ಅರಸ್, ಲಕ್ಷ್ಮಿಪತಿರಾಜು, ಖಜಾಂಚಿ ಎಂ.ಎಸ್. ರಾಘವೇಂದ್ರ ರಾಜೇ ಅರಸ್, ಸಂಘಟನಾ ಕಾರ್ಯದರ್ಶಿ, ಎ. ಮೋಹನ ಅರಸ್, ಬಿ.ಕೆ. ವಿಶ್ವನಾಥ ರಾಜು, ಗೋವರ್ಧನ ರಾಜು, ಶಶಾಂಕ ಅರಸ್, ವಿಶ್ವನಾಥ ರಾಜು, ವಿನಯರಾಜೇ ಅರಸ್, ಎ.ಎನ್. ಶ್ರೀಮಂತ ರಾಜೇ ಅರಸ್ ಹಾಗೂ ಇತರೆ ಬಂಧುಗಳು, ಸ್ನೇಹಿತರ ಸಹಕಾರದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವರದಿ:- ಎಸ್.ಆರ್.ಗೋವಿಂದರಾಜು

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb