ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಜಯಚಾಮರಾಜೇಂದ್ರ ಒಡೆಯರ್ ಅವರ 108ನೇ ಜನ್ಮ ಶತಮಾನೋತ್ಸವ ಆಚರಣೆ

Posted on July 21, 2026July 21, 2026 by suddisangathi

ದೇಶದ ಒಕ್ಕೂಟ ರಚನೆಗೆ ಒಡೆಯರ್ ಕೊಡುಗೆ ಅನನ್ಯ – ಎಸ್. ಕೇಶವಮೂರ್ತಿ

ಸುದ್ದಿಸಂಗಾತಿ ನ್ಯೂಸ್

ಬೆಂಗಳೂರು: ಜಯಚಾಮರಾಜೇಂದ್ರ ಒಡೆಯರ್ ಅವರ ತ್ಯಾಗದ ಪರಿಣಾಮವಾಗಿ ಭಾರತದ ಒಕ್ಕೂಟ ರಚನೆಯಾಯಿತು. ಇದರ ಪರಿಣಾಮವಾಗಿ ಅಖಂಡ ಕರ್ನಾಟಕದ ಕನಸು ನನಸಾಯಿತು. ಎಂದು ಮಹಾಲಕ್ಷ್ಮಿ ಲೇಔಟ್ ವಾರ್ಡ್ ನ ಮಾಜಿ ಬಿ.ಬಿ.ಎಂ.ಪಿ ಸದಸ್ಯ, ಕಾಂಗ್ರೆಸ್ ಮುಖಂಡರಾದ ಎಸ್‌. ಕೇಶವಮೂರ್ತಿ ತಿಳಿಸಿದರು.

ರಾಜು ಕ್ಷತ್ರಿಯ, ಅರಸು ಸಮಾಜದ ವತಿಯಿಂದ ಜುಲೈ18ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿನ ಜಯಚಾಮರಾಜೇಂದ್ರ ಒಡೆಯರ್ ಅವರ 108ನೇ ಜನ್ಮ ಶತಮಾನೋತ್ಸವ ಆಚರಣೆಯಲ್ಲಿ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ ತಿಳಿಸಿದರು.

ಇಂದು ಮಹಾತ್ಮ ಗಾಂಧಿಯವರ ಸಾಲಿನಲ್ಲಿ ನಾಲ್ವಡಿ ಮತ್ತು ಜಯಚಾಮರಾಜೇಂದ್ರ ಒಡೆಯರ್ ಆವರ ತ್ಯಾಗವನ್ನು ನಾವುಗಳು ಸ್ಮರಿಸಿಕೊಳ್ಳಬೇಕು. ಇನ್ಸ್ಟ್ರುಮೆಂಟ್ ಆಫ್ ಅಸೆಶನ್ ಗೆ ಸಹಿ ಮಾಡಿದ ಒಡೆಯರ್ ತಮ್ಮ ರಾಜ ಪದವಿಯನ್ನು ತ್ಯಜಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದರು.

ಒಕ್ಕೂಟದ ವ್ಯವಸ್ಥೆಯ ವಿರೋಧಿಯಾದ ಇತರ ರಾಜರುಗಳನ್ನು ಮನವೊಲಿಸಿದ ಒಡೆಯರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬೆಂಬಲಿಸಿ ರಾಜ ಪದವಿಯನ್ನು ಪದತ್ಯಾಗ ಮಾಡಿದರು. ತಮ್ಮ ಚರಾಚರ ಆಸ್ತಿಗಳನ್ನ ನಿಸ್ಸಂಶಯವಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ಜನಗಳಿಗೆ ದಾನ ಮಾಡಿ ತ್ಯಾಗವನ್ನ ಮೆರೆದಂತಾ ಮಹಾರಾಜರು. ಎಂದು ತಿಳಿಸಿದರು. ಒಡೆಯರ್ ತ್ಯಾಗವನ್ನು ಇಂದಿನ ಜನಪ್ರತಿನಿಧಿಗಳು ಸ್ಮರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಒಡೆಯರ್ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ಎಚ್.ಎ.ಎಲ್ . ಮತ್ತು ಡಿ.ಆರ್ .ಡಿ.ಓ. ಹಾಗೂ ಬಿ.ಎಚ್ .ಇ.ಎಲ್. ಬಿ.ಈ .ಎಲ್ . ನಂತಹ ಇನ್ನೂ ಅನೇಕ ಸಂಸ್ಥೆಗಳು ಇಂದು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದು ನಮ್ಮ ಮೈಸೂರು ಮಹಾರಾಜರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಮೆಯ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದಾಗಿ ಕೇಶವಮೂರ್ತಿ ಭರವಸೆ ನೀಡಿದರು. ಆಯೋಜಕರಾದ ವಿನಯ್ ರಾಜೇ ಅರಸ್ ಅವರು ಕೇಶವಮೂರ್ತಿ ಅವರನ್ನು ಸನ್ಮಾಸಿಸಿದರು,

ಮಾಜಿ ಕಾರ್ಪೊರೇಟರ್ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ. ಶಿವರಾಜು ಅವರು ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕೊಡುಗೆಯನ್ನು ಶ್ಲಾಘಿಸಿದರು. ಅರಸು ಸಮಾಜದ ಮುಖಂಡರಾದ ಶಶಿಧರ್ ಅರಸ್ ಅವರು ಶಿವರಾಜು ಅವರನ್ನು ಸನ್ಮಾನಿದರು.

ಕಾರ್ಯಕ್ರಮದ ಆಯೋಜಕ ಎಸ್.ಆರ್.ಗೋವಿಂದರಾಜು ಮಾತನಾಡಿ ನಾಡಗೆ ಒಡೆಯರ್ ಕೊಡುಗೆ ಅಪಾರವಾದದ್ದು ಎಂದರು, ಕರ್ನಾಟಕದ ಭೋಜರಾಜ ಬಿರುದಾಂಕಿತ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನನ ಮಂಟಪ ಇಂದು ಅಳಿವಿನಂಚಿನಲ್ಲಿದೆ. ಮುಮ್ಮಡಿ ಜನನ ಮಂಟಪದ ಸ್ಥಳ ಇಂದು ಚಪ್ಪಲಿ ಬಿಡುವ ಸ್ಥಳವಾಗಿದೆ. ಪ್ರಜಾ ಪ್ರತಿನಿಧಿ ಸಭೆ, ರೈಲ್ವೆ ಸಂಪರ್ಕ ಮತ್ತು ಸಸ್ಯಕಾಶಿ ಲಾಲ್ ಬಾಗ್ ಸೇರಿದಂತೆ ಅನೇಕ ಅಭಿವೃದ್ಧಿ ಸಾಧಿಸಿದ ಹತ್ತನೆ ಚಾಮರಾಜ ಒಡೆಯರ್ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡದಿರುವುದು ಆಡಳಿತದಲ್ಲಿನ ನಿರಾಸಕ್ತಿ ತೋರುತ್ತದೆ ಎಂದರು.

ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮೈಸೂರು ಅರಸರ ಪ್ರತಿಮೆಗಳು ವಿರಳವಾಗಿದ್ದು ಇಂದಿಗೂ ನೂರಾರು ಕೋಟಿ ಆದಾಯ ಗಳಿಸಿ ಸಾವಿರಾರು ನೌಕರರು ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ವೃತ್ತದಲ್ಲಿ “ನಾಲ್ವಡಿ” ಪ್ರತಿಮೆ ಸ್ಥಾಪಿಸಬೇಕೆಂದು ಕೋರಿದರು.

ಕನ್ನಡ ವಿಜಯ ಕುಮಾರ್ ಮಾತನಾಡಿ ಜಯಚಾಮರಾಜೇಂದ್ರ ಒಡೆಯರ್ ಅವರು ಕೊಡುಗೈ ದಾನಿಯಾಗಿದ್ದರು, ತಮ್ಮ ಬೊಕ್ಕಸದ ಹಣವನ್ನು ವಯಕ್ತಿಕ ಬದುಕಿಗೆ ಬಳಸುತ್ತಿರಲಿಲ್ಲ. ಒಡೆಯರ್ ಅವರಿಗೆ ಸೇರಿದ ಸ್ವಂತ ಆಸ್ತಿ ಪಾಸ್ತಿ ಗಳನ್ನು ಸಹ ಬಡವರಿಗೆ ದಾನ ಮಾಡುತ್ತಿದ್ದರು ಎಂದು ಅಭಿಪ್ರಾಯ ಪಟ್ಟರು.

ಸಮಾರಂಭದಲ್ಲಿ ಆಯೋಜಕ ವಿನಯ್ ರಾಜೇ ಅರಸ್ ಮತ್ತು ನಂದಿನಿ ಬಡಾವಣೆ ವಾರ್ಡ ಬಿಜೆಪಿ ಮುಖಂಡರಾದ ಸುಧಾಕರ ರಾಜು, ಶಶಿಧರ್ ಅರಸ್, ಭುವನ್, ಕುಟ್ಟಿ, ಅಂತ್ರಣಿರಾಜ್, ತಿಮ್ಮೆಗೌಡ್ರು, ಪ್ರಕಾಶಕ ಸಿದ್ದೇಶ್ವರಪ್ಪ, ಪತ್ರಕರ್ತ ದಂಡಿನ ಶಿವರ ಮಂಜುನಾಥ್, ಜನಮನ ಗೋವಿಂದರಾಜು, ರಾಜು ಮಲಿಯಪ್ಪ, ರಾಮಣ್ಣ, ವೀರಣ್ಣ , ರಘು ಮತ್ತು ಸ್ಥಳೀಯ ಮುಖಂಡರು ಸದಸ್ಯರು, ಲಭ್ಯವಿದ್ದರು.

 

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb