ಸುದ್ದಿಸಂಗಾತಿ ನ್ಯೂಸ್
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಡಾ, ಮಂಜುನಾಥ ಗೌಡರಿಗೆ ವಿನಾಯಕ ನಗರ ಹಿರಿಯ ನಾಗರಿಕರ ವೇದಿಕೆ, ವೃಷಭಾವತಿ ನಗರ ಹಿರಿಯ ನಾಗರಿಕರ ವೇದಿಕೆ, ಜನಮನ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಳೀಯ ಮುಖಂಡರಾದ ಕೆ.ಸಿ. ಸುರೇಶ್ ನೇತೃತ್ವದಲ್ಲಿ ವಿನಾಯಕನಗರದ ಶ್ರೇಯಸ್ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿ, ಶುಭಾಶಯ ಕೋರಲಾಯಿತು.
ಈ ಸಮಯದಲ್ಲಿ ಸ್ಥಳೀಯ ಮುಖಂಡರಾದ ಕೆ ಸಿ ಸುರೇಶ್, ಚನ್ನಪ್ಪ , ನರಸಿಂಹಯ್ಯ, ಗಂಗಣ್ಣ,ಸುದ್ದಿ ಸಂಗಾತಿ ದ್ವನಿ ಪತ್ರಿಕೆ ಸಂಪಾದಕ ಡಿ, ಎನ್ ಮಂಜುನಾಥ್ ದಂಡಿನಶಿವರ, ಜನಮನ ಗೋವಿಂದರಾಜು ಹಾಗೂ ನೂರಾರು ಅಭಿಮಾನಿಗಳು ಸೇರಿ, ಮಂಜುನಾಥ್ ಅವರನ್ನು ಅಭಿನಂದಿಸಿ, ಹುಟ್ಟು ಹಬ್ಬದ ಶುಭ ಕೋರಿದರು.
ಇದಕ್ಕೂ ಮುನ್ನ ಅವರ ಮನೆಯಲ್ಲಿ ಕೇಕ್ ಕತ್ತರಿಸಿ , ಹುಟ್ಟುಹಬ್ಬ ಆಚರಿಸಲಾಯಿತು. ಈ ಸಮಯದಲ್ಲಿ ಶಾಸಕರಾದ ಕೆ.ಗೋಪಾಲಯ್ಯ ಮತ್ತು ಶ್ರೀಮತಿ ಹೇಮಲತಾ ಗೋಪಾಲಯ್ಯ ಹಾಜರಿದ್ದು, ತಮ್ಮ ಪುತ್ರನಿಗೆ ಶುಭ ಹಾರೈಸಿದರು.
ನನ್ನ ಪುತ್ರ ಡಾ. ಮಂಜುನಾಥ್ ಗೌಡ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಯುವ ನಾಯಕತ್ವ, ಸಮಾಜಸೇವೆ ಮತ್ತು ಸಂಘಟನಾ ಕಾರ್ಯಗಳಲ್ಲಿ ನಿಮ್ಮ ಸಮರ್ಪಣೆ ಇನ್ನಷ್ಟು ಎತ್ತರಕ್ಕೇರಲಿ. ಉತ್ತಮ ಆರೋಗ್ಯ, ಯಶಸ್ಸು, ಕೀರ್ತಿ ಮತ್ತು ಜನಸೇವೆಯ ಅವಕಾಶಗಳು ಸದಾ ನಿಮ್ಮೊಂದಿಗಿರಲಿ ಎಂದು ಶಾಸಕರಾದ ಕೆ.ಗೋಪಾಲಯ್ಯ ಈ ಸಮಯದಲ್ಲಿ ಶುಭ ಹಾರೈಸಿದರು.




