ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಅಮ್ಮ; ನೋವ ನುಂಗಿ ನಗುವವಳು…

Posted on May 10, 2026 by suddisangathi

ಅಮ್ಮನನ್ನು ನಾವು ಬಹು ಸಾರಿ ಒಂದು ಸಂಬಂಧವಾಗಿ ಮಾತ್ರ ನೋಡುತ್ತೇವೆ. ಆದರೆ ಅವಳು ಅದಕ್ಕಿಂತ ಹೆಚ್ಚು . ಅವಳು ನಮ್ಮ ಮೊದಲ ಶಿಕ್ಷಕಿ, ಮೊದಲ ಸ್ನೇಹಿತೆ, ಮೊದಲ ದೇವತೆ. ಮಗುವಿನ ಮೊದಲ ಹೆಜ್ಜೆಗೆ ಕೈಹಿಡಿಯುವವಳು, ಮೊದಲ ಮಾತಿಗೆ ನಗು ನೀಡುವವಳು, ಮೊದಲ ನೋವಿಗೆ ಕಣ್ಣೀರು ಸುರಿಸುವವಳು…ಅಮ್ಮ.
ಕೆಲವು ಪದಗಳು ಕೇವಲ ಉಚ್ಚಾರಣೆ ಅಲ್ಲ, ಅವು ಬದುಕಿನ ಅರ್ಥ. ‘ಅಮ್ಮ’ ಎನ್ನುವ ಪದವೂ ಅಂಥದ್ದೇ. ಅದು ಕೇವಲ ಒಂದು ಕರೆ ಅಲ್ಲ, ಅದು ಒಂದು ಭರವಸೆ…ಒಂದು ಆಶ್ರಯ…ಒಂದು ಜೀವಂತ ಸ್ಪಂದನೆ.
ಅವಳ ಜೀವನವನ್ನು ಗಮನಿಸಿದರೆ, ಅದು ಒಂದು ಮೌನ ಕಾವ್ಯ. ಅವಳು ತನ್ನ ಬಗ್ಗೆ ಬರೆಯುವುದಿಲ್ಲ… ತನ್ನ ಮಕ್ಕಳ ಬಗ್ಗೆ ಮಾತ್ರ ಬರೆಯುತ್ತಾಳೆ. ತನ್ನ ಕನಸುಗಳನ್ನು ಅಳಿಸಿ, ಮಕ್ಕಳ ಕನಸುಗಳಿಗೆ ಅಕ್ಷರ ಹಾಕುವವಳು…ಅಮ್ಮ.
ಗ್ರಾಮದಲ್ಲಿರಲಿ, ನಗರದಲ್ಲಿರಲಿ, ಅಮ್ಮನ ಪಾತ್ರ ಬದಲಾಗುವುದಿಲ್ಲ. ಅವಳು ಬಡತನದ ಮಧ್ಯೆಯೂ ಪ್ರೀತಿಯನ್ನು ಹಂಚುತ್ತಾಳೆ. ಅವಳು ಹಸಿವಿನ ನಡುವೆ ಕೂಡ ತೃಪ್ತಿಯ ನಗುವನ್ನು ನೀಡುತ್ತಾಳೆ. ಅವಳು ತನ್ನ ನೋವನ್ನು ಮರೆಮಾಚಿ, ಮಕ್ಕಳ ನೋವನ್ನು ಮಾತ್ರ ನೋಡುತ್ತಾಳೆ.
ನಾವು ಬೆಳೆದಂತೆ, ಅಮ್ಮನ ತ್ಯಾಗಗಳ ಮೌಲ್ಯ ತಿಳಿಯತೊಡಗುತ್ತದೆ. ಆದರೆ ಅದಾಗಲೇ ಅವಳು ತನ್ನ ಬದುಕಿನ ಬಹುಪಾಲನ್ನು ನಮ್ಮಿಗಾಗಿ ಕೊಟ್ಟಿರುತ್ತಾಳೆ. ಅವಳ ಕೈಯಲ್ಲಿ ಹಿಡಿದ ಆಹಾರದಲ್ಲಿ ಕೇವಲ ಅನ್ನವಲ್ಲ…ಪ್ರೀತಿ ಇರುತ್ತದೆ. ಅವಳ ಮಾತಿನಲ್ಲಿ ಕೇವಲ ಸಲಹೆ ಅಲ್ಲ…ಜೀವನದ ದಿಕ್ಕು ಇರುತ್ತದೆ.
ಇಂದು ನಾವು ಪ್ರತಿ ವಷ ಮೇ ೧೦ ರಂದು ‘ಅಮ್ಮಂದಿರ ದಿನ’ವನ್ನು ನಾವು ಆಚರಿಸುತ್ತೇವೆ. ಒಂದು ದಿನ…ಒಂದು ಹೂವು,…ಒಂದು ಶುಭಾಶಯ. ಆದರೆ ಅಮ್ಮನ ಪ್ರೀತಿಗೆ ಈ ಒಂದು ದಿನ ಸಾಕಾಗುತ್ತದೆಯೇ? ಅವಳು ನಮ್ಮನ್ನು ಒಂಬತ್ತು ತಿಂಗಳು ಹೊತ್ತುಕೊಂಡಳು,…ನಂತರ ಜೀವನಪೂರ್ತಿ ನಮ್ಮನ್ನು ಹೊತ್ತುಕೊಂಡಳು.
ನಾವು ಬೀಳುವಾಗ ಎತ್ತಿದವಳು, ನಾವು ತಪ್ಪುವಾಗ ದಾರಿ ತೋರಿದವಳು. ಇಂದು ನಾವು ಎಷ್ಟು ದೂರ ಹೋದರೂ, ಎಷ್ಟು ಎತ್ತರ ಏರಿದರೂ, ನಮ್ಮ ಬೇರುಗಳು ಅಮ್ಮನಲ್ಲಿಯೇ ಇವೆ. ಅವಳ ಆಶೀರ್ವಾದವೇ ನಮ್ಮ ಶಕ್ತಿ.
ಆದ್ದರಿಂದ, ಅಮ್ಮಂದಿರ ದಿನವೆಂದರೆ ಕೇವಲ ಆಚರಣೆ ಅಲ್ಲ,…ಅದು ಒಂದು ನೆನಪು. ನಾವು ಯಾರಿಂದ ಬಂದೆವು ಎಂಬುದು. ಅದು ಒಂದು ಅವಕಾಶ;ನಾವು ಎಷ್ಟು ಕೃತಜ್ಞರಾಗಿದ್ದೇವೆ ಎಂಬುದನ್ನು ಹೇಳಿಕೊಳ್ಳಲು.
ಅಮ್ಮ ಎಂಬುದು ಅಕ್ಷರಗಳಲ್ಲಿ ಸೀಮಿತವಾಗದ ಹೆಸರು.…ಅದು ಬದುಕಿನಲ್ಲೇ ಬರೆಯಲ್ಪಟ್ಟ ಒಂದು ಅನಂತ ಕಥೆ.
ಅಮ್ಮಂದಿರ ದಿನದ ಇತಿಹಾಸ
ಅಮ್ಮ ಎಂದರೆ ಪ್ರೀತಿ, ತ್ಯಾಗ ಮತ್ತು ಸಹನೆಯ ಪ್ರತಿರೂಪ. ಈ ಮೌಲ್ಯಗಳನ್ನು ಗೌರವಿಸಲು ಪ್ರಪಂಚದಾದ್ಯಂತ ಆಚರಿಸಲ್ಪಡುವ ದಿನವೇ ಅಮ್ಮಂದಿರ ದಿನ. ಆದರೆ ಈ ದಿನದ ಆಚರಣೆಗೆ ಹಿಂದೆ ಒಂದು ಸ್ಪರ್ಶಿಸುವ ಇತಿಹಾಸವಿದೆ.
ಅಮ್ಮಂದಿರ ದಿನದ ಮೂಲವನ್ನು ನೋಡಿದರೆ, ಅದು ೧೯ನೇ ಶತಮಾನದ ಅಮೆರಿಕಾದಲ್ಲಿ ಕಂಡು ಬರುತ್ತದೆ. ಸಮಾಜ ಸೇವಕಿ ಆನ್ ರೀವ್ಸ್ ಜಾರ್ವಿಸ್ ಅವರು ‘ಮದರ್ಸ್ ಡೇ ವರ್ಕ್ ಕ್ಲಬ್‌ಗಳು’ ಎಂಬ ಕಾರ್ಯಕ್ರಮಗಳನ್ನು ಆರಂಭಿಸಿ, ತಾಯಂದಿರ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಅಮೆರಿಕಾದ ಗೃಹಯುದ್ಧದ ಸಮಯದಲ್ಲೂ ಅವರು ಶಾಂತಿ ಮತ್ತು ಮಾನವೀಯತೆಗಾಗಿ ಕೆಲಸ ಮಾಡಿದರು.
ಅವರ ಮರಣದ ನಂತರ, ಅವರ ಮಗಳು ಅನ್ನಾ ಜಾರ್ವಿಸ್ ತಾಯಿಯ ಸೇವೆಯನ್ನು ಸ್ಮರಿಸಲು ವಿಶೇಷ ದಿನವನ್ನು ಆಚರಿಸುವ ಸಂಕಲ್ಪ ಕೈಗೊಂಡರು. ೧೯೦೮ರಲ್ಲಿ ಅವರು ಮೊದಲ ಬಾರಿಗೆ ಅಮ್ಮಂದಿರ ದಿನವನ್ನು ಸಾರ್ವಜನಿಕವಾಗಿ ಆಚರಿಸಿದರು. ಅವರ ಪ್ರಯತ್ನ ಫಲವಾಗಿ, ೧೯೧೪ರಲ್ಲಿ ಅಮೆರಿಕಾದ ಅಧ್ಯಕ್ಷ ವುಡ್‌ರೋ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ಅಧಿಕೃತವಾಗಿ ‘ಮದರ್ಸ್ ಡೇ’ ಎಂದು ಘೋಷಿಸಿದರು.
ಆ ನಂತರ ಈ ಆಚರಣೆ ನಿಧಾನವಾಗಿ ವಿಶ್ವದ ಅನೇಕ ದೇಶಗಳಿಗೆ ವ್ಯಾಪಿಸಿತು. ಭಾರತದಲ್ಲಿಯೂ ಮೇ ತಿಂಗಳ ಎರಡನೇ ಭಾನುವಾರ ಅಮ್ಮಂದಿರ ದಿನವನ್ನು ಆಚರಿಸಲಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ತಾಯಿಗೆ ಇರುವ ಗೌರವವು ಈ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ, ಪ್ರತಿದಿನವೂ ಅಮ್ಮನ ಸ್ಮರಣೆ ಮತ್ತು ಸೇವೆಗೆ ಮೀಸಲಾಗಿದೆ.
ಅಮ್ಮಂದಿರ ದಿನವು ಕೇವಲ ಹಬ್ಬವಲ್ಲ, ಒಂದು ಭಾವನೆ. ಅದು ನಮ್ಮ ಬದುಕಿನ ಮೂಲವಾಗಿರುವ ತಾಯಿಗೆ ಕೃತಜ್ಞತೆಯನ್ನು ತಿಳಿಸುವ ಒಂದು ಅವಕಾಶ. ಹೂವುಗಳು, ಉಡುಗೊರೆಗಳು, ಶುಭಾಶಯಗಳು…ಇವೆಲ್ಲವೂ ಆ ಭಾವನೆಗೆ ಕೇವಲ ಸಂಕೇತಗಳು.
ನನ್ನಮ್ಮ…
ಕೆಲವು ಬದುಕುಗಳು ಇತಿಹಾಸವಾಗುವುದಿಲ್ಲ.…ಆದರೆ ಅವು ಬದುಕಿನ ಅರ್ಥವನ್ನು ಹೇಳಿಕೊಡುವ ಪಾಠಗಳಾಗುತ್ತವೆ. ನನ್ನ ಅಮ್ಮನ ಬದುಕು ಅಂತಹದ್ದೇ. ಮೌನದಲ್ಲಿ ಮಿಂಚಿದ ಒಂದು ದೀಪ, ನೋವಿನ ನಡುವೆ ನಿಂತ ಒಂದು ಶಕ್ತಿ.
ನನ್ನೂರಿನ ಮಣ್ಣಿನ ವಾಸನೆಯಿಂದ ತುಂಬಿದ ಅವಳ ಜೀವನ, ಬಡತನದ ನೆರಳಿನಲ್ಲಿ ಆರಂಭವಾಯಿತು. ಊರಿನ ಗಾಳಿ, ಮಣ್ಣಿನ ದಾರಿಗಳು, ಚಿಕ್ಕ ಮನೆಯ ಒಳಗೆ ತುಂಬಿಕೊAಡಿದ್ದ ದೊಡ್ಡ ಕುಟುಂಬ… ಇವೆಲ್ಲ ನನ್ನ ಅಮ್ಮನ ಲೋಕವಾಗಿತ್ತು. ಮನೆ ತುಂಬ ಮಕ್ಕಳಿದ್ದರೂ, ಅವಳ ಮನಸ್ಸಿನಲ್ಲಿ ಕೊರತೆ ಇರಲಿಲ್ಲ. ಆದರೆ ಬದುಕು ಸದಾ ಅವಳ ಜೊತೆ ಸೌಮ್ಯವಾಗಿರಲಿಲ್ಲ.
ನಾವುಗಳು ಇನ್ನೂ ಬದುಕನ್ನು ಅರ್ಥಮಾಡಿಕೊಳ್ಳದ ವಯಸ್ಸಿನಲ್ಲಿದ್ದಾಗಲೇ, ನಮ್ಮ ತಂದೆ ಈ ಲೋಕವನ್ನು ತೊರೆದರು. ಆ ಒಂದು ಕ್ಷಣ, ಅವಳ ಜೀವನವನ್ನು ಎರಡು ಭಾಗಗಳಾಗಿ ಕತ್ತರಿಸಿತು.
ಒಚಿದು ಭಾಗದಲ್ಲಿ ಕನಸುಗಳು, ಮತ್ತೊಂದು ಭಾಗದಲ್ಲಿ ಹೊಣೆಗಾರಿಕೆಗಳು.
ಆ ಕ್ಷಣದಿಂದಲೇ ನಮ್ಮ ಅಮ್ಮ ಕೇವಲ ತಾಯಿ ಮಾತ್ರವಲ್ಲ, ತಂದೆಯ ಪಾತ್ರವನ್ನೂ ಹೊತ್ತುಕೊಂಡಳು. ನನ್ನ ಅಣ್ಣನ ಜೊತೆಗೂಡಿ ಜೀವನದ ಹೊರೆ ಹೊತ್ತು ಸಾಗಿದಳು. ಹೊಟ್ಟೆ ಹಸಿವಿದ್ದರೂ ಮಕ್ಕಳ ಹೊಟ್ಟೆ ತುಂಬಿಸುವುದು ಅವಳ ಮೊದಲ ಕರ್ತವ್ಯ. ತನ್ನ ಕನಸುಗಳನ್ನು ಮಣ್ಣಿನಲ್ಲಿ ಹೂತು, ಮಕ್ಕಳ ಭವಿಷ್ಯಕ್ಕಾಗಿ ಬದುಕಿದಳು.
ಹಸಿವು, ಕಷ್ಟ, ಅಳಲು… ಇವೆಲ್ಲವೂ ಅಮ್ಮನ ದಿನಚರಿಯ ಭಾಗಗಳಾಗಿದ್ದರೂ, ಅಕೆ ಕುಸಿಯಲಿಲ್ಲ. ಮಕ್ಕಳಿಗೆ ಕಣ್ಣೀರನ್ನು ತೋರಿಸದಂತೆ, ತನ್ನ ನೋವನ್ನು ಒಳಗೆ ಮರೆಮಾಡಿಕೊಂಡಳು.
ಕಾಲದ ಓಟದಲ್ಲಿ, ನಾವೆಲ್ಲಾ ಬೆಳೆದೆವು. ತಮ್ಮ ತಮ್ಮ ಶ್ರಮದಿಂದ, ಬೆಂಗಳೂರಿನ ನಗರದಲ್ಲಿ ಬದುಕು ಕಟ್ಟಿಕೊಂಡೆವು. ಆದರೆ ಅಮ್ಮ ಮಾತ್ರ ತನ್ನ ಹಳೆಯ, ಮುರುಕಲು ಮನೆಯನ್ನು ಬಿಟ್ಟು ಹೋಗಲಿಲ್ಲ. ಆ ಮನೆ ಅವಳಿಗೆ ಕೇವಲ ಆಶ್ರಯವಾಗಿರಲಿಲ್ಲ, ಅದು ಅವಳ ಹೋರಾಟದ ಸಾಕ್ಷಿ, ಅವಳ ನೆನಪುಗಳ ದೇವಾಲಯವಾಗಿತ್ತು.
ಆದರೆ ಬದುಕು ಇನ್ನೂ ಒಂದು ಕಠಿಣ ಪರೀಕ್ಷೆಯನ್ನು ಉಳಿಸಿಕೊಂಡಿತ್ತು. ನಿಧಾನವಾಗಿ ಅವಳ ದೇಹದಲ್ಲಿ ನೋವು ಹೆಚ್ಚಾಗತೊಡಗಿತು. ಆರಂಭದಲ್ಲಿ ಸಾಮಾನ್ಯವೆಂದು ತೋಚಿದ ನೋವು, ಬಳಿಕ ಕ್ರೂರ ಸತ್ಯವಾಗಿ ಹೊರಬಂತು. ಅದೇ ಕ್ಯಾನ್ಸರ್.
ಅಲ್ಲಿ ಪ್ರಾರಂಭವಾಯಿತು ಮತ್ತೊಂದು ಯುದ್ಧ…ಎರಡು ವರ್ಷಗಳ ದೀರ್ಘ ಹೋರಾಟ.
ಆಸ್ಪತ್ರೆಗಳ ದಾರಿಗಳು ಅವಳ ಹೆಜ್ಜೆ ಗುರುತುಗಳಿಂದ ತುಂಬಿಕೊAಡವು. ಬಿಳಿ ಗೋಡೆಗಳ ನಡುವೆ, ಔಷಧಿಗಳ ವಾಸನೆ, ನೋವಿನ ಕಿರುಚಾಟಗಳು…ಇವೆಲ್ಲವೂ ಅವಳ ಹೊಸ ಜಗತ್ತಾಯಿತು. ಪ್ರತೀ ಭೇಟಿ, ಪ್ರತೀ ಪರೀಕ್ಷೆ, ಪ್ರತೀ ಚಿಕಿತ್ಸೆ…ಒಂದು ಹೊಸ ನಿರೀಕ್ಷೆ, ಮತ್ತೊಂದು ನಿರಾಸೆ.
ಅವಳ ಕಣ್ಣುಗಳಲ್ಲಿ ನೋವು ಸ್ಪಷ್ಟವಾಗಿದ್ದರೂ, ಅವಳು ಅದನ್ನು ಮಾತಿನಲ್ಲಿ ಹೇಳಲಿಲ್ಲ. “ನನಗೆ ಏನೂ ಆಗಲ್ಲ” ಎನ್ನುವ ಒಂದು ಮೃದುವಾದ ನಗು… ಅದು ಅವಳ ಶಕ್ತಿ. ಆದರೆ ಆ ನಗುವಿನ ಹಿಂದೆ ಎಷ್ಟು ನೋವು ಅಡಗಿತ್ತೋ, ಅದನ್ನು ಅವಳು ಮಾತ್ರ ಅರಿತುಕೊಂಡಳು. ನಾನು ಮೌನದಿಂದಲೇ ಎಲ್ಲವನ್ನು ಅರಿವು ನೋವು ಅನುಭವಿಸುತ್ತಿದ್ದೆ. ಆಸ್ಪತ್ರೆಯಲ್ಲಿ ಪರೀಕ್ಷೆಗೆ ರಕ್ತ ತೆಗೆಯುವಾಗ ನನ್ನ ರಕ್ತ ತೆಗೆದಷ್ಟೇ ಸಂಕಟವಾಗುತ್ತಿತ್ತು.
ಎರಡು ವರ್ಷಗಳ ಕಾಲ, ನಾವು ಆಸ್ಪತ್ರೆಗಳಿಂದ ಮನೆಗೆ, ಮನೆಗಳಿಂದ ಆಸ್ಪತ್ರೆಗೆ ಓಡಾಡುತ್ತಿದ್ದೇವು. ಜೀವನವೇ ಒಂದು ನಿರಂತರ ಅಲೆದಾಟವಾಗಿತ್ತು. ಆಪರೇಷನ್ ಮಾಡುವ ನಿರ್ಧಾರವೂ ಬಂದಿತು. ಆಪರೇಷನ್ ಆಗಿ ಅಮ್ಮ ಚೇತರಿಸಿಕೋಂಡು ಮತ್ತೆ ಊರಿಗೆ ಹೋಗಿ ಸಂತಸದಿAದ ಕೆಲ ತಿಂಗಳು ಮಾತ್ರ ಇದ್ದರು. ಅದು ಕೊನೆಯ ನಿರೀಕ್ಷೆಯಂತಿತ್ತು. ಆದರೆ ವಿಧಿ ಮತ್ತೆ ತನ್ನ ಕಠಿಣ ಮುಖ ತೋರಿಸಿತು. ಮತ್ತೆ ಕ್ಯಾನ್ಸರ್ ಕಾಡ ತೋಡಗಿತು. ಮತ್ತೆ ಬೆಂಗಳೂರಿಗೆ ಬಂದು ವೈದ್ಯರನ್ನು ಭೇಟಿ ಮಾಡಿದಾಗ , ಪುನಃ ಆಪರೇಷನ್ ಮಾಢಬೇಕೆಂದರು. ಅಷ್ಟರಲ್ಲಿ ಅಮ್ಮನಿಗೆ ಅಥವಾಗಿ ಹೋಗಿತ್ತು ..ಇನ್ನು ಆಸ್ಪತ್ರೆ ಸಹವಾಸ ಸಾಕೆಂದರು. ನನ್ನದು ಇಷ್ಟೇ ಎಂದು ನಿಟ್ಟುಸಿರು ಬಿಟ್ಟರು.
ಆ ಕ್ಷಣದಿಂದಲೇ, ಬದುಕು ನಿಧಾನವಾಗಿ ತನ್ನ ದಾರಿಯನ್ನು ಬದಲಾಯಿಸತೊಡಗಿತು.
ಕೊನೆಯ ದಿನಗಳಲ್ಲಿ, ಅವಳ ಮನಸ್ಸು ಮತ್ತೆ ತನ್ನ ಮೂಲವನ್ನು ಹುಡುಕಿತು. ‘ನನ್ನ ಊರಿಗೆ ಕರೆದೊಯ್ಯಿರಿ’ ಅದು ಅವಳ ಮೌನ ವಿನಂತಿ. ಬೆಂಗಳೂರಿನ ಗದ್ದಲ, ಆಸ್ಪತ್ರೆಯ ಗೋಡೆಗಳು ಅವಳಿಗೆ ದೂರವಾಗಿಬಿಟ್ಟವು. ಅವಳು ತನ್ನ ನೆಲದ ಮಣ್ಣನ್ನು, ತನ್ನ ಮನೆತನದ ವಾಸನೆಯನ್ನು ಮತ್ತೆ ಅನುಭವಿಸಲು ಬಯಸಿದಳು.
ಹಾಗೆಯೇ, ನಾವು ಅವಳನ್ನು ಊರಿಗೆ ಕರೆದೊಯ್ದೆವು.
ಆ ಹಳೆಯ ಮನೆ, ಆ ಗೋಡೆಗಳು, ಆ ನೆನಪುಗಳು… ಎಲ್ಲವೂ ಅವಳನ್ನು ಮತ್ತೆ ಅಪ್ಪಿಕೊಂಡವು. ಅಲ್ಲೇ, ತನ್ನ ಬದುಕಿನ ವೃತ್ತವನ್ನು ಪೂರ್ಣಗೊಳಿಸಿದಳು. ಮೌನವಾಗಿ, ಶಾಂತಿಯುತವಾಗಿ, ತನ್ನ ಕೊನೆಯ ಉಸಿರನ್ನು ತೆಗೆದುಕೊಂಡಳು.
ಅವಳು ಹೋಗಿಬಿಟ್ಟಳು…ಆದರೆ ಅವಳ ಕಥೆ ಮುಗಿದಿಲ್ಲ…!? ಇಂದು ನಾವು ಎಲ್ಲರೂ ನಮ್ಮ ನಮ್ಮ ಬದುಕಿನಲ್ಲಿ ನಿಂತಿದ್ದೇವೆ. ನಮ್ಮ ಸಾಧನೆಗಳ ಹಿಂದೆ, ಅವಳ ತ್ಯಾಗದ ನೆರಳು ಇದೆ. ಅವಳು ನಮ್ಮನ್ನು ಬೆಳೆಸಿದ ರೀತಿಯೇ, ನಮ್ಮ ದೊಡ್ಡ ಸಂಪತ್ತು.
ಅಮ್ಮ ಎಂದರೆ ಕೇವಲ ಜೀವ ಕೊಟ್ಟವಳು ಅಲ್ಲ… ಬದುಕನ್ನು ಕಲಿಸಿದವಳು. ಕೆಲವು ಬೆಳಕುಗಳು ನಂದಿದರೂ, ಅವುಗಳ ಉಷ್ಣತೆ ಎಂದಿಗೂ ಕಡಿಮೆಯಾಗುವುದಿಲ್ಲ. ನನ್ನ ಅಮ್ಮ ಕೂಡ ಅಂತಹ ಬೆಳಕು. ಅವಳು ಕಣ್ಣಿಗೆ ಕಾಣದಿದ್ದರೂ, ಅವಳ ಪ್ರೀತಿ, ಅವಳ ಪಾಠಗಳು ನಮ್ಮೊಳಗೆ ಸದಾ ಬೆಳಗುತ್ತಿವೆ.
ನನ್ನ ಬರಹಗಳ ಮೋದಲ ಓದುಗರಾಗಿದ್ದರು. ಮೋದಲ ಪುಸ್ತಕ ಪ್ರಕಟವಾದಾಗ ಹಿರಿಹಿರಿ ಹಿಗ್ಗಿದಾಕೆ, ಬರೋಬ್ಬರಿ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದಾಕೆ. ಅದಷ್ಟೋ ಮೋಕ್ಕಳು, ಮರಿ ಮಕ್ಕಳನ್ನು ಸಾಕಿದಾಕೆ. ತನಗೆ ಊಟವಿಲ್ಲದಿದ್ದರೂ ಬಂದ ನೆಂಟರಿಗೆ ಬಡಿಸಿ, ತಾನು ನೀರು ಕುಡಿದು ಉಪವಾಸ ಮಲಗಿದಾಕೆ. ಮನೆಗೆ ಬಂದವರಿಗೆ ಸಂತೋಷದಿAದ ಅಥಿತಿ ಸತ್ಕಾರ ಮಾಡಿದಾಕೆ. ಊರಿನಲ್ಲಿ ಒಳ್ಳೆ ಹೆಸರು ಗಳಿಸಿದಾಕೆ. ಸೋಬಾನೆ ಹಾಡುಗಳನ್ನು ಸೋಗಸಾಗಿ ಹಾಡಿದಾಕೆ. ಓದಿಲ್ಲದಿದ್ದರೂ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಮತ್ತು ಕೂತೂಹಲ ಹೋಂದಿದಾಕೆ.
ಅವರಿಂದ ನಾನು ಕಲಿತ ಪಾಠವೆಂದರೆ ಎಲ್ಲರನ್ನೂ ಪ್ರೀತಿಸಿ, ವಿಶ್ವಾಸದಿಂದ ನೋಡುವುದು, ಎಷ್ಟೇ ಕಷ್ಠಗಳು ಬಂದರೂ ಸಹಿಸುವುದು, ಅನ್ಯರು ಮಾಡುವ ಅವಮಾನವನ್ನು ಸಹಿಸುವುದು, ಸಮಯದ ಪಾಲನೆ, ನಮಗೆ ಗೋತ್ತಿರುವುದನ್ನು ಬೇರೆಯವರಿಗೆ ಹೇಳಿ, ನಮ್ಮಿಂದ ಅವರಿಗಾಗುವ ಸಹಾಯ ಮಾಡುವುದು…ಮುಂತಾದ ವಿಷಯಗಳನ್ನು ಆಕೆಯ ಜೀವನದಿಂದ ಕಲಿತಿದ್ದೇನೆ ಮತ್ತು ಈಗಲೂ ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೋಳ್ಳಲು ಯತ್ನಿಸುತ್ತಿದ್ದೇನೆ.
ಆಕೆ ಹೇಳುತ್ತಿದ್ದದ್ದು ಈಗಲೂ ಪ್ರತಿ ದಿನ ನೆನಪಾಗುತ್ತೆ. ಯಾರಾದರೂ ನಮ್ಮಂದ ಸಹಾಯ ಕೇಳಿದರೆ ಮಾಡಬೇಕು. ಏಕೆಂದರೆ ಅವರಿಗೆ ಗೋತ್ತಿಲ್ಲದ್ದಕ್ಕೆ ಕೇಳುತ್ತಾರೆ. ಗೋತ್ತಿದ್ದರೆ ಅವರೇಕೆ ಕೇಳುತ್ತಾರೆ..? ಎನ್ನುತ್ತಿದ್ದ ಅಮ್ಮನ ಮಾತುಗಳು ಈಗಲೂ ಆಗಾಗ ನೆನಪಾಗುತ್ತದೆ. ಅಮ್ಮ ಸಮಯದ ಪಾಲನೆಯನ್ನು ಚಾಚೂ ತಪ್ಪದಂತೆ ಮಾಡುತ್ತಿದ್ದರು. ಇಷ್ಟು ಗಂಟೆಗೆ ಬರುತ್ತೇನೆ ಎಂದರೆ ಎಂದೂ ತಪ್ಪುತ್ತಿರಲಿಲ್ಲ. ಆ ಸಮಯದ ಶಿಸ್ತು ಪಾಲನೆ ಮಾಡುವುದು ನಮಗೂ ಆಗುತ್ತಿಲ್ಲ. ಇನ್ನು ಕಷ್ಠಗಳು ಬಂದಾಗ ದೇವರಿದ್ದಾನೆ ಎಂದು ಧೃಡವಾಗಿ ನಂಬಿ ಬದುಕುತ್ತಿದ್ದರು. ಯಾರಾದರೂ ಬೈದರೆ ಅಥವಾ ಅವಮಾನ ಮಾಡಿದರೆ, ಅವರು ಮಾಡಿದ್ದು ಅವರು ಅನುಭವಿಸುತ್ತಾರೆ ಎಂದು ಹೇಳಿ, ಪ್ರತಿಕ್ರಿಯಿಸದೆ ಸುಮ್ಮನಾಗುತ್ತಿದ್ದರು. ಅಷ್ಟು ತಾಳ್ಮೆ ಅವರಿಗಿತ್ತು. ಇವೆಲ್ಲವನ್ನು ಮಕ್ಕಳಾದ ನಾವುಗಳು ಬದುಕಿನಲ್ಲಿ ಅಳವಡಿಸಿಕೋಳ್ಳಬೇಕಾದ ಸಂಗತಿಗಳಾಗಿವೆ.
ಅಂದ ಹಾಗೆ ನನ್ನಮ್ಮನ ಹೆಸರು ಏನು ಗೋತ್ತೆ…? ಜಯಮ್ಮ.…ಆಕೆಯ ಹೆಸರಿನಂತೆಯೇ ಬದುಕನ್ನು ಜಯಿಸಿದಾಕೆ. ಆಕೆ ನಮ್ಮೆಲ್ಲಾ ಮನಮನೆಗಳಲ್ಲಿ ಸದಾ ಹಚ್ಚ ಹಸಿರಾಗಿದ್ದಾಳೆ.
ಕೊನೆಗೊಂದು ಮಾತು…
ಅಮ್ಮ ಎಂದಿಗೂ ಸಾಯುವುದಿಲ್ಲ…
ಅವಳು ನಮ್ಮ ನೆನಪುಗಳಲ್ಲಿ,
ನಮ್ಮ ಬದುಕಿನಲ್ಲಿ ಸದಾ ಬದುಕುತ್ತಾಳೆ…!

 

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb