ಸುದ್ದಿಸಂಗಾತಿ ನ್ಯೂಸ್
ಬೆಂಗಳೂರು: ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಜೀವನ್ಮುಖಿ ಕನ್ನಡ ಪಾಕ್ಷಿಕ ಪತ್ರಿಕೆಯು ನೀಡುತ್ತಿರುವ ೧೬ನೇ ವರ್ಷದ “ಜೀವನ್ಮುಖಿ ಪ್ರಶಸ್ತಿ” ಪುರಸ್ಕಾರಕ್ಕೆ ರಾಜ್ಯ ಮಟ್ಟದ ನಾಲ್ಕು ಮಂದಿ ಗಣ್ಯ ಸಾಧಕರು ಆಯ್ಕೆಯಾಗಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಡಾ. ಆರತಿ ಕೃಷ್ಣ, ಲೇಖಕರು, ಆಯುಕ್ತರು, ಗೃಹ ಮಂಡಳಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಐಎಎಸ್ ಅಧಿಕಾರಿಯಾದ ಶ್ರೀ ಕೆ.ಎ. ದಯಾನಂದ, ಬೆಂಗಳೂರು ಪಶ್ಚಿಮ ವಿಭಾಗ ಉಪ ಪೊಲೀಸ್ ಆಯುಕ್ತರಾದ ಶ್ರೀ ಎನ್. ಯತೀಶ್ ಐಪಿಎಸ್ ಮತ್ತು ಸಾಹಿತಿ ಹಾಗೂ ಸಾಂಸ್ಕೃತಿಕ ಸಂಘಟಕರಾದ ಶ್ರೀ ನಂ. ನಂಜಪ್ಪ ರಾಜಣ್ಣ ರವರು ೨೦೨೬ರ “ಜೀವನ್ಮುಖಿ ಪ್ರಶಸ್ತಿ” ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. 5000 ನಗದು, ಫಲಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
ಈ ಸಮಾರಂಭವು ದಿನಾಂಕ : ೦೭-೦೬-೨೦೨೬ರ ಭಾನುವಾರ ಸಂಜೆ ೪-೦೦ ಗಂಟೆಗೆ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಸಿದ್ಧ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ರವರು ಉದ್ಘಾಟನೆ ಮಾಡುವರು, ಕರ್ನಾಟಕ ಜಾನಪದ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರು ಹಾಗೂ ನಿವೃತ್ತ ಐಎಎಸ್ ಅಧಿಕಾರಿಯಾದ ಶ್ರೀ ಟಿ ತಿಮ್ಮೇಗೌಡ ರವರು ಪ್ರಶಸ್ತಿ ಪ್ರದಾನ ಮಾಡುವರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷರಾದ ಶ್ರೀ ಪಿ. ಮಲ್ಲಿಕಾರ್ಜುನಪ್ಪ ರವರು ಅಧ್ಯಕ್ಷತೆ ವಹಿಸುವರು.
ಇದೇ ಸಂದರ್ಭದಲ್ಲಿ ನಾಡಿನ ಪ್ರತಿಭಾವಂತ ಬಾಲ ಪ್ರತಿಭೆಗಳಾದ ಕ್ಷಮ ಯು. ಐತಾಳ್, ಚಿಂರತ್ ಎಸ್., ಶಿವಾನಿ ಬಿ., ಖುಷಿ ಪ್ರದೀಪ್, ಹಾಸಿನಿ ಪಿ. ಗೌಡ, ರಂಜಿತಾ ಬಿ.ಎನ್., ಎಚ್.ಎಸ್. ದೀಪ್ತಿ ಪ್ರೀಯಾ, ಚಿಂರತ್ ಎಸ್. ರವಿ, ದೀಕ್ಷಿತ ಕರಣ, ಸಮನ್ವಿ ಸಂತೋಷ, ಅನಿತ್ ಎಲ್., ಗಗನ್ ಬಿ., ಹಿತೈಷಿನಿ ಆರ್., ಪ್ರಜ್ವಲ್ ಎಸ್., ವಿಭಾ ವಿ., ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಗುವುದು ಎಂದು ಖ್ಯಾತ ಸಂಘಟಕರಾದ ಜೀವನ್ಮುಖಿ ಸುರೇಶ್ ತಿಳಿಸಿದ್ದಾರೆ.


ಧನ್ಯವಾದಗಳು ಸರ್