
ಸುದ್ದಿಸಂಗಾತಿ ನ್ಯೂಸ್
ತುಮಕೂರು: ಕಲಾ ಮಾಧ್ಯಮ ತಂಡವರಿಂದ ನಿನ್ನೆ ನಗರದ ಕಸಾಪ ಭವನದಲ್ಲಿ ನಡೆದ ನನ್ನ ತೇಜಸ್ವಿ ನಾಟಕ ಪ್ರದರ್ಶನವು ತುಂಬಾ ಯಶಸ್ವಿಯಾಗಿ ಜನ ಮೆಚ್ಚುಗೆ ಗಳಿಸಿದೆ.
ಈ ನಾಟಕವನ್ನು ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್ ಮತ್ತು ಬಹುಮುಖಿ ಬಳಗದ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.. ನಾಟಕವನ್ನು ಕಥಾ ಕೀರ್ತನಕಾರರಾದ ಡಾ.ಲಕ್ಷ್ಮಣ್ ದಾಸ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಲೇಖಕಿ ಬಾ.ಹ.ರಮಾಕುಮಾರಿ, ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್ನ ಅಧ್ಯಕ್ಷರಾದ ಷಡಕ್ಷರಿ ಎಂ.ವಿ. ಪ್ರಾಸ್ತಾವಿಕ ಭಾಷಣ ಮಾಡಿದರು. ಬಹುಮುಖಿ ಬಳಗದ ಅಧ್ಯಕ್ಷರಾದ ಸಾಹಿತಿ ಹಡವನಹಳ್ಳಿ ವೀರಣ್ಣಗೌಡ ನಾಟಕ ಬಗ್ಗೆ ಮಾತನಾಡಿದರು.
ನೇತ್ರತಜ್ಞ ಡಾ.ದಿನೇಶ್ಕುಮಾರ್, ಸುದ್ದಿ ಸಂಗಾತಿ ಧ್ವನಿ ಸಂಪಾದಕ ಮಂಜುನಾಥ್ ದಂಡಿನಶಿವರ, ಆರ್.ಪಿ.ಶಶಿಧರ್ ಮತ್ತು ಚಂದ್ರಶೇಖರ್ ನಿರಂತರ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ನಾಟಕ ಪ್ರದರ್ಶನಕ್ಕೆ ದಾರಿಬುತ್ತಿ ಬಳಗ, ನವಿಲ್ ಪೌಂಡೇಶನ್, ಜನಮನ ಸೇವಾ ಚಾರಿಟೇಬಲ್ ಟ್ರಸ್ಟ್, ಸೈಡ್ಯಾನ್ಸ್ ಅಕಾಡೆಮಿಗಳು ಸಹಕಾರ ನೀಡಿದ್ದವು.
ನಾಟಕ ಪ್ರದರ್ಶನದ ನಂತರ ಕಲಾ ಮಾಧ್ಯಮ ತಂಡದ ಪರಮೇಶ್, ಶ್ರೀಮತಿ ಸವಿತಾ ಸೇರಿದಂತೆ ಎಲ್ಲಾ ರಂಗ ಕಲಾವಿದರನ್ನು
ಸನ್ಮಾನಿಸಿ ಗೌರವಿಸಲಾಯಿತು.

