ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಓದುಗರ ಮನದ ಅಂಗಳಕ್ಕೆ ಜಾರಿ ಬಿದ್ದ “ಬಿಸಿರೊಟ್ಟಿ…!?”

Posted on September 27, 2026 by suddisangathi

ಸಮಾಜದಲ್ಲಿ ಅನ್ಯಾಯಕ್ಕೆ ಮನ್ನಣೆ, ಅರ್ಹತೆಗೆ ನಿರ್ಲಕ್ಷ್ಯ:

ಹಿರಿಯ ಪತ್ರಕರ್ತ ಟಿ.ಕೆ. ತ್ಯಾಗರಾಜ್ ಆತಂಕ

ತುಮಕೂರಿನಲ್ಲಿ ಭಾನುವಾರ ನಡೆದ ಲೇಖಕಿ ವಿವೇಕ ಕೆ.ವಿ. ಅವರು ರಚಿಸಿರುವ ಬಿಸಿರೊಟ್ಟಿ ಮತ್ತು ಇತರ ಕತೆಗಳು ಪುಸ್ತಕ ಬಿಡುಗಡೆ ಸಮಾರಂಭದ ಒಂದು ನೋಟ

 

ಪತ್ರಕರ್ತ ಮತ್ತು ಲೇಖಕ ಮಂಜುನಾಥ್‌ ದಂಡಿನಶಿವರ ಅವರನ್ನು ಗೌರವಿಸಿ, ಸನ್ಮಾನಿಸಿದ ಸಮಾರಂಭದ ಹಿರಿಯ ಗಣ್ಯರು

ತುಮಕೂರು: ಆಧುನಿಕ ಆವಿಷ್ಕಾರಗಳನ್ನು ಸಕಾರಾತ್ಮಕವಾಗಿ ಬಳಸುವ ಬದಲು ನಕಾರಾತ್ಮಕ ಉದ್ದೇಶಗಳಿಗೆ ಬಳಸುತ್ತಿರುವ ಪರಿಣಾಮ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ರಾಜಕೀಯ, ಸಾಮಾಜಿಕ ಹಾಗೂ ಜನರ ಬೌದ್ಧಿಕ ಮಟ್ಟದಲ್ಲಿನ ಕೆಲವು ಬೆಳವಣಿಗೆಗಳು ಇದಕ್ಕೆ ಕಾರಣವಾಗಿವೆ ಎಂದು ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕರಾದ ಟಿ.ಕೆ. ತ್ಯಾಗರಾಜ್ ಅಭಿಪ್ರಾಯಪಟ್ಟರು.
ಅವರು ನಗರದ ಕಸಾಪದ ಕನ್ನಡ ಭವನದಲ್ಲಿ ಭಾನುವಾರ ಬಹುಮುಖಿ ಬಳಗ ಮತ್ತು ಅಪೂರ್ವ ಪ್ರಕಾಶನದ ವತಿಯಿಂದ ನಡೆದ ಕಥೆಗಾತಿ ವಿವೇಕ ಕೆ.ವಿ. ಅವರ ʼಬಿಸಿರೊಟ್ಟಿ ಮತ್ತು ಇತರ ಕಥೆಗಳುʼ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಇಂದು ದೇಶದ ವಿವಿಧ ಕ್ಷೇತ್ರಗಳಲ್ಲಿ ಕರಾಳ ಪ್ರವೃತ್ತಿಗಳು ಪ್ರಭಾವ ಬೀರುತ್ತಿದ್ದು, ಇದರ ಪರಿಣಾಮವಾಗಿ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಹಾಗೂ ನ್ಯಾಯಾಂಗ ಸೇರಿದಂತೆ ಹಲವು ಕ್ಷೇತ್ರಗಳು ಕಲುಷಿತಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪರಿಣಾಮವಾಗಿ ಜನರು ನೆಮ್ಮದಿ ಹಾಗೂ ಸಂತೋಷದಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
ಅನ್ಯಾಯ ಹಾಗೂ ಅಕ್ರಮಗಳಿಗೆ ಕಾರಣರಾಗುವವರನ್ನೇ ದೇಶದ ಉದ್ದಾರಕರು ಎಂಬಂತೆ ಬಿಂಬಿಸಿ, ಹೊಗಳುವಂತಹ ದಯನೀಯ ಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿರುವುದು ವಿಷಾದನೀಯ. ಜನರು ಸತ್ಯ-ಸುಳ್ಳು, ನ್ಯಾಯ-ಅನ್ಯಾಯಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವ ಜವಾಬ್ದಾರಿಯನ್ನು ಹೊಂದಬೇಕು ಎಂದು ಅವರು ತಿಳಿಸಿದರು.
ಭಾರತೀಯ ಸಂಸ್ಕೃತಿ ಹಾಗೂ ಸಾಹಿತ್ಯವು ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವದ ಪ್ರಮುಖ ಭಾಗವಾಗಿದೆ. ಆದರೆ ಏಕತೆಯ ಹೆಸರಿನಲ್ಲಿ ಕೆಲವೊಮ್ಮೆ ಸಂಸ್ಕೃತಿ ಮತ್ತು ಸಾಹಿತ್ಯದ ವೈವಿಧ್ಯತೆಯನ್ನು ಬಗ್ಗುಬಡಿಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪ್ರವೃತ್ತಿಗಳಿಂದ ನಮ್ಮ ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಧಕ್ಕೆಯಾಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.
ಸಮಾಜದಲ್ಲಿ ಸಂಚು ಹಾಗೂ ಕುತಂತ್ರಗಳಿಗೆ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ, ಅರ್ಹತೆ, ಪ್ರತಿಭೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುವ ವ್ಯಕ್ತಿಗಳಿಗೆ ಸೂಕ್ತ ಗೌರವ ಮತ್ತು ಪ್ರಶಸ್ತಿಗಳು ದೊರೆಯದೆ ಇರುವುದು ಬೇಸರದ ಸಂಗತಿಯಾಗಿದೆ. ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿಗಳು ಮರೀಚಿಕೆಯಾಗುತ್ತಿರುವುದು ವ್ಯವಸ್ಥೆಯಲ್ಲಿನ ಲೋಪಗಳಿಗೆ ಕನ್ನಡಿ ಹಿಡಿದಂತಾಗಿದೆ ಎಂದು ಟಿ.ಕೆ. ತ್ಯಾಗರಾಜ್ ಹೇಳಿದರು.
‘ಬಿಸಿರೊಟ್ಟಿ ಮತ್ತು ಇತರ ಕಥೆಗಳು’ ಕೃತಿಯನ್ನು ಪರಿಚಯಿಸುತ್ತಾ ಮಾತನಾಡಿದ ವಿಮರ್ಶಕರು ಹಾಗೂ ಕಥೆಗಾರರಾದ ರವಿಕುಮಾರ್ ನೀಹ ಮಾತನಾಡುತ್ತಾ, ಕೃತಿಯಲ್ಲಿರುವ ಪ್ರತಿಯೊಂದು ಕಥೆಯೂ ಓದುಗರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಸಿದ್ಧ ಮಾದರಿಗಳನ್ನು ಮೀರಿ ವಿಭಿನ್ನ ಕಥಾಹಂದರದಲ್ಲಿ ರೂಪುಗೊಂಡಿರುವ ಈ ಕೃತಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಸ್ಪರ್ಧೆಗಳಿಗಾಗಿ ಕಥೆಗಳನ್ನು ಕಟ್ಟುವ ಪ್ರವೃತ್ತಿ ಹೆಚ್ಚಾಗಿದೆ. ಅಂತಹ ಕಥೆಗಳಲ್ಲಿ ಭಯ, ನಿಗೂಢತೆ ಹಾಗೂ ರೋಮಾಂಚನದ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದರೆ ಎಲ್ಲ ಕಥೆಗಳಲ್ಲೂ ಜೀವಂತ ಅನುಭವ ಇರಬೇಕೆಂದಿಲ್ಲ. ಓದುಗರ ಎದೆಯನ್ನು ಮುಟ್ಟುವ, ಮನಸ್ಸಿನಲ್ಲಿ ಬಹುಕಾಲ ಉಳಿಯುವ ಕಥೆಗಳು ಮಾತ್ರ ನಿಜವಾದ ಅರ್ಥದಲ್ಲಿ ಸಾರ್ಥಕವಾಗುತ್ತವೆ ಎಂದು ಹೇಳಿದರು.
ಒಂದು ಕಥೆಯನ್ನು ಓದಿದ ನಂತರ ‘ಇದು ನನ್ನ ಕಥೆಯೇ’ ಎಂಬ ಭಾವನೆ ಓದುಗರಲ್ಲಿ ಮೂಡಬೇಕು. ಕಥೆಯ ಪಾತ್ರಗಳು ಹಾಗೂ ಘಟನೆಗಳು ಓದುಗರ ಬದುಕಿನೊಂದಿಗೆ ಬೆಸೆದುಕೊಂಡಾಗ ಕಥೆ ಹೆಚ್ಚು ಆಪ್ತವಾಗುತ್ತದೆ. ಈ ನಿಟ್ಟಿನಲ್ಲಿ ವಿವೇಕ ಅವರ ‘ಬಿಸಿರೊಟ್ಟಿ’ ಕೃತಿ ಓದುಗರ ಮನಸ್ಸಿಗೆ ಹತ್ತಿರವಾಗುತ್ತದೆ ಎಂದು ರವಿಕುಮಾರ್ ನೀಹ ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಥೆಗಾತಿ ಮತ್ತು ಸಂಶೋಧಕಿಯಾದ ಡಾ. ಕೆ. ಷರೀಫಾ, ನಮ್ಮೊಳಗೆ ಮೂಡುವ ತಲ್ಲಣಗಳು, ನೋವುಗಳು ಹಾಗೂ ಸಾಮಾಜಿಕ ಅನುಭವಗಳನ್ನು ಕಥೆಗಳ ಮೂಲಕ ಅಭಿವ್ಯಕ್ತಿಸುವ ಕೆಲಸವನ್ನು ಲೇಖಕಿಯರು ಮಾಡಬೇಕು ಎಂದರು.
ಬರವಣಿಗೆ ಕೇವಲ ಮನರಂಜನೆಗೆ ಸೀಮಿತವಾಗದೆ, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು. ಸಾಹಿತ್ಯದ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಆದರೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸದೆ ಮೌನವಾಗಿರುವುದು ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ಹಾಗೂ ಪ್ರಗತಿ ಪರ ಚಿಂತಕಿಯಾದ ಬಾ.ಹ. ರಮಾಕುಮಾರಿ ಮಾತನಾಡಿ, ಸಮಾಜ ಇಂದು ಸ್ವಾರ್ಥದ ವಾತಾವರಣದಲ್ಲಿ ಸಿಲುಕಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಸುವ ಮೂಲಕ ಸಮಾಜವನ್ನು ವಿಭಜಿಸುವ ಹಾಗೂ ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಇಂತಹ ಬೆಳವಣಿಗೆಗಳ ಬಗ್ಗೆ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು. ಅನ್ಯಾಯ ಹಾಗೂ ಸಾಮಾಜಿಕ ಅಸಮಾನತೆಗಳ ವಿರುದ್ಧ ಸಂಘಟಿತವಾಗಿ ಧ್ವನಿ ಎತ್ತುವ ಅನಿವಾರ್ಯತೆ ಎದುರಾಗಿದೆ ಎಂದು ಹೇಳಿದರು.
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. ಮಹಿಳಾ ಸಬಲೀಕರಣದ ಜೊತೆಗೆ ಸಮಾಜದಲ್ಲಿ ಸಮಾನತೆಯ ವಾತಾವರಣ ನಿರ್ಮಾಣವಾಗಬೇಕಿದೆ. ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಗೌರವ ದೊರೆಯುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಲೇಖಕಿ ಆಶಾ ಬಗ್ಗನಡು, ಕಸಾಪದ ಜಿಲ್ಲಾ ಅಧ್ಯಕ್ಷರಾದ ಸಿದ್ದಲಿಂಗಪ್ಪ, ಸಂಘಟಕರಾದ ಸತೀಶ್ ಜವರೇಗೌಡ, ಕವಿಯತ್ರಿ ರಂಗಮ್ಮ ಹೊದೇಕಲ್, ಕೃತಿಯ ಲೇಖಕಿ ವಿವೇಕಾ ಕೆ.ವಿ. ಬಹುಮುಖಿ ಬಳಗದ ಹಡವನಹಳ್ಳಿ ವೀರಣ್ಣಗೌಡ, ಮಂಜುನಾಥ್ ದಂಡಿನಶಿವರ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸುದ್ದಿಸಂಗಾತಿ ಧ್ವನಿ ಮತ್ತು ಕುಂಚಶ್ರೀ ವಾರ್ತೆ ಮಾಸಪತ್ರಿಕೆಯ ಸಂಪಾದಕರು ಹಾಗೂ ಬಹುಮುಖಿ ಬಳಗದ ಕಾರ್ಯದರ್ಶಿಯಾದ ಮಂಜುನಾಥ್‌ ದಂಡಿನಶಿವರ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು. ಬೆಂಗಳೂರಿನ ಜನಮನ ಸೇವಾಟ್ರಸ್ಟ್‌, ಗೋಪಿಕಾ ಪ್ರಕಾಶನ, ರಾಜರ್ಷಿ ಪ್ರಕಾಶನ,  ಶಿವರ ಬುಕ್‌ ಹೌಸ್‌, ಸಿರಿಗಂಧ ಸಾಂಸ್ಕೃತಿಕ ಸೇವಾ ಟ್ರಸ್ಟ್‌,  ತುಮಕೂರಿನ ದಾರಿಬುತ್ತಿ, ಜಿಲ್ಲಾ ಲೇಖಕಿಯರ ಸಂಘ, ನೆವಿಲ್‌ ಪೌಂಡೇಷನ್‌, ಸೈಡ್ಯಾಸ್ಸ್‌ ಮುಂತಾದ ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb