ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಅಗತ್ಯಕ್ಕಿಂತ ಹೆಚ್ಚಿನ ತಂತ್ರಜ್ಞಾನ ಬಳಕೆ ಮಾನವ ಕುಲಕ್ಕೆ ಅಪಾಯಕಾರಿ : ರಾಮಚಂದ್ರ ಕೋಟೆಮನೆ

Posted on September 27, 2026 by suddisangathi

ಮಣಿಕಂಠ ಭಟ್ಟರ  “ಶ್ರೀ ತಪೋಮಾರ್ಗ” ಕೃತಿ  ಲೋಕಾರ್ಪಣೆ

ಬೆಂಗಳೂರು: ತಂತ್ರಜ್ಞಾನ ಯುಗದಲ್ಲಿ “ಋಷಿ” ಪರಂಪರೆ ಸನ್ಮಾರ್ಗಕ್ಕೆ ದಾರಿ ಎಂಬ ತತ್ವದ ಅಡಿಯಲ್ಲಿ ಸಂಸ್ಕೃತಿ ಚಿಂತಕರಾದ
ಮಣಿಕಂಠ ಭಟ್ಟ ಅವರು ರಚಿಸಿರುವ “ಶ್ರೀ ತಪೋಮಾರ್ಗ” ಕೃತಿಯನ್ನು ಲೋಕಾರ್ಪಣೆ ಗೊಳಿಸಿದರು. ಬೆಂಗಳೂರಿನ ಗಿರಿನಗರದ ಶಂಕರಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ :
ವೇದ ವಿಜ್ಞಾನ ಗುರುಕುಲದ ಕುಲಪತಿಗಳಾಗದ ರಾಮಚಂದ್ರ ಕೋಟೆಮನೆ, ಹಿರಿಯ ನ್ಯಾಯವಾದಿ ಎಸ್. ಎಸ್. ನಾಗಾನಂದ್, ಹಿರಿಯ ಮನೋವೈದ್ಯ ಡಾ. ದಿವಾಕರ್ ಗೌತಮ್ ಎನ್, ರಾಜರ್ಷಿ ಪ್ರಕಾಶನದ ಎಸ್.ಆರ್.ಗೋವಿಂದರಾಜು ಹಾಗೂ ಶ್ರೀ ವಸಿಷ್ಠ ಚಾರಿಟೇಬಲ್ ಟ್ರಸ್ಟಿನ ಮಣಿಕಂಠ ಭಟ್ಟ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

” ಶ್ರೀ ತಪೋಮಾರ್ಗ ” ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಸಂಸ್ಕೃತ ಪಂಡಿತರಾದ ವಿ. ರಾಮಚಂದ್ರಮೂರ್ತಿ
ಅವರು ಜ್ಞಾನ ಮತ್ತು ವಿಜ್ಞಾನದ ವೈಜ್ಞಾನಿಕ ವಿಷಯಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅತ್ಯಂತ ಕ್ಲಿಷ್ಟಕರ ಸಂಗತಿಗಳನ್ನು ಸರಳವಾಗಿ ತಿಳಿಸಿಕೊಡುವ ಪ್ರಯತ್ನದ “ಶ್ರೀ ತಪೋಮಾರ್ಗ” ಕೃತಿಯನ್ನು ಸಂಸ್ಕೃತಿ ಚಿಂತಕರಾದ ಮಣಿಕಂಠ ಭಟ್ಟ ರಚಿಸಿ ರಾಜರ್ಷಿ ಪ್ರಕಾಶನದಿಂದ ಪ್ರಕಟಿಸಲಾಗಿದೆ ಈ “ಶ್ರೀ ತಪೋಮಾರ್ಗ” ಕೃತಿಯು ಸಮಾಜಕ್ಕೆ ಉಪಯುಕ್ತವಾಗಿದೆ ಎಂದರು.

ಹಿಂದಿನ ಋಷಿಮುನಿಗಳು ಅನ್ನ ಆಹಾರಗಳನ್ನು ತ್ಯಜಿಸಿ ಕಠೋರ ತಪಸ್ಸಿನ ಮೂಲಕ ಸಾಧಿಸಿದ ಜ್ಞಾನವನ್ನು ಹಲವಾರು ಗ್ರಂಥಗಳಲ್ಲಿ ಉಲ್ಲೇಖಿಸಿದ್ದು ಇದೆಲ್ಲವನ್ನು ಸಮನ್ವಯಗೊಳಿಸಿ ರಚಿಸಿರುವ ಕೃತಿ “ತಮೋಮಾರ್ಗ”ವಾಗಿದೆ ಎಂದರು. ಇಂದಿನ ಆಧುನಿಕತೆಯಲ್ಲಿ ತಪಸ್ಸಿನ ರೂಪುರೇಷೆಗಳನ್ನು ಹಂತ ಹಂತವಾಗಿ ವಿವರಿಸಿರುವ ಕೃತಿ ಇದಾಗಿದೆ ಎಂದರು, ತಪಸ್ಸು ಎಂದರೆ ಯಾವುದೋ ಕಾಡಿನಲ್ಲಿ ಜಟಾಧರನಾಗಿ ಮಾಡುವದಲ್ಲ ನಿತ್ಯ ಜೀವನದಲ್ಲಿ ಮಾನವ ಶರೀರಕ್ಕೆ ಬೇಕಾಗುವ ಸಿದ್ಧಾಂತವನ್ನು ತಪಸ್ಸಿನ ಮೂಲಕ ಸಾಧಿಸಲು ಐದು ಭಾಗಗಳಾಗಿ ಕೃತಿಯಲ್ಲಿ ವಿವರಿಸಿದ್ದಾರೆ. ವೇದ ವಿಜ್ಞಾನದ ವಿವರಗಳನ್ನು ಅರಿಯುವ ಮಾರ್ಗ “ತಪೋಮಾರ್ಗ”ವಾಗಿದೆ ಎಂದರು.

ನಂತರ ಮಾತನಾಡಿದ ರಾಮಚಂದ್ರ ಕೋಟೆಮನೆಯವರು ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ, ಅವಶ್ಯಕತೆಗಿಂತಲೂ ಹೆಚ್ಚು ಮೊಬೈಲ್
ಬಳಸುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಮನುಷ್ಯನ ಜ್ಞಾನ ಸಂಪಾದನೆ ಸಂಕುಚಿತವಾಗುತ್ತಿದೆ. ಯಾವುದು ಸಹ ಸ್ಮೃತಿಯಲ್ಲಿ ಉಳಿಯುತ್ತಿಲ್ಲ ಸಾಮಾನ್ಯವಾಗಿ ಮನುಷ್ಯನ ಬಲ ಮತ್ತು ಎಡ ಮೆದುಳು ಅತ್ಯಂತ ಸೂಕ್ಷ್ಮ ಅಂಗವಾಗಿದೆ. ಸುಮಾರು ಇಪ್ಪತ್ತು ಸಾವಿರ ಪದಗಳನ್ನು ಅಂತರ್ಗತ ಮಾಡಿಕೊಳ್ಳುತ್ತದೆ ಮತ್ತು ಋಗ್ವೇದ ಯಜುರ್ವೇದ ಶ್ಲೋಕಗಳನ್ನು ಗ್ರಹಿಸುವ ಶಕ್ತಿಯನ್ನು ಹೊಂದಿದೆ. ಈಗಲೂ ಇಂತಹ ಸಾಧಕರು ನಮ್ಮೊಂದಿಗೆ ಇದ್ದಾರೆ. ಬ್ರಾಹ್ಮಿ ಸಮಯವೆಂಬುದು ಜ್ಞಾನ ವಿಕಾಸಕ್ಕೆ ಸೂಕ್ತ ಸಮಯವಾಗಿದ್ದು ಪಾಶ್ಚಿಮಾತ್ಯ ಜೀವನಶೈಲಿ ಮತ್ತು ಅಗತ್ಯಕ್ಕಿಂತ ಹೆಚ್ಚಿನ ಎಐ ಬಳಕೆ, ಒತ್ತಡದ ಜೀವನ ಶೈಲಿ, ಸಹಜ ಜೀವನ ಕ್ರಿಯೆಗೆ ಕಂಟಕವಾಗಿದೆ ಇದರಿಂದ ಹೊರಬರಲು ಋಷಿ ಮಾರ್ಗದ ಅನುಸರಣೆ ಅವಶ್ಯವಾಗಿದೆ ಎಂದರು.

ಮುಂದುವರೆದು ಮಾತನಾಡುತ್ತಾ ವೇದಾಧ್ಯಯನ ಪೀಠಗಳ ಮೇಲೆ ಉತ್ತರ ಭಾಗದಲ್ಲಿ ಆದ ದಾಳಿಯಿಂದ ಸನಾತನ ಭಾರತದಲ್ಲಿನ ಅಪಾರ ಜ್ಞಾನ ಸಂಪತ್ತು ಪರಕೀಯರ ಆಕ್ರಮಣಕ್ಕೆ ಗುರಿಯಾಯಿತು, ನಾಶವಾಯಿತು. ಆದರೆ ದಕ್ಷಿಣದಲ್ಲಿ ಶ್ರೀ ಕೃಷ್ಣದೇವರಾಯ, ಶಿವಾಜಿ ಮಹಾರಾಜರು, ಮೈಸೂರು ಅರಸರು ಧರ್ಮ ಮತ್ತು ಸಂಸ್ಕೃತಿ ರಕ್ಷಣೆಗೆ ಮುಂದಾದರು. ಹಿಂದೆ ಕ್ಷಾತ್ರಬಲ ಧರ್ಮ ರಕ್ಷಣೆಗೆ ಮುಂದಾಗುತ್ತಿತ್ತು. ಇಂದಿನ ಸಮಾಜದಲ್ಲಿ ಋಷಿ ಕುಮಾರರು ಹೆಚ್ಚಾಗಬೇಕಿದೆ ವೇದಾಧ್ಯಯನದಲ್ಲಿ ತೊಡಗಿಕೊಳ್ಳಬೇಕು ಈ ನಿಟ್ಟಿನಲ್ಲಿ ನಮ್ಮ ಮಣಿಕಂಠ ಭಟ್ಟರ ಜ್ಞಾನ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ವೈಜ್ಞಾನಿಕವಾಗಿ ಪ್ರಸ್ತುತ ಪಡಿಸಿರುವ ” ತಪೋಮಾರ್ಗ ” ಕೃತಿಯು ದಿಕ್ಕು ತಪ್ಪುತ್ತಿರುವ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಲಿ, ಭಾರತೀಯ ವಿದ್ಯೆಯ ಬಗ್ಗೆ ಎಲ್ಲರೂ ಗೌರವ ಹೆಚ್ಚಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ನಂತರ ಮಾತನಾಡಿದ ಹಿರಿಯ ನ್ಯಾಯವಾದಿಗಳಾ ಎಸ್. ಎಸ್. ನಾಗಾನಂದ್ ರವರು ಮಾತನಾಡಿ ಬಿಗ್ ಬ್ಯಾಂಗ್ ಥಿಯರಿ ಎಂಬುದು ಯಾವುದೋ ಒಂದು ಅಣುವಿನಿಂದ ಏರ್ಪಟ್ಟಿದ್ದಲ್ಲ ಬ್ರಹ್ಮಾಂಡದ ಮೂಲತತ್ತ್ವ “ಓಂ ಕಾರ ದಿಂದ ಕೂಡಿದೆ ಇಂತಹ ಅನೇಕ ವಿಚಾರಗಳನ್ನು
ವೈಜ್ಞಾನಿಕವಾಗಿ ಕಾರ್ಯನಿರ್ವಹಿಸುವ ರೀತಿಯನ್ನು ಅವಲೋಕನ ಮಾಡಿ ಲೇಖಕರು “ತಪೋಮಾರ್ಗ” ಕೃತಿಯನ್ನು ರಚಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಹಿರಿಯ ಮನೋವೈದ್ಯರಾದ ಡಾ. ದಿವಾಕರ್ ಗೌತಮ್ ಮಾತನಾಡಿ ವೇದಗಳ ಬಗ್ಗೆ ವೇದಾಂತದ ಬಗ್ಗೆ ಗಂಭೀರವಾಗಿ ವಿಷಯ ಮಂಡೆನೆಯಾಗಿರುವ ಅಧ್ಯಾತ್ಮಿಕ ಮತ್ತು ವಿಜ್ಞಾನದ ವಿವರಿಸುವ ನೂತನ ಪ್ರಯತ್ನ ಇದಾಗಿದೆ. ವಿದ್ಯಾರ್ಥಿಗಳಲ್ಲಿ ಜ್ಞಾನದ ವಿಷಯದ ಅರಿವು, ಆಸಕ್ತಿ ಹಾಗೂ ಸೃಜನಾತ್ಮಕ ಕಲಿಕೆಯ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ “ಮಣಿಕಂಠ ಭಟ್ಟ”
ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಪ್ರವೀಣರು ರಚಿಸಿದ “ಶ್ರೀ ತಪೋಮಾರ್ಗ” ವಿಜ್ಞಾನ ಮತ್ತು ಅಧ್ಯಾತ್ಮ ಸಂಪನ್ಮೂಲ ಪುಸ್ತಕವಾಗಿದೆ ಎಂದರು.

ಕಾರ್ಯಕ್ರಮದ ಮೊದಲಿಗೆ ಕು. ಅಂಜಲಿ ಅವರು ಶರಣು ಶರಣು ಹೇ ಗಣಪನೆ ಎಂಬ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ನಂತರ ರಾಘವೇಂದ್ರ ಅವರಿಂದ ವೇದ ಘೋಷ ಪಠಿಸಿದರು, ಸರಳವಾದ ನಿರೂಪಣೆ ಮತ್ತು ವಿದ್ವಾಂಸರ ನುಡಿಗಳು ಕಾರ್ಯಕ್ರಮಕ್ಕೆ ಹಚ್ಚು ಮುದ ನೀಡಿತು.

ವರದಿ- ಎಸ್‌. ಆರ್.ಗೋವಿಂದರಾಜು

 

 

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb