ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಈ ಬಾರಿ ದಸರಾ ಚಿತ್ರೋತ್ಸವ ನಿಲ್ಲಿಸಬೇಡಿ : ಚಲನಚಿತ್ರ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು)

Posted on September 6, 2026 by suddisangathi

ಸುದ್ದಿಸಂಗಾತಿ ನ್ಯೂಸ್

ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಚಲನಚಿತ್ರೋತ್ಸವವನ್ನು ಈ ಬಾರಿಯ ದಸರಾ ಉತ್ಸವದಲ್ಲಿ ಕೈಬಿಟ್ಟಿರುವುದು ಸರಿಯಲ್ಲ, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ವಾಣಿಜ್ಯ ಮಂಡಳಿ ಜಂಟಿಯಾಗಿ ಸಮಾಲೋಚಿಸಿ ಈ ಬಾರಿ ಅರ್ಥಪೂರ್ಣವಾಗಿ ದಸರಾ ಚಲನಚಿತ್ರೋತ್ಸವ ನಡೆಸಬೇಕೆಂದು ಹಿರಿಯ ಚಲನಚಿತ್ರ ನಿರ್ದೇಶಕ-ನಿರ್ಮಾಪಕ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು) ಮನವಿ ಮಾಡಿದ್ದಾರೆ.

ಕಳೆದ ೪೫ ವರ್ಷಗಳಿಂದ ತಪ್ಪದೇ ಆಚರಿಸಿಕೊಂಡು ಬರುತ್ತಿದ್ದ ದಸರಾ ಚಲನಚಿತ್ರೋತ್ಸವವನ್ನು ಈ ಬಾರಿ ಕೈಬಿಟ್ಟಿರುವುದು ಅಕ್ಷಮ್ಯವಾಗಿದೆ. ಫ್ರಾನ್ಸ್ನ ನ್ಯಾನೆಸ್ ನಗರದಲ್ಲಿ ನಡೆವ ಅಂತರರಾಷ್ಟಿçÃಯ ಕ್ಯಾನೆಸ್ ಫಿಲಂ ಫೆಸ್ಟಿವಲ್ ಮಾದರಿಯಲ್ಲಿ ಪ್ರಸಿದ್ದಿ ಪಡೆಯಬೇಕಿದ್ದ ದಸರಾ ಚಲನಚಿತ್ರೋತ್ಸವವನ್ನು ನಾವೇ ಹಾಳು ಮಾಡುತ್ತಿದ್ದೇವೆ. ಸಾಂಸ್ಕೃತಿಕ ನಗರಿ ಮೈಸೂರಿನ ದಸರೆ ಕಲೆ ಮತ್ತು ಕ್ರೀಡೆಯನ್ನು ಪ್ರೋತ್ಸಾಹಿಸುವ ಉತ್ಸವ. ಸಂಸ್ಕೃತಿ ಉತ್ತೇಜಿಸಿ ಬೆಳೆಸುವ ದಸರಾ ಸಂದರ್ಭದಲ್ಲಿ ಚಲನಚಿತ್ರೋತ್ಸವ ಕಡೆಗಣಿಸುತ್ತಿರುವುದು ವಿಷಾದನೀಯ ಸಂಗತಿ.

ಪ್ರತಿ ವರ್ಷವೂ ದಸರಾ ಚಲನಚಿತ್ರೋತ್ಸವ ಕಡೆಗಣನೆಗೆ ಒಳಗಾಗುತ್ತಿದೆ. ದಸರಾ ಚಲನಚಿತ್ರೋತ್ಸವವನ್ನು ದಸರಾ ವಸ್ತು ಪ್ರದರ್ಶನ ಮಾದರಿಯಲ್ಲಿ ಪ್ರಾಧಿಕಾರ ರಚಿಸಿದ್ದರೆ, ಅಂತರರಾಷ್ಟಿçÃಯ ಕ್ಯಾನೆಸ್ ಫಿಲಂ ಫೆಸ್ಟಿವಲ್ ಮಾದರಿಯಲ್ಲಿ ನಡೆಸಬಹುದಿತ್ತು. ಚಿತ್ರೋತ್ಸವದಲ್ಲಿ ರಾಷ್ಟಿçÃಯ ಮತ್ತು ಅಂತರರಾಷ್ಟಿçಯ ಮಟ್ಟದ ಚಿತ್ರೋದ್ಯಮಿಗಳನ್ನು ಆಹ್ವಾನಿಸಿ, ಉತ್ತಮ ಚಿತ್ರಗಳ ಪ್ರದರ್ಶನದ ಜೊತೆಗೆ ವಿಚಾರ ಸಂಕಿರಣ, ಚರ್ಚೆ-ವಿಮರ್ಶೆಗಳು, ಹಿರಿಯ ಚಿತ್ರೋದ್ಯಮಿಗಳನ್ನು ಗೌರವಿಸಿ ದಸರಾ ಪ್ರಶಸ್ತಿ ಕೊಡುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ ದಸರಾ ಚಲನಚಿತ್ರೋತ್ಸವ ನಾಡಹಬ್ಬಕ್ಕೆ ಬಹು ಮೆರುಗು ಕೊಡುತ್ತಿತ್ತು.

ಮೈಸೂರು ಕನ್ನಡ ಚಿತ್ರೋದ್ಯಮದ ತವರು ಭೂಮಿ. ೧೯೪೫ರಲ್ಲೇ ಕರ್ನಾಟಕದ ಮೊಟ್ಟ ಮೊದಲ ಸ್ಟುಡಿಯೋ ಎನಿಸಿದ ನವಜ್ಯೋತಿ ಸ್ಟುಡಿಯೋ ಸ್ಥಾಪಿತವಾಗಿತ್ತು. ಮೈಸೂರಿನಲ್ಲಿದ್ದ ಪ್ರೀಮಿಯರ್ ಸ್ಟುಡಿಯೋ ಇಡೀ ಎಷ್ಯಾದಲ್ಲೇ ಅತಿ ದೊಡ್ಡ ಸ್ಟುಡಿಯೋ ಅಂತ ಖ್ಯಾತಿ ಪಡೆದಿತ್ತು. ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್‌ರAಥ ದಿಗ್ಗಜ ನಟರು, ಹುಣಸೂರು ಕೃಷ್ಣಮೂರ್ತಿ, ಪುಟ್ಟಣ್ಣ ಕಣಗಾಲ್, ಎಂ.ಆರ್.ವಿಠಲ್ ಸೇರಿದಂತೆ ಘಟಾನುಘಟಿ ನಿರ್ದೇಶಕರು, ಅಷ್ಟೇ ಏಕೆ ಭಾರತೀಯ ಛಾಯಾಗ್ರಹಣ ಪಿತಾಮಹ ಎನಿಸಿದ ವಿ.ಕೆ.ಮೂರ್ತಿಯಂಥ ಪ್ರತಿಭಾವಂತರು ಹುಟ್ಟಿ ಬೆಳೆದ ಮೈಸೂರಿನಲ್ಲಿ ಚಲನಚಿತ್ರಕ್ಕೆ ತನ್ನದೇ ಆದ ಐತಿಹ್ಯವಿದೆ. ಅಲ್ಲದೆ, ಮೈಸೂರಿನಲ್ಲಿ ಇಡೀ ಭಾರತದಲ್ಲೇ ಅತ್ಯುತ್ತಮವಾದ “ಚಿತ್ರನಗರಿ” ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಿರುವಾಗ ದಸರಾಚಲನಚಿತ್ರೋತ್ಸವವನ್ನು ಈ ಬಾರಿ ನಡೆಸಲು ನಿರ್ಲಕ್ಷö್ಯ ತೋರಿಸಿರುವುದು ಅತ್ಯಂತ ನೋವಿನ ಸಂಗತಿ.

ಈಗಲಾದರೂ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಂಡು ದಸರಾ ಚಲನಚಿತ್ರೋತ್ಸವ ನಡೆಸಲು ಮುಂದಾಗಬೇಕು. ಸಮಯ ಬಹಳ ಕಡಿಮೆ ಇರುವುದರಿಂದ ಸಮರೋಪಾದಿಯಲ್ಲಿ ಕಾರ್ಯಾರಂಭವಾಗಬೇಕು. ಕೂಡಲೇ ದಸರ ಚಲನಚಿತ್ರೋತ್ಸವ ಸಮಿತಿ ರಚಿಸಿ, ಉತ್ತಮ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಜೊತೆಗೆ ಕನ್ನಡ ಚಿತ್ರರಂಗ ಸಹಿತ ಜಾಗತಿಕ ಚಿತ್ರರಂಗ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ. ಇದರ ನಿವಾರಣೆಗೆ ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದ ಹಿರಿಯ ಚಿತ್ರೋದ್ಯಮಿಗಳಿಂದ ವಿಚಾರ ಸಂಕಿರಣ ನಡೆಸಬೇಕು. ಕನಿಷ್ಟ ಮೂರು ದಿನವಾದರೂ ಚಲನಚಿತ್ರಗಳ ಸಮಸ್ಯೆ ಕುರಿತು ಚಿಂತನ-ಮAಥನ ನಡೆಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ.

ನಷ್ಟಕ್ಕೆ ಕಳಪೆ ಚಿತ್ರಗಳ ಆಯ್ಕೆ ಕಾರಣ:

ಈ ಬಾರಿ ದಸರ ಚಿತ್ರೋತ್ಸವ ರದ್ದುಪಡಿಸಲು ಕಳೆದ ಬಾರಿ ಚಿತ್ರೋತ್ಸವಕ್ಕೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ಕಾರಣ ಅಂತ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿರುವುದು ಸರಿಯಲ್ಲ. ಚಿತ್ರೋದ್ಯಮದಲ್ಲದವರು ಆಯ್ಕೆ ಮಾಡಿದ ಕಳಪೆ ಚಿತ್ರಗಳಿಂದಾಗಿ ಜನ ಚಿತ್ರಮಂದಿರಕ್ಕೆ ಬರಲಿಲ್ಲ. ತಮ್ಮ ತಪ್ಪಿನ ಕಾರಣ ಇಟ್ಟುಕೊಂಡು ಈ ಬಾರಿ ದಸರಾ ಚಿತ್ರೋತ್ಸವ ರದ್ದುಪಡಿಸುವ ನಿರ್ಧಾರ ಮಾಡಿದ್ದು ತಪ್ಪು. ಚಿತ್ರೋದ್ಯಮಕ್ಕೆ ಸಂಬAಧಪಟ್ಟವರನ್ನೊಳಗೊAಡ ಸಮಿತಿ ರಚಿಸಿ, ಉತ್ತಮ ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿದರೆ ಜನ ಚಿತ್ರನೋಡಲು ಬಂದೇ ಬರುತ್ತಾರೆ. ಆದ್ದರಿಂದ ಸಲ್ಲದ ಕಾರಣಗಳನ್ನಿಟ್ಟುಕೊಂಡು ಈ ಬಾರಿ ದಸರ ಚಿತ್ರೋತ್ಸವ ರದ್ದುಪಡಿಸಿರುವುದು ಅಕ್ಷಮ್ಯವಾಗಿದೆ.

ಕಳೆದ ದಸರ ಚಿತ್ರೋತ್ಸವದ ವೈಫಲ್ಯಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿ ಪರ್ಯಾಲೋಚಿಸುವುದರ ಬದಲು, ಕಳೆದ ೪೫ ವರ್ಷಗಳಿಂದ ದಸರ ಉತ್ಸವದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿದ್ದ ಚಿತ್ರೋತ್ಸವಕ್ಕೆ ಈ ಬಾರಿ ಅವಕಾಶ ಕಲ್ಪಿಸದಿರುವುದು ಕನ್ನಡ ಚಿತ್ರೋದ್ಯಮಕ್ಕೆ ಮಾಡಿದ ಅಪಮಾನ. ನಿಮ್ಮ ಸಮಿತಿ ರಚನೆಯಲ್ಲಾದ ಲೋಪದೋಷವನ್ನು ಮುಚ್ಚಿಟ್ಟು ಜನಪ್ರಿಯವಾದ ದಸರಚಿತ್ರೋತ್ಸವ ರದ್ದುಪಡಿಸಿದ್ದು ಬಹಳ ಬೇಸರದ ಸಂಗತಿ. ಇದರಿಂದ ಚಿತ್ರಪ್ರೇಮಿಗಳಿಗೆ ಬಹಳ ನಿರಾಸೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ಬಾರಿ ದಸರ ಚಿತ್ರೋತ್ಸವ ತಪ್ಪದೆ ಆಯೋಜಿಸಬೇಕೆಂದು   ಅವರು ಕಳಕಳಿಯ ಮನವಿ ಮಾಡಿದ್ದಾರೆ.

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb