ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ನಿಜದ ದನಿಗೆ ಆಡಂಬರ ಇರುವುದಿಲ್ಲ : ಕುಸುಮ ಆಯರಹಳ್ಳಿ

Posted on July 26, 2026July 26, 2026 by suddisangathi

ತುಮಕೂರು : ನಗರದ ಟೌನ್ ಹಾಲ್ ಬಳಿಯ ಐ.ಎಮ್.ಎ ಹಾಲ್ ನಲ್ಲಿ ದಾದಾಪೀರ್ ಮತ್ತು ರಂಗಮ್ಮ ಹೊದೇಕಲ್ ಅವರ ಜುಗಲ್ಬಂದಿ ‘ತೆರೆದ-ಕದ ಹೊಳೆದ-ಪದ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕವಿ ಕುಸುಮ ಆಯರಹಳ್ಳಿ ಜಗತ್ತಿನ ತುಂಬಾ ಸುಳ್ಳು ವಿಜೃಂಭಿಸುತ್ತಿದೆ, ಆಡಂಬರ ಮೆರೆಯುತ್ತಿದೆ, ಸ್ನೇಹ,ಸೌಹಾರ್ದ,ಪ್ರೀತಿ ಮಮತೆ ಕಣ್ಮರೆಯಾಗಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಆಡಂಬರವಿಲ್ಲದ, ಸುಳ್ಳಿನ ವಿಜೃಂಭಣೆಯಿಲ್ಲದ, ದೊಡ್ಡ ದೊಡ್ಡ ಅಜೆಂಡಾಗಳು ಇಲ್ಲದ, ಮೆದುಳಿಗಿಂತಾ ಹೃದಯದ ಭಾಷೆ ತುಂಬಿದ ಇಂತಹ ಕಾರ್ಯಕ್ರಮಗಳು ಅಷ್ಟೇ ನಮ್ಮನ್ನು ಬದುಕಿಸುತ್ತವೆ‌.
ರಂಗಮ್ಮ ಮತ್ತು ದಾದಾಪೀರ್ ಬರೆದಿರುವ ಈ ಜುಗಲ್ಬಂದಿ ಪುಸ್ತಕ ಹೆದ್ದಾರಿಗಳಿಗಿಂತಾ ಕಾಲ್ದಾರಿ ಮುಖ್ಯ ಇಂತಹ ಕಾಲ್ದಾರಿಗಳೇ ಜಗತ್ತಿಗೆ ಬೆಳಕಾಗಬಲ್ಲಂತವು ಎಂಬುದನ್ನು ತಿಳಿಸುತ್ತದೆ, ಇಂದು ಬುದ್ದಿವಂತ ದುಷ್ಟರು ಹೆಚ್ಚಾಗುತ್ತಿದ್ದಾರೆ ಭಾಷೆ ಬಲ್ಲವರು ಪ್ರತಿಭಾವಂತರು ದುಷ್ಟರಾಗುತ್ತಿರುವುದು ಬಹಳ ಅಪಾಯಕಾರಿ ಇಂತಹ ವ್ಯವಸ್ಥೆಯೊಳಗಿರುವ ನಮಗೆ
ಹೆದ್ದಾರಿಗಳ ಬಗ್ಗೆ ನಂಬಿಕೆ ಹೋಗಿದೆ, ಜಗಮಗ ಬೆಳಕಿನ ಬಗ್ಗೆ ನಂಬಿಕೆ ಹೋಗಿದೆ, ಹಾಗಾಗಿ ಕಾಲುದಾರಿಗಳನ್ನು ಬುಡ್ಡಿ ದೀಪಗಳನ್ನು ಆಶ್ರಯಿಸಬೇಕಾಗಿದೆ ಆ ನಿಟ್ಟಿನಲ್ಲಿ ಈ ಪುಸ್ತಕ ಪ್ರೀತಿ, ಕಾರುಣ್ಯ, ಮೈತ್ರಿ, ಸಂದೇಶ ಹೊಂದಿರುವ ಉತ್ತಮ ಪುಸ್ತಕವಾಗಿದೆ ಎಂದು ಹೇಳಿದರು.
ಶನಿವಾರ ಮಧ್ಯಾಹ್ನ ನಗರದ ಟೌನ್ ಹಾಲ್ ಬಳಿಯಿರುವ ಐ.ಎಮ್.ಎ ಹಾಲ್ ನಲ್ಲಿ ದಾರಿಬುತ್ತಿ ಬಳಗದ ವತಿಯಿಂದ ಕವಿ ರಂಗಮ್ಮ ಹೊದೇಕಲ್ ಮತ್ತು ದಾದಾಪೀರ್ ರವರ ಜುಗಲ್ಬಂದಿ ‘ತೆರೆದ ಕದ ಹೊಳೆದ ಪದ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪುಸ್ತಕ ಕುರಿತು ಮಾತನಾಡಿದ ‘ನವೀನ ಹಳೆಮನಿ’ಯವರು , ಕಾವ್ಯ ಕ್ಷೇತ್ರದಲ್ಲಿ ಜಗಲ್ಬಂದಿಯನ್ನು ಗಜಲ್ ಗಳಲ್ಲಿ ಕಾಣಬಹುದು ಆದರೆ ಇಂತಹ ಜುಗಲ್ಬಂದಿ ಅಪರೂಪವಾಗಿದ್ದು ಮತ್ತೂ ಅಷ್ಟೇ ಆಸಕ್ತಿದಾಯಕವಾಗಿರುವಾಗ ಸಣ್ಣ ಪುಟ್ಟ ಹನಿಗವಿತೆ ಮತ್ತು ಕವಿತೆಗಳಲ್ಲಿ ಜುಗಲ್ಬಂದಿ ಮಾಡುವುದು ವಿನೂತನ ಪ್ರಯೋಗವಾಗಿದೆ ಎಂದರು.

ಈ ಜುಗಲ್ಬಂದಿ ಇಬ್ಬರ ಸಂವಾದವಷ್ಟೇ ಅಲ್ಲ ಇದು ಓದುವವರ ಕಣ್ಣು ತೆರೆಸುವ ಮನಸ್ಸನ್ನು ತಣಿಸುವ ಪ್ರೀತಿ ಹಂಚುವ ಪ್ರಯತ್ನ ಮತ್ತು ಜಯ, ಇಲ್ಲಿ ಕೆಟ್ಟದ್ದು ಎನ್ನುವುದು ಇಲ್ಲವೇ ಇಲ್ಲ ಇಂತಹ ಪುಸ್ತಕಗಳು ಈ ಹೊತ್ತಿಗೆ ಬಹಳ ಅವಶ್ಯಕ ಬೈನರಿಗಳಿಲ್ಲದೆ ಆಡಂಬರವಿಲ್ಲದೆ ಇಬ್ಬರೂ ಕೂಡಿ ಪ್ರೀತಿ ಹಂಚುವ ಹಾಗೆ ಹಂಚುವ ಮೂಲಕ ಪ್ರೀತಿ ಪಡೆಯುವ ಪ್ರಯತ್ನ ಇಲ್ಲಿದೆ, ಕರುಣೆ,ಮೈತ್ರಿ ತುಂಬಿರುವ ಈ ಪುಸ್ತಕವನ್ನು ನೆಲದ ಶಕ್ತಿಯಾಗಿರುವ ಎಲ್ಲಾ ತಾಯಂದಿರಿಗೆ ಅರ್ಪಿಸಿರುವುದು ಆ ಮೂಲಕ ತಾಯಿಯ ಪ್ರೀತಿ,ಮಮತೆ, ತ್ಯಾಗ ಇವೆಲ್ಲವು ಮಹತ್ವವೆಂದು ಹೇಳುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇಲ್ಲಿ ಪ್ರಾಸವಿಲ್ಲ ಪದಗಳ ಆಟವಿಲ್ಲ ಬದಲಾಗಿ ಎಲ್ಲರಿಗೂ ಹಿತವೆನಿಸುವ ಪ್ರೀತಿ ನೀಡುವ ಕೃತಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿವಿಯ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ್ ಚಂದ್ರಗುತ್ತಿಯವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಸರಳವಾಗಿ ಅರ್ಥಪೂರ್ಣವಾಗಿ ಕಾವ್ಯ ಸಂಸ್ಕೃತಿಯನ್ನು ಪಸರಿಸುವ ಇಂತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಂತಸದ ವಿಷಯ, ಕಾವ್ಯ ಎಂದರೇ ಅದು ಕಾಡು ಹತ್ತಿಯಂತೆ ತನ್ನಿಂದ ತಾನೇ ತೆರೆದುಕೊಂಡು ಎಲ್ಲಾ ಕಡೆ ಹರಡುವ ಹಾಗೆ ಕಾವ್ಯವೂ ಸಹ ಜೀವಪ್ರೀತಿಯನ್ನು, ಕಾರುಣ್ಯ, ಮೈತ್ರಿ, ಸೌಹಾರ್ದತೆಯನ್ನು, ಎಲ್ಲಾ ಕಡೆ ಪಸರಿಸುತ್ತದೆ ಅತ್ಯಂತ ಸರಳ ಸಂಗತಿಗಳಲ್ಲೇ ಕಾವ್ಯವಿದೆ, ನಾವಿಂದು ಒಳಗೊಳ್ಳುವ ಸಮಾಜವನ್ನು ಕಟ್ಟಬೇಕಿದೆ ಆದರೆ ನಮ್ಮನ್ನು ಹಿಂಸೆಯ ಪರವಾಗಿ ದ್ವೇಷದ ಪರವಾಗಿ ಪಳಗಿಸುವ ಕೆಲಸ ಆಗುತ್ತಿದೆ ಕಾವ್ಯ ಇಂತಹ ಪಳಗಿಸುವ ದಾರಿಯನ್ನು ದಿಕ್ಕರಿಸುತ್ತದೆ ಅಂತಹ ಕೆಲಸವನ್ನು ಈ ಕೃತಿ ಅರ್ಥಪೂರ್ಣವಾಗಿ ಮಾಡಿದೆ ಎಂದರು.

ಕೃತಿಯ ಕರ್ತೃಗಳಾದ ರಂಗಮ್ಮ ಹೊದೇಕಲ್ ಮತ್ತು ದಾದಾಪೀರ್ ಮಾತನಾಡಿ, ಬಹಳಷ್ಟು ಕಷ್ಟದ ದಿನಗಳಲ್ಲಿ ಬೆಳೆದು ಬಂದ ನಮಗೆ ನಮ್ಮ ಸಿಟ್ಟು,ಕೋಪ,ಬೇಜಾರು ನೋವಿಗೆ ಅಕ್ಷರಗಳೇ ಸಮಾಧಾನವಾದವು ಇಂತಹ ಕಷ್ಟದ ಬದುಕೇ ನಮ್ಮ ಬರವಣಿಗೆಗೆ ಕಾರಣ ಎಂದು ಹೀಗೆ ಕಷ್ಟದಲ್ಲಿ ಅರಳಿದ ಕವಿತೆಗಳು ಪುಸ್ತಕವಾಗುವಲ್ಲಿನ ಸಂಭ್ರಮಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳನ್ನು ಹೆಳಿದರು.

ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ನಿಕಟಪೂರ್ವ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಅವರು ಮಾತನಾಡಿ,  ಕವಿತೆ ಬರೆಯಲೇ ಬೇಕೆಂದಿಲ್ಲ ಕವಿತೆಯನ್ನು ಬದುಕಲೂ ಬಹುದು ಈ ಕೃತಿಯನ್ನು ನಾವೆಲ್ಲರೂ ಪ್ರೀತಿಯಿಂದ ನಮ್ಮ ಹೃದಯಕ್ಕೆ ಅಪ್ಪಿಕೊಂಡಿದ್ದೇವೆ ಈ ಕೃತಿಯಲ್ಲಿ ಎರಡು ಚಿತ್ರಣಗಳಿವೆ ಒಂದು ಗುಡುಗಿಗಿಂತಾ ಮುಂಚೆ ಬರುವ ಮಿಂಚಿನಂತೆ ಇನ್ನೊಂದು ಮಿಂಚು ಹುಳುದಂತೆ ಇಲ್ಲಿನ ಹನಿಗವಿತೆಗಳು ಬಹಳ ಪ್ರಕರವಾಗಿವೆ ಕಿರಿದರಲ್ಲೇ ಹಿರಿದನ್ನು ಕಟ್ಟಿಕೊಡುತ್ತವೆ ಇವುಗಳಿಗೆ ನಮ್ಮನ್ನು ಆಳವಾಗಿ ಕಾಡುವ ಶಕ್ತಿ ಇದೆ ಇದು ಜುಗಲ್ಬಂದಿ ಅಲ್ಲ ಬದಲಾಗಿ ಒಂದು ಕಂಪನಕೆ ಮತ್ತೊಂದು ಅನುಕಂಪ ಕೂಡಿದ ಮಧುರ ಕಾವ್ಯ ಎಂದರು.

ಕಾರ್ಯಕ್ರಮದಲ್ಲಿ ಯುವಕವಿಗಳು ಕವಿತೆ ವಾಚಿಸಿದರು ಮೇಘನಾ ಪ್ರಾಸ್ತಾವಿಕವಾಗಿ ಮಾತನಾಡಿದರು ಶೈಲಜಾ ರವರು ಸ್ವಾಗತಿಸಿದರು ಅನೀಸಾ ಎಲ್ಲರನ್ನೂ ವಂದಿಸಿದರು ವಿವೇಕ ಕಾರ್ಯಕ್ರಮ ನಿರೂಪಿಸಿದರು.  ಜೊತೆಗೆ ತುಮಕೂರು ವಿವಿಯ ಪ್ರಾಧ್ಯಾಪಕಿ ಗಿರಿಜಾ ಕೆ.ಎಸ್ ಹಿರಿಯ ಲೇಖಕಿ ಇಂದ್ರಮ್ಮ ಬಳಗದ ಪ್ರೇಮ,ವೇದ, ಕೃಷ್ಣ, ಸೋನಿಕಾ, ಸಾತ್ವಿಕ್ ಅಂಚೆ ನೌಕರರು ಮತ್ತು ಗಣ್ಯರು ಉಪಸ್ಥಿತರಿದ್ದರು

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb