ಬೆಂಗಳೂರು: ಲೇಖಕ ಡಾ. ಅಮ್ಮಸಂದ್ರ ಸುರೇಶ್ ಅವರ ʼಅಂಚೆ ಕಥನʼ ಪುಸ್ತಕ ಬಿಡುಗಡೆ ಸಮಾರಂಭ ಇಂದು (ಜುಲೈ-5) ಸಂಜೆ 6 ಗಂಟೆಗೆ ನಗರದ ಕಬ್ಬನ್ ಪಾಕ್ನ ಎನ್.ಜಿ.ಓ. ಸಭಾಂಗಣದಲ್ಲಿ ನಡೆಯಲಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಪ್ರೊ. ಎಲ್. ಎನ್. ಮುಕುಂದರಾಜು ಕೃತಿಯನ್ನು ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಅಂಚೆ ಇಲಾಖೆಯ ನಿರ್ದೇಶಕರುಗಳಾದ ಸಂದೇಶ್ ಮಹಾದೇವಪ್ಪ, ಶ್ರೀಮತಿ ವಿ. ತಾರಾ ಭಾಗವಹಿಸುವರು.
ಕಾಂ. ರವಿ ಬಿ. ಪಾಟೀಲ್, ಕಾಂ. ರುದ್ರೇಶ್ ಕೆ. ಎಸ್. ಕಾಂ. ರಾಜೇಶ್ ಭಾಸ್ಕರ್ ಎಲ್. ಕಾಂ. ಎ. ಎಸ್. ಚಂದ್ರಶೇಖರ್ (ಜಿ.ಪಿ.ಓ. ಚಂದ್ರು), ಸುದ್ಧಿ ಸಂಗಾತಿ ಧ್ವನಿ ಪತ್ರಿಕೆ ಸಂಪಾದಕ ಮಂಜುನಾಥ್ ದಂಡಿನಶಿವರ, ಗೋಪಿಕಾ ಪ್ರಕಾಶನದ ಪ್ರಕಾಶಕ ಸಿದ್ದೇಶ್ವರಪ್ಪ ಸಮಾರಂಭದಲ್ಲಿ ಗಣ್ಯ ಅತಿಥಿಗಳಾಗಿ ಭಾಗವಹಿಸುವರು.

