ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಗೃಹಲಕ್ಷ್ಮಿ–ಗೃಹಜ್ಯೋತಿಗೆ ಮರು ಅರ್ಜಿ: ಫಲಾನುಭವಿಗಳಿಗೆ ಫೋಟೋ ಗುರುತಿನ ಚೀಟಿ

Posted on June 15, 2026 by suddisangathi

ಅನರ್ಹರಿಗೆ ಕತ್ತರಿ: ಗೃಹಲಕ್ಷ್ಮಿ–ಗೃಹಜ್ಯೋತಿ ಫಲಾನುಭವಿಗಳ ಮರು ನೋಂದಣಿ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳಲ್ಲಿ ದುರ್ಬಳಕೆ ಹಾಗೂ ಸೋರಿಕೆ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಎರಡೂ ಯೋಜನೆಗಳ ಫಲಾನುಭವಿಗಳಿಂದ ಮರು ಅರ್ಜಿ ಸ್ವೀಕರಿಸಲು ಸರ್ಕಾರ ತೀರ್ಮಾನಿಸಿದೆ. ಜೊತೆಗೆ, ಅರ್ಹ ಫಲಾನುಭವಿಗಳಿಗೆ ಫೋಟೋ ಸಹಿತ ಗುರುತಿನ ಚೀಟಿ ವಿತರಿಸುವ ಯೋಜನೆಯನ್ನೂ ರೂಪಿಸಲಾಗಿದೆ.

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಡೆದ ರಾಜ್ಯಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸರ್ಕಾರದ ಮಾಹಿತಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯಡಿ ಅನರ್ಹ ವ್ಯಕ್ತಿಗಳ ಖಾತೆಗಳಿಗೆ ನೂರಾರು ಕೋಟಿ ರೂಪಾಯಿ ವರ್ಗಾವಣೆಯಾಗಿರುವ ಅನುಮಾನ ವ್ಯಕ್ತವಾಗಿದೆ. ಕೆಲ ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಹೆಸರಿನಲ್ಲಿ ಹಣ ಪಡೆಯುತ್ತಿರುವ ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು ₹100 ಕೋಟಿಗೂ ಅಧಿಕ ಮೊತ್ತ ದುರುಪಯೋಗವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡಲು ಮರು ನೋಂದಣಿ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಆದರೆ, ಗೃಹಲಕ್ಷ್ಮಿ ಯೋಜನೆಯನ್ನು ಸ್ಥಗಿತಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ, ಗೃಹಜ್ಯೋತಿ ಯೋಜನೆಯಲ್ಲಿಯೂ ಕೆಲವು ಅಕ್ರಮಗಳು ನಡೆಯುತ್ತಿರುವ ಬಗ್ಗೆ ಸರ್ಕಾರಕ್ಕೆ ವರದಿಗಳು ಬಂದಿವೆ. ಒಂದೇ ವ್ಯಕ್ತಿಯ ಹೆಸರಲ್ಲಿ ಹಲವು ವಿದ್ಯುತ್ ಮೀಟರ್‌ಗಳು ನೋಂದಾಯಿತವಾಗಿರುವುದು, ವಾಣಿಜ್ಯ ಬಳಕೆಯ ಸ್ಥಳಗಳಿಗೂ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವುದು ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಆದ್ದರಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳೂ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮೀಟರ್ ರೀಡರ್‌ಗಳ ಮೂಲಕ ಅರ್ಜಿ ನಮೂನೆಗಳನ್ನು ವಿತರಿಸಲಾಗುವುದು. ಫಲಾನುಭವಿಗಳು ಅಗತ್ಯ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ವಿದ್ಯುತ್ ದರಗಳು ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಉಚಿತ ವಿದ್ಯುತ್ ಯೋಜನೆಯ ದುರ್ಬಳಕೆಯನ್ನು ತಡೆಗಟ್ಟುವುದು ಸರ್ಕಾರದ ಆದ್ಯತೆಯಾಗಿದ್ದು, ಈ ಮರು ಪರಿಶೀಲನಾ ಪ್ರಕ್ರಿಯೆಯನ್ನು ಗ್ಯಾರಂಟಿ ಯೋಜನೆಗಳ ಮೇಲ್ವಿಚಾರಣಾ ಸಮಿತಿಯು ನಿಗಾ ವಹಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb