ತುಮಕೂರು: ನಾಳೆ ಜೂನ್ 13ರಂದು ಖ್ಯಾತ ಕವಿ ರಂಗಮ್ಮ ಹೊದೇಕಲ್” ಅವರ “ಹೂಮಿಂಚು” ಕೃತಿ ಬಿಡುಗಡೆಗೊಳ್ಳುತ್ತಿದೆ. ದಾರಿಬುತ್ತಿ ತುಮಕೂರು ಇವರು ಕಾರ್ಯಕ್ರಮವನ್ನು ‘ರಮಣ ಮಹರ್ಷಿ ಉದ್ಯಾನವನ, ತುಮಕೂರು ವಿಶ್ವವಿದ್ಯಾಲದ ಆವರಣ’ದಲ್ಲಿ ಆಯೋಜಿಸಿದ್ದಾರೆ. ಮದ್ಯಾನ್ಹ 3-30ಕ್ಕೆ ಕಾರ್ಯಕ್ರಮವು ಆರಂಭವಾಗಲಿದ್ದು, ಲೇಖಕಿ ಹಾಗೂ ಸಾಮಾಜಿಕ ಹೊರಾಟಗಾರ್ತಿ ಬಾ.ಹ.ರಮಾಕುಮಾರಿಯವರು ವಹಿಸುತ್ತಿದ್ದಾರೆ. ಸಾಹಿತಿ ಧನಪಾಲ್ ನಾಗರಾಜಪ್ಪ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.
ಲೇಖಕಿ ಗೀತಾ ವಸಂತ, ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಆಶಾ ಬಗ್ಗನಡು,ಲೇಖಕರಾದ ಎಸ್. ಕಲಾಧರ್, ಡಾ.ಹೆಚ್.ಸಿ.ಭವ್ಯ ಹಾಗೂ ಕೃತಿಯ ಕರ್ತೃ ರಂಗಮ್ಮ ಹೊದೇಕಲ್ ಉಪಸ್ಥಿತರಿರುತ್ತಾರೆ.
ಇವರೊಂದಿಗೆ ಅಂಗಳ ಕಮ್ಯುನಿಟಿ ಟ್ರಸ್ಟ್ ಹಾಗೂ ಶಾರದಾಂಬ ಟ್ರಸ್ಟ್ ತುಮಕೂರು ಇರಲಿದ್ದಾರೆ. ಸಾಹಿತ್ಯಾಸಕ್ತರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬಹುದು.

