ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಪ್ರದ್ಮಶ್ರೀ ಅಂಕೇಗೌಡರಿಗೆ ಪುಸ್ತಕ ಪ್ರೀತಿ ಹುಟ್ಟಿದ್ದು ಹೇಗೆ…!?

Posted on June 6, 2026June 6, 2026 by suddisangathi

ಬರೋಬ್ಬರಿ ೨೦ ಲಕ್ಷಕ್ಕೂ ಅಧಿಕ ಪುಸ್ತಕಗಳ ಗತಿ ಏನು?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಣ್ಣ ಗ್ರಾಮವೊಂದರಲ್ಲಿ ಒಬ್ಬ ವ್ಯಕ್ತಿ ಕಳೆದ ಐದು ದಶಕಗಳಿಂದ ಮೌನವಾಗಿ ಅಕ್ಷರ ಕ್ರಾಂತಿಯೊAದನ್ನು ಮಾಡುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯ ಎನಿಸಬಹುದು. ಆದರೆ, ಹರಳಹಳ್ಳಿಯ ಎಂ. ಅಂಕೇಗೌಡರು ಇದನ್ನು ಸಾಕಾರಗೊಳಿಸಿದ್ದಾರೆ. ಇಂದು ಇಡೀ ದೇಶವೇ ಇವರತ್ತ ತಿರುಗಿ ನೋಡುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಇವರಿಗೆ ‘ಪದ್ಮಶ್ರೀ’ ಗೌರವ ನೀಡಿರುವುದು ಕೇವಲ ಒಬ್ಬ ವ್ಯಕ್ತಿಗಲ್ಲ, ಬದಲಾಗಿ ಪುಸ್ತಕ ಪ್ರೀತಿ ಮತ್ತು ಜ್ಞಾನದ ಹಸಿವಿಗೆ ಸಂದ ಜಯವಾಗಿದೆ.
ಒಂದು ಕಾಲದಲ್ಲಿ ಬಸ್ ನಿರ್ವಾಹಕರಾಗಿದ್ದ ಇವರು ಕನ್ನಡ ಮತ್ತು ಪುಸ್ತಕ ಪ್ರೇಮದಿಂದ ಹೆಚ್ಚು ಖ್ಯಾತಿ ಪಡೆದವರು. ತಮ್ಮ ಮನೆಯನ್ನು ‘ಪುಸ್ತಕ ಮನೆ’ಯಾಗಿ ಪರಿವರ್ತಿಸಿ, ಗ್ರಾಮೀಣ ಭಾಗದ ಜನರ ಜ್ಞಾನದ ಹಸಿವು ನೀಗಿಸುತ್ತಿದ್ದಾರೆ. ಅವರ ಬಗೆಗಿನ ಒಂದಷ್ಟು ಕೂತೂಹಲ ಮಾಹಿತಿ ನಿಮಗಾಗಿ ಇಲ್ಲಿ ದಾಖಲಿಸುತ್ತಿದ್ದೇನೆ.
ಪುಸ್ತಕಗಳನ್ನು ಜೀವನದ ಸರ್ವಸ್ವವೆಂದು ಪರಿಗಣಿಸಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿಯಲ್ಲಿರುವ ಅವರು ಬೃಹತ್ ‘ಪುಸ್ತಕ ಮನೆ’ಯನ್ನು ಸಾರ್ವಜನಿಕರಿಗೆ ತೆರೆದಿಟ್ಟಿದ್ದಾರೆ. ಮೂಲಗಳ ಪ್ರಕಾರ, ೨೦ ಭಾಷೆಗಳ ಸುಮಾರು ೨೦ ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಅವರು ಸಂಗ್ರಹಿಟ್ಟಿದ್ದಾರAತೆ. ಈ ಮಹತ್ವದ ಕಾರ್ಯಕ್ಕೆ ಅವರ ಪತ್ನಿ ಸಹ ಅವರಿಗೆ ಸಾಥ್ ನೀಡುತ್ತಾ ಬಂದಿರುವುದು ನಿಜಕ್ಕೂ ಮೆಚ್ಚುವಂತಹ ಸಂಗತಿಯಾಗಿದೆ. ಅವರ ಈ ಪುಸ್ತಕ ಪ್ರೇಮವು ‘ಲಿಮ್ಕಾ ಬುಕ್ ಆಫ್ ರೆಕಾಡ್ಸ್’ನಲ್ಲೂ ಸ್ಥಾನ ಪಡೆಯುವಂತೆ ಮಾಡಿದೆ.
ಜ್ಞಾನ ಹೆಚ್ಚಿಸುವ ಕಾರ್ಯದಲ್ಲಿ ನಿರತರಾಗಿರುವ ಅಕ್ಷರ ಯೋಗಿ ಅಂಕೇಗೌಡ ಅವರು, ಪುಸ್ತಕಗಳನ್ನು ಮಾತ್ರವಲ್ಲದೇ ನಾಣ್ಯ, ಅಂಚೆ ಚೀಟಿ, ಅಪರೂಪ ಲಗ್ನ ಪತ್ರಿಕೆಗಳನ್ನು ಸಂಗ್ರಹಿಸಿಟ್ಟುಕೊAಡಿದ್ದಾರೆ. ತಾವು ದುಡಿಯುವ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಈ ಪುಸ್ತಕಗಳ ಸಂಗ್ರಹಣೆ, ನಿರ್ವಹಣೆಗೆ ಖರ್ಚು ಮಾಡುತ್ತಿರುವ ವಿಶಿಷ್ಟ ಸಾಧಕರು ಇವರಾಗಿದ್ದಾರೆ.
ಪಾಂಡವಪುರದಲ್ಲಿರುವ ಅವರ ‘ಪುಸ್ತಕ ಮನೆ’ಗೆ ನೀವೊಮ್ಮೆ ಕಾಲಿಟ್ಟರೆ, ಪುಸ್ತಕ ಪ್ರಪಂಚಕ್ಕೆ ಬಂದಿರುವAತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿನ ಪುಸ್ತಕಗಳ ರಾಶಿ ಕಾಣಬಹುದಾಗಿದೆ. ಜ್ಞಾನದ ಹಸಿವುಳ್ಳವರಿಗೆ ಈ ಮನೆ ಕೈ ಬೀಸಿ ಕರೆಯುತ್ತದೆ. ಪುಸ್ತಕ ಸಂಗ್ರಹ, ಅದರ ಮೇಲಿನ ಪ್ರೇಮದಿಂದಲೇ ಇಂದು ಅಂಕೇಗೌಡರು ಎತ್ತರದ ಸ್ಥಾನಕ್ಕೇರಿದ್ದಾರೆ. ಸ್ವಂತ ಹಣ ಖರ್ಚು ಮಾಡಿ ಹಳ್ಳಿ ಭಾಗದಲ್ಲಿ ಬೃಹತ್ ಗ್ರಂಥಾಲಯ ಹುಟ್ಟು ಹಾಕಿದ ಈ ಸಾಧಕನಿಗೆ ಸರ್ಕಾರ ೨೦೨೬ನೇ ಸಾಲಿನ ‘ಪದ್ಮಶ್ರೀ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.
ಅಂಕೇಗೌಡ ಅವರ ಮನೆಯಲ್ಲಿಯೇ ಲಕ್ಷಾಂತರ ಪುಸ್ತಕಗಳನ್ನು ಉಚಿತವಾಗಿ ಓದಲು ಅವಕಾಶ ಇದೆ. ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಉಚಿತವಾಗಿ ಜ್ಞಾನದ ಹಸಿವು ನೀಗಿಸುತ್ತಿದ್ದಾರೆ. ಒಟ್ಟು ೨೦ಕ್ಕೂ ಅಧಿಕ ಭಾಷೆಗಳ ೨೦ ಲಕ್ಷಕ್ಕೂ ಅಧಿಕ ಪುಸ್ತಕಗಳು ಇವರ ‘ಪುಸ್ತಕ ಮನೆ’ಯಲ್ಲಿವೆ. ಇವರು ಮನೆಯಲ್ಲಿಯೇ ಪುಸ್ತಕಗಳ ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ. ಇಂದಿನ ಪೀಳಿಗೆಗೆ ಎಲ್ಲ ವಿಧದ ಪುಸ್ತಕಗಳ ಮೂಲಕ ಜ್ಞಾನ ಹೆಚ್ಚಿಸುವಲ್ಲಿ ಅವರು ನಿರತರಾಗಿದ್ದಾರೆ. ಪುಸ್ತಕ ಸಂಗ್ರಹಿಸುವ ಕಾರ್ಯ ಇಂದಿಗೂ ಮುಂದುವರಿದಿದೆ. ಈ ‘ಪುಸ್ತಕ ಮನೆ’ಗೆ ಯಾರೇ ಭೇಟಿ ಕೊಟ್ಟರು ಅವರಿಗೆ ಇಷ್ಟವಾದ ಹಲವು ಪುಸ್ತಕಗಳು ಸಿಕ್ಕೇ ಸಿಗುತ್ತವೆ. ಅಷ್ಟರ ಮಟ್ಟಿಗೆ ರಾಶಿ ಪುಸ್ತಕಗಳನ್ನು ಇವರು ಸಂಗ್ರಹಿಸಿದ್ದಾರೆ. ವಿಶ್ವದ ಪ್ರಮುಖ ಗ್ರಂಥಗಳೂ ಈ ಮನೆಯಲ್ಲಿವೆ.
ಈ ‘ಪುಸ್ತಕ ಮನೆ’ ಇಂದು ವಿಶ್ವಕೋಶದಂತಿದೆ. ಇಲ್ಲಿ ಸುಮಾರು ೨೦ ಲಕ್ಷಕ್ಕೂ ಹೆಚ್ಚು ಪುಸ್ತಕಗಳಿವೆ. ಇದರಲ್ಲಿ ಕೇವಲ ಕನ್ನಡ ಮಾತ್ರವಲ್ಲದೆ, ಇಂಗ್ಲಿಷ್, ತಮಿಳು, ತೆಲುಗು ಸೇರಿದಂತೆ ಸುಮಾರು ೨೨ ಭಾಷೆಗಳ ಅಪರೂಪದ ಕೃತಿಗಳಿವೆ.
ಪ್ರಾಚೀನ ಹಸ್ತಪ್ರತಿಗಳು ಸಂಗ್ರಹವಿದೆ. ೧೮೩೨ರ ಕಾಲದ ಹಳೆಯ ಪತ್ರಿಕೆಗಳು ಮತ್ತು ದಾಖಲೆಗಳು ಇಲ್ಲಿವೆ. ೫೦೦೦ಕ್ಕೂ ಹೆಚ್ಚು ನಿಘಂಟುಗಳು ಮತ್ತು ನೂರಾರು ಭವ್ಯ ವಿಶ್ವಕೋಶಗಳು ಈ ಗ್ರಂಥಾಲಯದ ಶಕ್ತಿ.
ಈ ಜ್ಞಾನ ದೇಗುಲಕ್ಕೆ ಬರುವವರಿಗೆ ಪ್ರವೇಶ ಉಚಿತ. ಇಂದು ವಿಶ್ವವಿದ್ಯಾಲಯದ ಸಂಶೋಧಕರು, ಪಿಎಚ್ಡಿ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕಾಗಿ ಹರಳಹಳ್ಳಿಗೆ ಬರುವುದು ಅಂಕೇಗೌಡರ ಸಾಧನೆಗೆ ಸಾಕ್ಷಿ.
ಬಸ್ ಕಂಡಕ್ಟರ್ ವೃತ್ತಿಯಲ್ಲಿದ್ದಾಗಲೇ ಬಿಎ ಪದವಿ ಪಡೆದಿರುವ ಇವರು ಪಾಂಡವಪುರ ತಾಲ್ಲೂಕಿನ ಚಿನಕುರಳಿಯಲ್ಲಿ ಜನಿಸಿ, ಅಲ್ಲಿಯೇ ಆರಂಭಿಕ ಶಿಕ್ಷಣ ಪಡೆದರು. ಬೆಳೆದು ದೊಡ್ಡವರಾದ ಮೇಲೆ ಮೈಸೂರು ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್ ನಿರ್ವಾಹಕರಾಗಿ ವೃತ್ತಿ ಆರಂಭಿಸಿದರು. ಕೆಲಸ ಮಾಡಿಕೊಂಡೆ ಸಂಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ನಂತರ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವಾಗಲೇ ವೇತನದ ಬಹುಪಾಲು ಹಣವನ್ನು ಪುಸ್ತಕ ಖರೀದಿಗೆ ವ್ಯಯಿಸುತ್ತಿದ್ದ ಅಪರೂಪದ ವ್ಯಕ್ತಿತ್ವ ಇವರದ್ದು. ಅಂಕೇಗೌಡರ ಈ ಪಯಣ ಸುಲಭದ್ದಾಗಿರಲಿಲ್ಲ.
ಹಿಂದೆ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ ಇವರು, ನಂತರ ಸಕ್ಕರೆ ಕಾರ್ಖಾನೆಯ ಟೈಮ್ ಕೀಪರ್ ಆಗಿ ನಿವೃತ್ತರಾದರು. ಸಾಮಾನ್ಯ ನೌಕರನೊಬ್ಬ ತನ್ನ ಆದಾಯದ ಬಹುಭಾಗವನ್ನು ಕುಟುಂಬದ ಐಷಾರಾಮಿ ಜೀವನಕ್ಕೆ ಬಳಸುವ ಬದಲು, ಅಂಕೇಗೌಡರು ಅದನ್ನು ಪುಸ್ತಕಗಳ ಖರೀದಿಗೆ ಬಳಸಿದರು. ತಿಂಗಳ ಸಂಬಳ ಬರುತ್ತಿದ್ದಂತೆ ಮನೆಗೆ ರೇಷನ್ ತರುವ ಮುನ್ನ ಪುಸ್ತಕದ ಅಂಗಡಿಗೆ ಹೋಗುತ್ತಿದ್ದವರು.
ಅಂಕೇಗೌಡರಿಗೆ ಈ ಪುಸ್ತಕಗಳ ಮೇಲೆ ಪ್ರೀತಿ, ಸಂಗ್ರಹಣೆಯ ಪ್ರವೃತ್ತಿ ಶುರುವಾಗಿದ್ದು ಅವರ ಶಾಲಾ ದಿನಗಳಲ್ಲಿ. ಅವರು ಶಾಲೆಗಳಲ್ಲಿ ಇದ್ದಾಗ ಗ್ರಂಥಾಲಯದಲ್ಲಿ ಇದ್ದ ಪುಸ್ತಕಗಳನ್ನು ಮನೆ ಒಯ್ಯಲು ಅನುಮತಿ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಅವರು ಬೇಸರಪಟ್ಟುಕೊಂಡಿದ್ದರು. ಅಂದಿನಿAದಲೇ ಅವರು ಪುಸ್ತಕ ಸಂಗ್ರಹಿಸಲು ಆರಂಭಿಸಿದರು. ಅಂದಿನ ಅವರ ನಿರ್ಧಾರ ಇಂದು ಬೃಹತ್ ಗ್ರಂಥಾಲಯದAತೆ ‘ಪುಸ್ತಕ ಮನೆ’ ನಿರ್ಮಾಣ, ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಿಂದ ಹಿಡಿದು ಇಂದಿನ ‘ಪ್ರದ್ಮಶ್ರೀ ಪ್ರಶಸ್ತಿ’ಗೆ ಆಯ್ಕೆ ಆಗುವವರೆಗೆ ತಂದು ನಿಲ್ಲಿಸಿದೆ. ಪುಸ್ತಕ ಪ್ರಿಯರು ಮಾತ್ರವಲ್ಲದೇ ಅಪಾರ ಸಂಖ್ಯೆಯ ಜನರಿಂದ ಅವರಿಗೆ ಗೌರವ ಸಿಗುವಂತೆ ಮಾಡಿದೆ.
ಅಕ್ಷರಗಳ ಮೇಲಿನ ವ್ಯಾಮೋಹ ಎಷ್ಟು ಹೆಚ್ಚಾಯಿತೆಂದರೆ, ಒಂದು ಕಾಲದಲ್ಲಿ ಇವರು ಸಂಗ್ರಹಿಸಿದ ಪುಸ್ತಕಗಳನ್ನು ಇಡಲು ಜಾಗವೇ ಸಾಲದಾಯಿತು. ಆಗ ಅಂಕೇಗೌಡರು ಮಾಡಿದ್ದು ಒಂದು ಸಾಹಸಮಯ ಕೆಲಸ. ಮೈಸೂರಿನಲ್ಲಿದ್ದ ತಮ್ಮ ಸ್ವಂತ ಮನೆಯನ್ನೇ ಮಾರಿ, ಆ ಹಣದಿಂದ ಪುಸ್ತಕಗಳ ಸಂರಕ್ಷಣೆಗೆ ಮುಂದಾದರು. “ತಲೆ ಮೇಲೆ ಸೂರಿಲ್ಲದಿದ್ದರೂ ಪರವಾಗಿಲ್ಲ, ಕೈಯಲ್ಲಿ ಪುಸ್ತಕವಿರಲಿ” ಎನ್ನುವ ಇವರ ದೃಢ ಸಂಕಲ್ಪಕ್ಕೆ ಪತ್ನಿ ಮತ್ತು ಕುಟುಂಬದವರು ಬೆನ್ನೆಲುಬಾಗಿ ನಿಂತರು.
ಗ್ರಾಮೀಣ ಭಾಗದಲ್ಲಿ ಪುಸ್ತಕ ಪ್ರಿಯರಿಗೆ ಇವರು ಸ್ಪೂರ್ತಿಯಾಗಿದ್ದು, ಅವರಿಗೆ ಉದ್ಯಮಿಯಾದ ಹರಿಕೋಡೆ ಅವರು ವಿಶ್ವೇಶ್ವರನಗರದಲ್ಲಿ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ. ಆ ಮನೆಯನ್ನು ಬೃಹತ್ ಗ್ರಂಥಾಲಯವಾಗಿ ಮಾರ್ಪಡಿಸಿ, ಅಲ್ಲಿ ನಾನಾ ಬಗೆಯ ಪುಸ್ತಕಗಳು ಲಭ್ಯವಾಗುವಂತೆ ಮಾಡಿದ್ದಾರೆ.
ಮುಂದೆ ೨೫ ಲಕ್ಷ ಪುಸ್ತಕಗಳ ಗತಿ ಏನು?
ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಪುಸ್ತಕ ಪ್ರೇಮಿ ಅಂಕೇಗೌಡರಿಗೆ ಕರ್ನಾಟಕದ ಹಲವು ಗಣ್ಯರು ಶುಭಕೋರಿದ್ದಾರೆ. ಇದರ ನಡುವೆ ನಾಗತಿಹಳ್ಳಿ ಚಂದ್ರಶೇಖರ್ ಅಂಕೇಗೌಡರ ಬಗ್ಗೆ ಬರೆದಿರುವ ಬರಹವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಆ ಪತ್ರದ ಬಗ್ಗೆ ನಿಜಕ್ಕೂ ನಾವೆಲ್ಲರೂ ಚಿಂತಿಸಬೇಕಾದ ಅಗತ್ಯವಿದೆ.
“ಪ್ರೀತಿಯ ಶ್ರೀ ಅಂಕೇಗೌಡರಿಗೆ” ಎನ್ನುವ ಸಾಲುಗಳೊಂದಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ವಿಶೇಷ ಬರಹ ಹಂಚಿಕೊAಡಿದ್ದಾರೆ. ಈ ಬರಹದಲ್ಲಿ ಪದ್ಮಶ್ರೀ ಪುರಸ್ಕೃತ ಅಂಕೇಗೌಡ ಅವರು ಎದುರಿಸುತ್ತಿರುವ ಸವಾಲುಗಳು ಹಾಗೂ ಸಂಕಷ್ಟವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಹಂಚಿಕೊAಡಿದ್ದಾರೆ.
“ಪ್ರೀತಿಯ ಶ್ರೀ ಅಂಕೇಗೌಡರಿಗೆ” ನಿಮಗೆ “ಪದ್ಮಶ್ರೀ” ಪ್ರಶಸ್ತಿ ಸಂದಿದೆ.ಅಭಿನAದಿಸಲು ಕರೆ ಮಾಡಿದ್ದೆ. ನೀವು ಸಿಗಲಿಲ್ಲ. ಕಳೆದ ತಿಂಗಳು ನಿಮ್ಮ ಗ್ರಂಥಾಲಯಕ್ಕೆ ಬಂದಿದ್ದೆ. ಬಹಳ ವ್ಯಥೆಯಿಂದ ಮಾತನಾಡಿದಿರಿ. ಈ ಇಪ್ಪತ್ತೈದು ಲಕ್ಷ ಪುಸ್ತಕಗಳ ಗತಿ ಏನು? ಅವು ಒಪ್ಪವಾಗಿ ವರ್ಗೀಕರಣವಾಗಿ ಕಪಾಟಿನಲ್ಲಿ ಜೋಡಿಸಲ್ಪಟ್ಟಿಲ್ಲ. ಮೆದೆಯ ಹುಲ್ಲು ಅಡಕಿದ ಹಾಗೆ, ಹಲವು ಧಾನ್ಯ ಬೆರೆತ ಏಕ ರಾಶಿಯ ಹಾಗೆ, ದೂಳು ತುಂಬಿದ ತಬ್ಬಲಿಗಳಂತೆ ಮಲಗಿವೆ. ಅಪರೂಪದ ಹಳೆಯ ಗ್ರಂಥಗಳಿವೆ.ಆದರೆ ಅವು ಸುಸ್ಥಿತಿಯಲ್ಲಿಲ್ಲ. ಬೇಸಗೆಯಲ್ಲಿ ಬೆಂಕಿ ಅವಘಡದ ಮತ್ತು ಗೆದ್ದಲಿನ ಅಪಾಯಗಳಿವೆ.
ಪುಸ್ತಕ ಸಂಗ್ರಹಕ್ಕೆ ಭಾವನಾತ್ಮಕ ಆದರ್ಶ ಸಾಕು: ಆದರೆ ನಿರ್ವಹಣೆಗೆ ವಾಸ್ತವ ನೆಲೆಗಟ್ಟಿನ ಕ್ರಿಯಾತ್ಮಕ ಯೋಜನೆಗಳು ಬೇಕು. ೭೮ರ ಹರೆಯದ ನೀವು ಇನ್ನಾದರೂ ಪ್ರಾಯೋಗಿಕವಾಗಿ ಚಿಂತಿಸಬೇಕು. ‘ಪಾಂಡವಪುರದ ಪುಸ್ತಕಾಧೀಶ’ ಎಂದು ನಾನೊಮ್ಮೆ ಲೇಖನ ಬರೆದಿದ್ದೆ. ನಾನು, ನನ್ನಂಥವರು ತೋರುವ ಇಂಥ ಪ್ರೀತಿ, ನೆರವು ಸಹಕಾರಗಳಿಂದ ಹೆಚ್ಚಿನ ಲಾಭವಿಲ್ಲ. ವ್ಯಕ್ತಿ, ಸರ್ಕಾರ, ಸಮಾಜಗಳು ಕೂಡಾ ನಿಮಗೆ ಸ್ಪಂದಿಸಿವೆ. ಅದು ನಿಮಗೆ ಸಾಕಾಗುತ್ತಿಲ್ಲ. ನಿಮಗೆ ಹೆಚ್ಚು ಹಣ ಬೇಕು. ಡಿಜಿಟಲೀಕರಣ ಮತ್ತು ಕ್ಷೀಣವಾಗುತ್ತಿರುವ ಓದಿನ ಈ ಯುಗದಲ್ಲೂ ನಿಮ್ಮ ಗ್ರಂಥಾಲಯ ಅಮೂಲ್ಯ.ಈ “ಪದ್ಮಶ್ರೀ” ಬರಿಯ ಕಿರೀಟವೋ ಅಥವಾ ಬೇರೆ ಆರ್ಥಿಕ ಲಾಭಗಳಿವೆಯೋ ತಿಳಿಯೆ. ಆದರೆ ಈ ಸಂದರ್ಭವು ನಿಮ್ಮ ಸಮಸ್ಯೆಗೆ ರಾಜ್ಯ ರಾಷ್ಟ್ರ ಅಥವಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಹಾರ ದೊರಕಿಸುವ ದಾರಿಯೊಂದನ್ನು ದೊರಕಿಸಲಿ ಎಂದು ಆಶಿಸುತ್ತೇನೆ. ನಿಮ್ಮ ಆರೋಗ್ಯದ ಮೇಲೆ ನಿಗಾ ಇರಲಿ. ಪ್ರಶಸ್ತಿಗಾಗಿ ಅಭಿನಂದನೆಗಳು. ಪ್ರೀತಿಯಿಂದ ನಾಗತಿಹಳ್ಳಿ ಚಂದ್ರಶೇಖರ್ ಎನ್ನುವ ವಿಶೇಷ ಬರಹವನ್ನು ಹಂಚಿಕೊAಡಿದ್ದಾರೆ.
ಈ ಬರಹವು ಇದೀಗ ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಸಾಕಷ್ಟು ವೈರಲ್ ಆಗುತ್ತಿದೆ.
ವೃತ್ತಿಯಿಂದ ನಿವೃತ್ತರಾದರೂ ಅಕ್ಷರ ಸೇವೆಯಿಂದ ಅಂಕೇಗೌಡರು ನಿವೃತ್ತರಾಗಿಲ್ಲ. ಇಂದು ೨೦೨೬ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿದೆ. ಪ್ರಶಸ್ತಿಯ ಮೊತ್ತ ಅಥವಾ ಪ್ರಚಾರಕ್ಕಿಂತಲೂ ಜನರು ಪುಸ್ತಕಗಳನ್ನು ಓದಬೇಕು, ಜ್ಞಾನವಂತರಾಗಬೇಕು ಎಂಬುದು ಇವರ ಆಶಯ.
ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ, ಅಂಕೇಗೌಡರು ಕಟ್ಟಿರುವ ಈ ‘ಪುಸ್ತಕ ಮನೆ’ ಮನುಕುಲಕ್ಕೆ ದಾರಿದೀಪವಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಮನಸ್ಸು ಮಾಡಿದರೆ ಜಗತ್ತನ್ನೇ ಗೆಲ್ಲುವಂತಹ ಜ್ಞಾನದ ಭಂಡಾರವನ್ನೇ ನಿರ್ಮಿಸಬಹುದು ಎಂಬುದಕ್ಕೆ ಅಂಕೇಗೌಡರೇ ಶ್ರೇಷ್ಠ ಉದಾಹರಣೆ. ಅಲ್ಲವೇ?.

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb