– ಸುದ್ದಿಸಂಗಾತಿ ಧ್ವನಿ ನ್ಯೂಸ್
ಚಿತ್ರದ ಶೀರ್ಷಿಕೆಯೇ ಕುತೂಹಲ ಹುಟ್ಟಿಸುವಂತಿದ್ದು, DA LLB’ ಎಂಬ ಪದದ ಮೂಲಕ ಕಥೆಯಲ್ಲಿ ಕಾನೂನು, ನ್ಯಾಯ ಮತ್ತು ಮನರಂಜನೆಯ ವಿಶೇಷ ಮಿಶ್ರಣ ಇರಬಹುದೆಂಬ ನಿರೀಕ್ಷೆ ಮೂಡಿಸಿದೆ. ಇದೇ ಮೊದಲ ಬಾರಿಗೆ ಕೋಮಲ್ ವಕೀಲರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಇನ್ನೂ ಆಸಕ್ತಿದಾಯಕ ಸಂಗತಿ ಏನೆಂದರೆ, ನಿಜ ಜೀವನದಲ್ಲಿಯೂ ಕೋಮಲ್ ಕಾನೂನು ಶಿಕ್ಷಣ ಪಡೆದವರಾಗಿದ್ದು, ಹಲವು ವರ್ಷಗಳ ಬಳಿಕ ತೆರೆ ಮೇಲೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಅಭಿಮಾನಿಗಳಿಗೆ ಹೊಸ ಅನುಭವವಾಗಲಿದೆ ಎಂದು ಹೇಳಬಹುದು. ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿರುವ ಅವರ ಕರಿ ಕೋಟಿನ ಲುಕ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಕೋಮಲ್ ಅವರಿಗೆ ನಟಿಯರಾದ ಕಾಜಲ್ ಕುಂದರ್ ಮತ್ತು ಅಕ್ಷಿತಾ ಬೋಪಯ್ಯ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಆದಿಚುAಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮತ್ತು ಹಿರಿಯ ನಟರಾದ ನವರಸ ನಾಯಕ ಜಗ್ಗೇಶ್ ಅವರ ಹಾರೈಕೆಯೊಂದಿಗೆ ಚಿತ್ರದ ಮುಹೂರ್ತ ನೆರವೇರಿದ್ದು, ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಬೆಂಗಳೂರು, ಸಕಲೇಶಪುರ ಹಾಗೂ ಮಡಿಕೇರಿ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಜೂನ್ ಮೊದಲ ವಾರದಿಂದ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರವನ್ನು ಸಿದ್ದುçವ್ ಸಿದ್ದು ನಿರ್ದೇಶಿಸುತ್ತಿದ್ದು, ಈ ಹಿಂದೆ ‘ಮರೀಚಿ’ ಚಿತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದ ಅವರು, ವಿಜಯ ರಾಘವೇಂದ್ರ ಅಭಿನಯದ ಆ ಸಿನಿಮಾದಲ್ಲಿ ಭಾವನಾತ್ಮಕ ಅಂಶಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದರು.
ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದು, ಉಔಈ PIಅಖಿUಖಇS ಪ್ರೊಡಕ್ಷನ್ಸ್ ವತಿಯಿಂದ ಮೂಡಿ ಬರುತ್ತಿರುವ ಚಿತ್ರಕ್ಕೆ ಸಿದ್ದುçವ್ ಸಿದ್ದು, ಸಂತೋಷ್ ಮಾಯಪ್ಪ, ಪ್ರದೀಪ್ ಕುಮಾರ್, ಮಹಾಲಿಂಗಯ್ಯ ಮತ್ತು ರೇಣುಕಾ ಪ್ರಸಾದ್ ನಿರ್ಮಾಣ ಹೊಣೆ ಹೊತ್ತಿದ್ದಾರೆ. ಸಂಗೀತ ನಿರ್ದೇಶನವನ್ನು ರಿತ್ವಿಕ್ ಮುರಳಿಧರನ್ ಮಾಡುತ್ತಿದ್ದು, ಛಾಯಾಗ್ರಹಣದ ಜವಾಬ್ದಾರಿ ಉದಯ್ ಲೀಲಾ ಅವರ ಮೇಲಿದೆ.
ಪೋಸ್ಟರ್ ಹಾಗೂ ಆರಂಭಿಕ ಮಾಹಿತಿಗಳನ್ನು ಗಮನಿಸಿದರೆ, ಇದು ಕೇವಲ ಗಂಭೀರ ಕೋರ್ಟ್ ಡ್ರಾಮಾ ಆಗಿರದೆ, ಕೋಮಲ್ ಅವರ ಸಹಜ ಹಾಸ್ಯ ಝಲಕ್‌ನೊಂದಿಗೆ ಸಾಗುವ ಮನರಂಜನಾ ಚಿತ್ರವಾಗಿರಬಹುದೆಂಬ ಸುಳಿವು ಸಿಗುತ್ತದೆ. ನಗುವಿನ ನಡುವೆ ಅನೇಕ ವಿಚಾರ ಹೇಳುವ ಕಥೆಯೇ? ಅಥವಾ ನ್ಯಾಯದ ಹಾದಿಯಲ್ಲಿ ಕಾಮಿಡಿ ತಿರುವುಗಳ ಸಂಭ್ರಮವೇ? ಎಂಬ ಕುತೂಹಲಕ್ಕೆ ಉತ್ತರ ನೀಡಲು ಡಿಎ ಎಲ್.ಎಲ್.ಬಿ ಸಿದ್ಧವಾಗುತ್ತಿದೆ.


