ಬೆಂಗಳೂರು: ರಾಜರ್ಷಿ ಪ್ರಕಾಶನ ಮತ್ತು ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಹಾಗೂ ಜನಮನ ಸೇವಾ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ವಾರಪತ್ರಿಕೆ, ರಾಜುಪತ್ರಿಕೆ ಮುಖ್ಯ ಸಂಪಾದಕರು ಹಾಗೂ ಪತ್ರಿಕೋದ್ಯಮ, ಸಾಹಿತ್ಯ, ವೈಚಾರಿಕತೆಗಳಲ್ಲಿ ಮಹಾನ್ ಪ್ರತಿಭೆ ಎನಿಸಿದ್ದ ಬಿ.ವಿ. ವೈಕುಂಠರಾಜು ಅವರ ನೆನಪಿನಲ್ಲಿ “ಬಿ.ವಿ. ವೈಕುಂಠರಾಜು ೯೦” ಒಂದು ನೆನಪು-ಸಾಹಿತ್ಯ ಸಂವಾದ ಮತ್ತು ವಿವಿಧ ಲೇಖಕರ ಪುಸ್ತಕ ಬಿಡುಗಡೆ ಸಮಾರಂಭವನ್ನು ಮೇ 17 ರಂದು ಭಾನುವಾರ. ಸಂಜೆ ೪.೦೦ ಗಂಟೆಗೆ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಾಜರ್ಷಿ ಪ್ರಕಾಶನದ ಪ್ರಕಾಶಕರಾದ ಎಸ್. ಆರ್. ಗೋವಿಂದರಾಜು ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ಕೃತಿ ಲೋಕಾರ್ಪಣೆಯನ್ನು ಹಿರಿಯ ಸಾಹಿತಿಗಳು ಹಾಗೂ ಚಿಂತಕರಾದ ಪ್ರೊ. ಬರಗೂರು ರಾಮಚಂದ್ರಪ್ಪ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಲೇಖಕಿ, ಜಾನಪದ ತಜ್ಞೆ, ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ
ಕೆ.ಆರ್. ಸಂಧ್ಯಾರೆಡ್ಡಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತೆ ಮತ್ತು ಖ್ಯಾತ ಲೇಖಕಿ. ಭಾಗ್ಯ ಕೃಷ್ಣಮೂರ್ತಿ ವಹಿಸಲಿದ್ದಾರೆ. ಅತಿಥಿಗಳಾಗಿ ಆರ್. ಶ್ರೀಧರ್ ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್ ಆಫ್ ಭಾಗವಹಿಸಲಿದ್ದಾರೆ.
ಬೆಂ.ಉತ್ತರ ವಿಶ್ವವಿದ್ಯಾಲಯ ಪ್ರಾಧ್ಯಾಪಕರು (ನಿ) ಹಾಗೂ ಕುಲಸಚಿವರಾದ (ಮೌಲ್ಯಮಾಪನ) ಡಾ. ಸುಂದರ ರಾಜೇ ಅರಸು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂ.ನಗರ.ಜಿಲ್ಲೆ ಅಧ್ಯಕ್ಷರಾದ ಸೋಮಶೇಖರ್ ಗಾಂಧಿ, ಬೆಂ.ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ. ಪ್ರಕಾಶಮೂರ್ತಿ, ಪ್ರಗತಿಪರ ಚಿಂತಕರು ಹಾಗೂ ಅಧ್ಯಕ್ಷರು ಬಹುಮುಖಿ ಬಳಗದ ಅಧ್ಯಕ್ಷರಾದ ಹಡವನಹಳ್ಳಿ ವೀರಣ್ಣ ಗೌಡ, ಸಂಪಾದಕರು ಮತ್ತು ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಜೀವನ್ಮುಖಿ ಸುರೇಶ್, ಲೇಖಕರು ಮತ್ತು ಸುದ್ದಿ ಸಂಗಾತಿ ಧ್ವನಿ ಮಾಸ ಪತ್ರಿಕೆ ಸಂಪಾದಕರಾದ ಮಂಜುನಾಥ್ ದಂಡಿನಶಿವರ ಸಭೆಯಲ್ಲಿ ಉಪಸ್ಥಿತರಿರುವರು.
ಈ ಸಮಾರಂಭದಲ್ಲಿ ಲೇಖಕರಾದ ಹಡವನಹಳ್ಳಿ ವೀರಣ್ಣಗೌಡರ ಬಯಲ ಕುಸುಮದ ಪರಿಮಳ, ಮಂಜುನಾಥ್ ದಂಡಿನಶಿವರ ಬರೆದಿರುವ ಬರಹಗಳ ಹಾದಿಯಲ್ಲಿ, ಸಂಗಮೇಶ ಹುನಗುಂದ ಅವರ ಕಾವ್ಯ ಸಂಗಮ ಕೃತಿಗಳು ಬರಗೂರು ರಾಮಚಂದ್ರಪ್ಪ ಅವರಿಂದ ಬಿಡುಗಡೆಯಾಗಲಿವೆ ಎಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
