ಇದು ಮಂಜುನಾಥ್‌ ದಂಡಿನಶಿವರ ಸಂಪಾದಕತ್ವದಲ್ಲಿ ಪ್ರಸಾರವಾಗುತ್ತಿರುವ ವಿನೂತನ ವೆಬ್ಸೈಟ್.‌ ತಾಜಾ ಸುದ್ದಿಗಳನ್ನು ನೀವು ಇದರಲ್ಲಿ ಓದಬಹುದು. ಇದೇ ವೆಬ್‌ನಲ್ಲಿ ನಮ್ಮ ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯನ್ನೂ ಓದಬಹುದು.
ಪ್ರಮುಖ ಸುದ್ದಿಗಳನ್ನು ಓದಲು ನಮ್ಮ ವೆಬ್ಸೈಟ್‌ ನೋಡಿ...www.suddisangathidwani.in ಇದು ಸುದ್ದಿಸಂಗಾತಿ ಧ್ವನಿ ಕನ್ನಡ ಮಾಸ ಪತ್ರಿಕೆಯ ಅಧಿಕೃತ ವೆಬ್ಸೈಟ್‌ ಆಗಿದೆ. ನಿಮ್ಮ ಸುದ್ದಿಗಳು ನಮ್ಮ ವೆಬ್‌ ನಲ್ಲಿ ಪ್ರಕಟವಾಗಬೇಕೆ? ಹಾಗಾದರೆ ನಿಮ್ಮ ಸುದ್ದಿ ಮತ್ತು ಚಿತ್ರಗಳನ್ನು ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
ಸುದ್ದಿಸಂಗಾತಿ ಧ್ವನಿ ಮಾಸಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮ ಲೇಖನ, ಸಣ್ಣಕಥೆ, ಕವನ, ಹಾಸ್ಯಲೇಖನ, ಪುಸ್ತಕ ಪರಿಚಯ, ಪ್ರವಾಸಿ ಸ್ಥಳಗಳ ಪರಿಚಯ, ಆರೋಗ್ಯ, ಪ್ರಚಲಿತ ಮತ್ತು ರಾಜಕೀಯ ಬರಹಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಬರಹಗಳನ್ನು ಪೋಟೋಗಳೋಂದಿಗೆ ನಮಗೆ ಕಳುಹಿಸಿ. ನಮ್ಮ ಇಮೇಲ್‌ - suddisangathi@gmail.com
Skip to content
suddisangathi dwani
Menu
  • Home
  • Newsbeat
  • ಲೇಟೆಸ್ಟ್‌ ನ್ಯೂಸ್
  • Stories
  • E-PAPER
  • ಜಾಹೀರಾತು
Menu

ಬಿ. ವಿ. ವೈಕುಂಠರಾಜು@90

Posted on May 15, 2026May 15, 2026 by suddisangathi

ಪತ್ರಿಕೋದ್ಯಮ, ಸಾಹಿತ್ಯ, ವೈಚಾರಿಕತೆಗಳಲ್ಲಿ ಮಹಾನ್ ಪ್ರತಿಭೆ ಎನಿಸಿದ್ದ ಬಿ. ವಿ. ವೈಕುಂಠರಾಜು ಅವರು ಮೇ ೧೫, ೧೯೩೬ರಂದು ಚಿತ್ರದುರ್ಗ ಜಿಲ್ಲೆಯ ಗುಡ್ಡದ ರಂಗವ್ವನಹಳ್ಳಿಯಲ್ಲಿ ಜನಿಸಿದರು. ನಂತರದ ದಿನಗಳಲ್ಲಿ ಅವರ ಕುಟುಂಬವು ಚಿತ್ರದುರ್ಗದ ದೊಡ್ಡ ಪೇಟೆಗೆ ಸ್ಥಳಾಂತರಿಸಿತು. ವೈಕುಂಠರಾಜು ಬಡ ಕುಟುಂಬದಲ್ಲಿ ಹುಟ್ಟಿ ಕಷ್ಟಗಳಲ್ಲಿ ಬೆಳೆದು ಬಂದ ಪ್ರತಿಭಾನ್ವಿತರು.

ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ನಾಡು ಕಂಡ ಪ್ರಖರ ಪ್ರತಿಭೆಗಳಲ್ಲಿ ವೈಕುಂಠರಾಜು ಕೂಡ ಒಬ್ಬರು. `ತಾಯಿನಾಡು’ ಮೂಲಕ ಪತ್ರಿಕಾರಂಗಕ್ಕೆ ಧುಮುಕಿದ ವೈಕುಂಠರಾಜು, `ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಆ ಪತ್ರಿಕೆಯ ಪ್ರಖ್ಯಾತ `ಸಾಪ್ತಾಹಿಕ ಪುರವಣಿ’ ರೂಪಿಸುವಲ್ಲಿ ವೈಕುಂಠರಾಜು ಅವರ ಪಾತ್ರ ಹಿರಿದಾದುದು. ಪತ್ರಕರ್ತರಾಗಿ, ಸಾಹಿತಿಯಾಗಿ ಸಾಗಿಬಂದ ಅವರ ದಾರಿಯೇ ಭಿನ್ನವಾದುದು. ಅಪಾರ ಅನುಭವಗಳನ್ನು ಬೆನ್ನಿಗಿಟ್ಟುಕೊಂಡು ತಮ್ಮದೇ ಆದ `ವಾರಪತ್ರಿಕೆ’, `ರಾಜು ಪತ್ರಿಕೆ’, `ಗೋಧೂಳಿ’ ಮುಂತಾದ ಪತ್ರಿಕೆಗಳನ್ನು ಆರಂಭಿಸಿದ ವೈಕುಂಠರಾಜು, ನಾಡಿನ ಜನರ ದನಿಯಾಗಿ, ಮೆಚ್ಚಿನ ಪತ್ರಿಕೆಗಳನ್ನಾಗಿ ರೂಪಿಸುವಲ್ಲಿ ಸಾಕಷ್ಟು ಶ್ರಮ ಸುರಿದಿದ್ದರು. ಹಾಗೆಯೇ ಆರ್ಥಿಕವಾಗಿ, ದೈಹಿಕವಾಗಿ ದಣಿದಿದ್ದರು. ಕಂಡದ್ದು ಕಂಡ ಹಾಗೆ ಹೇಳುವ ಗುಣದಿಂದಾಗಿ ಟಿಪಿಕಲ್ ಎಂಬ ಖ್ಯಾತಿ ಗಳಿಸಿದ್ದರು. ವೈಕುಂಠರಾಜು ಅವರ `ಸಂಪಾದಕರ ಡೈರಿ’ ಅಂಕಣ ಪ್ರಖ್ಯಾತವಾಗಿತ್ತು. ಈ ಅಂಕಣ ಬರಹ ಪುಸ್ತಕ ರೂಪದಲ್ಲಿಯೂ ಮೂಡಿಬಂದಿದೆ. ನಂತರದ ದಿನಗಳಲ್ಲಿ ರಾಜು `ವಿಜಯ ಕರ್ನಾಟಕ’ದ `ಸಾಂಸ್ಕöÈತಿಕ ಲೋಕ’ ಅಂಕಣ ಮೂಡಿಸುತ್ತಿದ್ದರು.

ಕಥೆ, ಕಾದಂಬರಿ, ನಾಟಕ, ಚಿಂತನೆ ಹೀಗೆ ವಿವಿಧ ರೀತಿಯ ಸಾಧನೆ ಮಾಡಿದ ವೈಕುಂಠರಾಜು ಮೂವತ್ತಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಅವುಗಳಲ್ಲಿ `ಉದ್ಭವ’ ಮತ್ತು `ಆಕ್ರಮಣ’ ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ. `ಆಕ್ರಮಣ’ ಚಿತ್ರವನ್ನು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದರೆ, `ಉದ್ಭವ’ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದಾರೆ. `ಸನ್ನಿವೇಶ’ `ಕಾನನದೇವಿ’ ಅವರ ಹೆಸರಾಂತ ನಾಟಕಗಳು. ತಮ್ಮ ಅನಾರೋಗ್ಯದ ದಿನಗಳಲ್ಲಿ ಸಹಾ `ವಾರ್ಡ್ ನಂಬರ್ ೨೨೦’ ಎಂಬ ಕಾದಂಬರಿ ಬರೆದರು. `ತಹ ತಹ’ ಅವರ ಆತ್ಮಚರಿತ್ರೆಯಾಗಿದೆ. ಈ ಕೃತಿಯಲ್ಲಿ ಕರ್ನಾಟಕದ ಸಾಹಿತ್ಯ, ಸಾಂಸ್ಕöÈತಿಕ, ಕಲೆ, ಜನಜೀವನ, ರಾಜಕೀಯದ ಒಳಸುಳಿಗಳು, ಪತ್ರಿಕೋದ್ಯಮದ ಒಳ-ಹೊರಗುಗಳು ಅನಾವರಣಗೊಂಡಿವೆ. `ಆಧುನಿಕ ನೀತಿ ಕತೆಗಳು’, `ಸಿನಿಮಾತು’ ಮುಂತಾದವು ಅವರ ಇನ್ನಿತರ ಜನಪ್ರಿಯ ಕೃತಿಗಳಾಗಿವೆ.

ಹಲವಾರು ನಿಟ್ಟಿನಲ್ಲಿ ಸೇವೆ ಸಲ್ಲಿಸಿದ್ದ ವೈಕುಂಠರಾಜು ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ವೈಕುಂಠರಾಜು ಅವರಿಗೆ ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ವರ್ಧಮಾನ, ತರಂಗಿಣಿ ಪ್ರಶಸ್ತಿ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಸಂದಿದ್ದವು. ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಗೌರವವನ್ನು ಸಲ್ಲಿಸಿತ್ತು.

ವೈಕುಂಠರಾಜು ಜನವರಿ ೩೦, ೨೦೧೦ರಂದು ಈ ಲೋಕವನ್ನಗಲಿದರು. ತಮ್ಮ ದೇಹವನ್ನು ಕೂಡಾ ವೈದ್ಯಕೀಯ ಉದ್ದೇಶಗಳಿಗಾಗಿ ಬಳಕೆಯಾಗುವಂತೆ ಬದುಕಿದ ಹಿರಿಯ ಜೀವ ಅವರದು. ನಾಡಿನ ಕಳಕಳಿಯ ಧ್ವನಿಯಾಗಿ ವೈಕುಂಠರಾಜು ಅವರು ಭಿತ್ತಿಹೋದ ಚಿಂತನೆಗಳು ಅವರ ಅಭಿಮಾನೀ ಬಳಗದಲ್ಲಿ ನಿರಂತರವಾಗಿ ಉಳಿಯುವಂತದ್ದಾಗಿದೆ. ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.

****

ಬಿ.ವಿ. ವೈಕುಂಠರಾಜು ಸಂಪಾದಕತ್ವದಲ್ಲಿ ಬರುತ್ತಿದ್ದ ವಾರಪತ್ರಿಕೆ ಹಾಗೂ ಹರಿಣಿ ಸಿನಿ ಮಾಸಪತ್ರಿಕೆ ಗಳಲ್ಲಿ ಸಿನಿಮಾ ರಂಗಕ್ಕೆ ಸಂಬAಧಿಸಿದ ಪ್ರತಿ ಮಾಹಿತಿಯು ಹಾಗೂ ವಿಷಯಗಳು ವಸ್ತು ನಿಷ್ಠೆಯಿಂದ, ನಿಷ್ಪಕ್ಷಪಾತದಿಂದ ಕೂಡಿರುತ್ತಿದ್ದವು. ಯಾವ ಪತ್ರಿಕೆಯೂ ಮಾಡದ ಬಾಕ್ಸ ಆಫೀಸ್ ಮಾನದಂಡ ಅಂದರೆ ಕನ್ನಡ ಮತ್ತು ಹಿಂದಿ ಚಿತ್ರಗಳ ಪ್ರತಿ ವಾರದ ಗಳಿಕೆಯನ್ನು ಸರಿಯಾಗಿ ನೀಡುತ್ತಿದ್ದರು. ವಾರಪತ್ರಿಕೆಯ ಸಂಪಾದಕೀಯ ಕಾಲಂ ಪ್ರತಿವಾರವೂ ತುಂಬಾ ಚೆನ್ನಾಗಿ ಬರುತ್ತಿತ್ತು.

ವಾರಪತ್ರಿಕೆಯಲ್ಲಿ ಸಂಪಾದಕರ ಡೈರಿ ಬಹಳ ಅದ್ಬುತ ವಾಗಿ ಬರುತ್ತಿತ್ತು. ಜೊತೆಗೆ ರಾಜಕೀಯ ವಿಶ್ಲೇಷಣೆ ಅಂತೂ ಬಹಳ ನಿಖರವಾಗಿ ಬರೆಯುತ್ತಿದ್ದರು. ಅವರು ಬರೆದ ಆಧುನಿಕ ನೀತಿ ಕಥೆಗಳು ಅಂಕಣ ಅದ್ಬುತ, ಈಗಿನ ಪತ್ರಿಕೆಯವರಿಗೆ ಇವರ ನೆನೆಪೇ ಇಲ್ಲ. ವಾರಪತ್ರಿಕೆಯ ಯಶಸ್ಸಿನ ನಂತರ ಹರಿಣಿ ಎಂಬ ಸಿನಿಮಾ ವಾರ ಪತ್ರಿಕೆಯನ್ನು, ಕ್ರೀಡೆಗಾಗಿ ರಾಜು ಪತ್ರಿಕೆ ಇವುಗಳನ್ನು ಹೊರ ತಂದಿದ್ದರು. ಈ ಎರಡೂ ಪತ್ರಿಕೆಗಳೂ ಸಹ ತುಂಬಾ ಜನಪ್ರಿಯವಾಗಿದ್ದವು.

ಬಿ.ವಿ. ವೈಕುಂಠರಾಜು ರಾಜ್ಯದ ಪತ್ರಿಕಾರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. ಕಳೆದ ವರ್ಷ ಅವರ ನೆನಪಲ್ಲಿ ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ಭವನದ ಸಭಾಂಗಣಕ್ಕೆ ಬಿ.ವಿ.ವೈಕುಂಠರಾಜು ಸಭಾಂಗಣ ಎಂದು ನಾಮಕರಣ ಮಾಡಲಾಗಿದೆ.

– ಎಸ್.ಆರ್.ಗೋವಿಂದರಾಜು
ಪ್ರಕಾಶಕರು, ರಾಜರ್ಷಿ ಪ್ರಕಾಶನ

 

Leave a Reply Cancel reply

Your email address will not be published. Required fields are marked *

Download
Download

ನೂತನ ಪದಾಧಿಕಾರಿಗಳಿಗೆ ಸುದ್ದಿಸಂಗಾತಿಯ ಅಭಿನಂದನೆಗಳು

ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ನೇಮಗೊಂಡ ಗಾಂಧಿ ನೇತೃತ್ವದ ಪದಾಧಿಕಾರಿಗಳಿಗೆ ನಮ್ಮ ಪತ್ರಿಕೆಯಿಂದ ಅಭಿನಂದನೆ ಸಲ್ಲಿಸಲಾಯಿತು.

ವಿಶೇಷಾಂಕ ಬಿಡುಗಡೆ

ಸುದ್ದಿಸಂಗಾತಿ ಧ್ವನಿ ಪತ್ರಿಕೆಯ ಆರೋಗ್ಯ -ಆಧ್ಯಾತ್ಮ ವಿಶೇಷಾಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಲ

ಸುದ್ದಿಸಂಗಾತಿ ಧ್ವನಿ

Editor: D.N.Manjunath

suddisangathi@gmail.com

Categories

E-PAPER e magazine Health MANJUGANNADI Newsbeat Sports Stories Uncategorized ಅಂಕಣ- ಅಕ್ಕಡಿಸಾಲು ಆಚರಣೆಗಳು ಕಿರುತೆರೆ ಸುದ್ದಿ ಜಾಹೀರಾತು ಬಸವೇಶ್ವರ ಜಯಂತಿ ವಿಶೇಷ ಮಂಜುಗನ್ನಡಿ- ಅಂಕಣ ಲೇಟೆಸ್ಟ್‌ ನ್ಯೂಸ್ ಸಿನಿಮಾ ಸುದ್ದಿಗಳು

Tags

Business https://online.fliphtml5.com/enyby/ssd-april-26-ready/ Newsbeat Stories USA World ಸುದ್ದಿಸಂಗಾತಿ ದ್ವನಿ ಜೂನ್‌ 26ರ ಸಂಚಿಕೆ ಸುದ್ದಿಸಂಗಾತಿ ನ್ಯೂಸ್

Suddisangathi

Info Box

Click here to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Table of Contents
  1. ಸುದ್ದಿಸಂಗಾತಿ ಧ್ವನಿ
  2. Suddisangathi

Info Box

ಪತ್ರಿಕಾ ದಿನಾಚರಣೆಯಲ್ಲಿ ಗುರುತಿನ ಚೀಟಿ ವಿತರಿಸಿಸ ಸಚಿವರಾದ ರಾಮಲಿಂಗಾರೆಡ್ಡಿ.

©2026 suddisangathi dwani | Design: Newspaperly WordPress Theme

WhatsApp us

Website security powered by MilesWeb