ತುಮಕೂರು: ಕಲ್ಪತರು ಸಾಹಿತ್ಯ ಕಲಾ ಟ್ರಸ್ಟ್, ಬಹುಮುಖಿ ಬಳಗ ತುಮಕೂರು, ಕಲಾ ಮಾಧ್ಯಮ ತಂಡ ಇವರ ವತಿಯಿಂದ ರಾಜೇಶ್ವರಿ ತೇಜಸ್ವಿ ಅವರ ಕೃತಿ ಆಧಾರಿತ ನನ್ನ ತೇಜಸ್ವಿ ನಾಟಕ ಪ್ರದರ್ಶನ ಏಪ್ರಿಲ್ 11ರ ಶನಿವಾರ ಸಂಜೆ 4 ಗಂಟೆಗೆ ತುಮಕೂರಿನ ಕನ್ನಡ ಭವನದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಕಥಾ ಕೀರ್ತನಕಾರ ಡಾ. ಲಕ್ಷ್ಮಣದಾಸ್, ಲೇಖಕಿ ಬಾ.ಹ.ರಮಾಕುಮಾರಿ, ಸಾಹಿತ್ಯ ಪರಿಷತ್ ಅಧ್ಯಕ್ಷಕೆ.ಎಸ್.ಸಿದ್ದಲಿಂಗಪ್ಪ, ಉಗಮ ಶ್ರೀ ನಿವಾಸ್, ನೇತ್ರತಜ್ಞ ಡಾ.ದಿನೇಶ್ ಕುಮಾರ್, ಆರ್.ಪಿ.ಶಶಿಧರ್, ಚಂದ್ರಶೇಖರ ನಿರಂತರ, ಮಂಜುನಾಥ ದಂಡಿನಶಿವರ, ಎಂ.ವಿ.ಷಡಕ್ಷರಿ ಮೊದಲಾದವರು ಭಾಗವಹಿಸುವರು ಎಂದು ಕಾರ್ಯಕ್ರಮ ಆಯೋಜಕರಾದ ಹಡವನಹಳ್ಳಿ ವೀರಣ್ಣಗೌಡ ತಿಳಿಸಿದ್ದಾರೆ.
